ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ ತೀರ್ಥೋದ್ಭವಕ್ಕೆ ಸಿದ್ಧತೆ

ಕೊಡಗು, ಅಕ್ಟೋಬರ್ 17: ಜೀವನದಿ ಕಾವೇರಿ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಇಂದು ಮಧ್ಯರಾತ್ರಿ 12.59ಕ್ಕೆ ತೀರ್ಥೋದ್ಭವವಾಗಲಿದ್ದು, ಭಕ್ತರು ಈ ಪವಿತ್ರ ದೃಶ್ಯಕ್ಕೆ ಸಾಕ್ಷಿಯಾಗಲು ಕೊಡಗಿನತ್ತ ಧಾವಿಸುತ್ತಿದ್ದಾರೆ.

ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಹಲವೆಡೆಯಿಂದ ಜನರು ಕೊಡಗಿಗೆ ಆಗಮಿಸಿದ್ದಾರೆ. ಇಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ಸಂಜೆ ವೇಳೆಗೆ ಸಾವಿರಾರು ಭಕ್ತರು ತೀರ್ಥೋದ್ಭವ ನೋಡಲು ಬರಲಿದ್ದಾರೆ. ತೀರ್ಥೋದ್ಭವದ ನಂತರ ನಾನಾ ಪೂಜಾ ಕೈಂಕರ್ಯಗಳು ನಡೆಯಲಿವೆ. ಈ ಸಂದರ್ಭ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಲಾಗುವುದು.

Teerthodbhava At Talakaveri Today Midnight

ಹೊರರಾಜ್ಯದ, ದೇಶದ ನಾನಾ ಕಡೆಗಳಿಂದ ಭಕ್ತರು ಈ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಲಿದ್ದಾರೆ. ತಲಕಾವೇರಿಯಲ್ಲಿ ಭದ್ರತೆಗಾಗಿ ಸಿಸಿಟಿವಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದಾರಿ ದೀಪಗಳು, ಎಲ್ಇಡಿ ಬಲ್ಬ್​ಗಳನ್ನು ಅಳವಡಿಸಲಾಗಿದೆ. ಈ ಬಾರಿ ಮಧ್ಯರಾತ್ರಿ ತೀರ್ಥ ಉದ್ಭವಿಸುವುದರಿಂದ ಜನರ ಸಂಖ್ಯೆ ಕಡಿಮೆಯಿರುವ ಅಂದಾಜಿದೆ. ತೀರ್ಥೊದ್ಭವದ ನಂತರ ತಲಕಾವೇರಿಯಲ್ಲಿ 1 ತಿಂಗಳ ಕಾಲ ಜಾತ್ರೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+