Kodagu Rain: ಮುಗಿಲತ್ತ ದೃಷ್ಟಿನೆಟ್ಟ ಕೊಡಗಿನ ಬೆಳೆಗಾರರು..ಏಕೆ ಹೀಗಾಯಿತು?
ಮಡಿಕೇರಿ, ಏಪ್ರಿಲ್ 30: ಕಾವೇರಿ ತವರು ಕೊಡಗಿನಲ್ಲಿ ವರುಣನ ಕೃಪೆ ತೋರದ ಕಾರಣದಿಂದಾಗಿ ಯಾವುದೂ ಅಂದುಕೊಂಡಂತೆ ಆಗುತ್ತಿಲ್ಲ. ಈಗಾಗಲೇ ಮಳೆ ದೇವರು ಇಗ್ಗುತ್ತಪ್ಪ, ರೈತರ ಜೀವನಾಡಿ ಕಾವೇರಿಯ ಉಗಮಸ್ಥಾನ ತಲಕಾವೇರಿ, ಭಗಂಡೇಶ್ವರನ ಸನ್ನಿಧಿ ಭಾಗಮಂಡಲ ಸೇರಿದಂತೆ ಗ್ರಾಮಗಳಲ್ಲಿರುವ ವಿವಿಧ ದೇಗುಲಗಳಲ್ಲಿ ಮಳೆಗಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರಲಾಗುತ್ತಿದ್ದು, ವರುಣ ಇನ್ನೂ ಕೂಡ ಮನಪೂರ್ವಕ ಒಲವು ತೋರಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಜಿಲ್ಲೆಯಾದ್ಯಂತೆ ಮಳೆ ಸುರಿಯುತ್ತಿಲ್ಲ.
ವಾಡಿಕೆಯಂತೆ ಯಾವುದೂ ಆಗದ ಕಾರಣದಿಂದ ಬಿಸಿಲ ತಾಂಡವ ಎದ್ದು ಕಾಣಿಸುತ್ತಿದೆ. ಬಾರದ ಮಳೆಯಿಂದಾಗಿ ವಾತಾವರಣ ತಂಪಾಗದೆ. ಬಿಸಿಲ ಧಗೆಗೆ ಇಡೀ ಭೂಮಿ ಹೊತ್ತಿ ಉರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಒಂದು ಕಾಲದಲ್ಲಿ ಭಾರತದ ಸ್ವಿಡ್ಜರ್ ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದೆಲ್ಲ ಅನ್ವರ್ಥನಾಮಗಳಿಂದ ಕರೆಯಿಸಿಕೊಳ್ಳುತ್ತಿದ್ದ ಕೊಡಗು ಇದೆನಾ? ಎಂಬ ಸಂಶಯ ಮೂಡುತ್ತಿದೆ.

ಬೇಸಿಗೆಯ ಸಮಯದಲ್ಲಿಯೂ ತಂಪಾಗಿರುತ್ತಿದ್ದ ಕೊಡಗಿನಲ್ಲೀಗ ಬಿಸಿಲ ಝಳ ತತ್ತರಿಸುವಂತೆ ಮಾಡಿದೆ. ಜೊತೆಗೆ ಸರಿಯಾಗಿ ಮಳೆಯಾಗದೆ, ಅಂತರ್ಜಲ ಕುಸಿತವಾಗುತ್ತಿದ್ದು, ನೀರಿನ ಸೆಲೆಗಳು ಬತ್ತಲಾರಂಭಿಸಿವೆ. ಇನ್ನೊಂದೆಡೆ ಕಾಫಿ ಗಿಡಗಳು ಬಿಸಿಲ ಬೇಗೆಗೆ ಒಣಗಿ ಹೋಗುತ್ತಿವೆ. ಕಳೆದ ಎರಡು ವರ್ಷಗಳಿಂದ ಪ್ರತಿ ಬೇಸಿಗೆಯೂ ಕೊಡಗಿನ ಜನಕ್ಕೆ ಸಂಕಷ್ಟವನ್ನು ತಂದೊಡ್ಡುತ್ತಿದೆ.
