ಹೋಂ ಸ್ಟೇನಲ್ಲಿ ವೇಶ್ಯವಾಟಿಕೆ, ಜೆಡಿಎಸ್ ಶಾಸಕರ ಮಗ ಬಂಧನ

Posted By:
Subscribe to Oneindia Kannada

ಮಡಿಕೇರಿ, ಸೆ. 14: ಕೊಡಗಿನ ಹೋಂ ಸ್ಟೇನಲ್ಲಿ ವೇಶ್ಯವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಜೆಡಿಎಸ್ ಶಾಸಕರೊಬ್ಬರ ಮಗ ಕೂಡಾ ಈ ನಾಲ್ವರ ಪೈಕಿ ಇರುವುದು ಪತ್ತೆಯಾಗಿದೆ.

ತುಮಕೂರಿನ ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಅವರ ಮಗ ವಕೀಲ ರಾಜೀವ್ ಅವರು ಬಂಧಿತ ಆರೋಪಿಯಾಗಿದ್ದಾರೆ.

Prostitution racket busted, JDS MLA’s son held

ಉಳಿದಂತೆ ಕುಶಾಲನಗರದಲ್ಲಿರುವ ಕೂರ್ಗ್ ರಿವರ್ ವ್ಯೂ ಹೋಂ ಸ್ಟೇನಲ್ಲಿ ಮಾಲೀಕ ಪ್ರಸನ್ನ, ಮಧು, ಮತ್ತು ರಾಜೀವ್ ಎಂಬುವರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಕುಶಾಲನಗರ ಇನ್ಸ್ ಪೆಕ್ಟರ್ ಕ್ಯಾತೇಗೌಡ ಹಾಗೂ ಗ್ರಾಮಾಂತರ ಎಸ್‍ಐ ಮಹೇಶ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಈ ನಾಲ್ವರನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ವೇಶ್ಯಾವಾಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ಎಲ್ಲರಿಗೂ ನ್ಯಾಯಾಂಗ ಬಂಧನ ಸಿಕ್ಕಿದೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prostitution racket busted in home stay in Madikeri four people nabbed which included son of Karnataka MLA. Tumakuru district Turuvekere JDS MLA MT Krishnappa's son K Rajeeva allegedly involved in the Prostitution racket.
Please Wait while comments are loading...