ಬಿಸಿಲಿಗೆ ಕಾಫಿ ಗಿಡಗಳು ಒಣಗುತ್ತಿವೆ
ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುರುಚಲು ಕಾಡುಗಳು ಒಣಗುತ್ತಿದ್ದವು. ಆದರೆ ಫಸಲು ಬರುತ್ತಿದ್ದ ಕಾಫಿ ಗಿಡಗಳು ಒಣಗಿ ಸಾಯುವಷ್ಟರ ಮಟ್ಟಿಗೆ ಬಿಸಿಲ ಆರ್ಭಟವಿರುತ್ತಿರಲಿಲ್ಲ. ಆದರೆ ಬದಲಾದ ವಾತಾವರಣದಲ್ಲಿ ಅದರಲ್ಲೂ ಕಳೆದ ವರ್ಷಂದೀಚೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಅಲ್ಲಲ್ಲಿ ಗಿಡಗಳು ಒಣಗುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ. ಇದು ಭಯ ಹುಟ್ಟಿಸುತ್ತಿದೆ.
ಮೊದಲಿನಿಂದಲೂ ಬೇಸಿಗೆಯಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಮಳೆ ಸುರಿಯುತ್ತಿತ್ತು. ಆದರೆ ಈ ಬಾರಿ ಮಳೆ ಸುರಿಯಲೇ ಇಲ್ಲ. ಏಪ್ರಿಲ್ ನಲ್ಲಿ ಕೆಲವೆಡೆ ಮಳೆ ಸುರಿದಿದೆಯಾದರೂ ವಾತಾವರಣ ತಂಪಾಗುವಷ್ಟು ಮಳೆ ಸುರಿದಿಲ್ಲ. ಕೆಲವು ಕಡೆಗಳಲ್ಲಿ ನಾಲ್ಕಾರು ಹನಿ ಹಾಕಿ ಹೋಗಿದ್ದರಿಂದ ಇನ್ನಷ್ಟು ಧಗೆ ಹೆಚ್ಚಾಗಿ ಸಂಕಷ್ಟ ಎದುರಾಗಿದೆ. ಜತೆಗೆ ಜಿಲ್ಲೆಯ ಬಹುತೇಕ ಊರುಗಳಿಗೆ ಇದುವರೆಗೆ ಒಂದೇ ಒಂದು ಮಳೆ ಹನಿಯೂ ಬಿದ್ದಿಲ್ಲ.

ದೇವರಿಗೆ ಮೊರೆ ಹೋಗುತ್ತಿರುವ ಜನ
ಹಿಂದಿನ ಕಾಲದಲ್ಲಿ ಯುಗಾದಿ ವೇಳೆಗೆ ಹೆಚ್ಚಿನ ಮಳೆಯಾಗುತ್ತಿತ್ತು. ಮೇ ತಿಂಗಳ ಹೊತ್ತಿಗೆ ಇಡೀ ಭೂಮಿ ತೇವಾಂಶದಿಂದ ಕೂಡಿರುತ್ತಿತ್ತು. ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಆದರೆ ಈ ವರ್ಷದ ಕಥೆ ನೋಡಿದರೆ ಭಯವಾಗುತ್ತದೆ. ಸರಿಯಾಗಿ ಮಳೆಯಾಗದೆ, ನದಿ,ಕೆರೆ, ಕಟ್ಟೆಗಳಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ನೆಲಕಚ್ಚಿದ್ದು, ಬಂಡೆಕಲ್ಲುಗಳು ಕಾಣಿಸುತ್ತಿವೆ.
ತೊರೆಗಳು ಬತ್ತಿವೆ. ಕೆಲವರಿಗೆ ಕುಡಿಯುವ ನೀರಿನ ಮೂಲವಾಗಿದ್ದ ಬಾವಿಗಳು ಬತ್ತಲಾರಂಭಿಸಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕಾವೇರಿ ತವರಿನಲ್ಲಿಯೇ ನೀರಿಗಾಗಿ ಪರದಾಡ ಬೇಕಾದ ಪರಿಸ್ಥಿಗತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳು ಇಲ್ಲದಿಲ್ಲ. ಹೀಗಾಗಿಯೇ ಜಿಲ್ಲೆಯಲ್ಲಿರುವ ಎಲ್ಲ ದೇವಾಲಯಗಳಲ್ಲಿಯೂ ಜನ ಪೂಜೆ ಮಾಡಿ ಮಳೆ ಸುರಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.
ಮಳೆಯಿಲ್ಲದೆ ಹೆಚ್ಚುತ್ತಿರುವ ಬಿಸಿಲ ಧಗೆ
ಇಷ್ಟೆಲ್ಲ ಪೂಜೆ ಪ್ರಾರ್ಥನೆ ಮಾಡಿದರೂ ವರುಣ ಕೃಪೆ ತೋರುವಂತೆ ಕಾಣಿಸುತ್ತಿಲ್ಲ. ಪರಿಣಾಮ ಕಾವೇರಿ ತವರಲ್ಲಿಯೇ ಜಲಕ್ಷಾಮದ ಭೀತಿ ಶುರುವಾಗಿದೆ. ಕೊಡಗಿನಲ್ಲಿಯೇ ನೀರಿಗೆ ತೊಂದರೆಯಾಗಿ ಜಲ ಮೂಲವೇ ಹರಿದು ಬಾರದೆ ಹೋದರೆ ಮುಂದಿನ ಭೀಕರತೆ ಹೇಗಿರಬಹುದು? ಯೋಚಿಸಿದರೆ ಪರತಿಯೊಬ್ಬರಿಗೂ ಭಯವಾಗದಿರದು. ಕೆಲವು ದಿನಗಳ ಹಿಂದೆ ತಲಕಾವೇರಿ ಮತ್ತು ಭಾಗಮಂಡಲ ಸೇರಿದಂತೆ ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿತ್ತು.

ಇದಾದ ಬಳಿಕ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಸುರಿಯಿತಾದರೂ ಅದರಿಂದ ಯಾವುದೇ ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಒಮ್ಮೆ ಮಳೆ ಬಂದು ಹೋದ ಬಳಿಕ ಬಿಸಿಲ ಧಗೆಯೂ ಜಾಸ್ತಿಯಾಗಿದೆ. ಇದು ಕೃಷಿ ಮೇಲೆ ಪರಿಣಾಮ ಬೀರಿದೆ. ಕಾಫಿ ಗಿಡಗಳಲ್ಲಿ ಹೂವು ಅರಳಿದ್ದು, ಅದು ಮಿಡಿಕಚ್ಚ ಬೇಕಾದರೆ ಮಳೆಯ ಅಗತ್ಯವಿದೆ. ಮಳೆ ಬಾರದೆ ಹೋದರೆ ಒಣಗಿ ಹೋಗುತ್ತದೆ. ಆದರೆ ಹೂವಷ್ಟೆ ಬಿಸಿಲಿಗೆ ಒಣಗಿದರೆ ಮುಂದಿನ ವರ್ಷ ಸರಿ ಹೋಗಬಹುದು ಎಂದು ನೆಮ್ಮದಿ ಪಡಬಹುದಿತ್ತು.
ಮುಗಿಲತ್ತ ದೃಷ್ಟಿ ನೆಟ್ಟು ಕಾಯುವ ಜನ
ಇವತ್ತಿನ ಪರಿಸ್ಥಿತಿ ಅಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ಗಿಡವೇ ಬಿಸಿಲಿಗೆ ಒಣಗಿ ಸಾಯುತ್ತಿವೆ. ಗಿಡಗಳು ಬೆಳೆದು ಉತ್ತಮ ಫಸಲು ಕೊಡಬೇಕಾದರೆ ಹತ್ತಾರು ವರ್ಷಗಳೇ ಬೇಕಾಗುತ್ತವೆ. ಅಂತಹ ಗಿಡಗಳೇ ಒಣಗಿ ಹೋದರೆ ಬೆಳೆಗಾರನ ಪರಿಸ್ಥಿತಿ ಹೇಗಾಗಬಹುದು? ಇದುವರೆಗೆ ಅತಿವೃಷ್ಠಿಯಿಂದ ಇಲ್ಲಿನ ಕೃಷಿಕರು ಸಂಕಷ್ಟ ಪಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಅನಾವೃಷ್ಠಿಯಿಂದ ಸಂಕಷ್ಟ ಎದುರಾಗಿದೆ. ಪ್ರತಿ ದಿನವೂ ಮಳೆ ಬರುತ್ತಾ ಎಂದು ಮುಗಿಲತ್ತ ದೃಷ್ಟಿ ನೆಡುವುದು ಮಾಮೂಲಿಯಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications