ರಾಷ್ಟ್ರಪತಿ ಭೇಟಿ; ಮಡಿಕೇರಿಯ ಹಲವು ಅಂಗಡಿ ಬಂದ್!

ಮಡಿಕೇರಿ, ಫೆಬ್ರವರಿ 02: ರಾಷ್ಟ್ರಪತಿ ರಾಮನಾಥ ಕೋವಿಂದ್ ಫೆಬ್ರವರಿ 6ರಂದು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಮಡಿಕೇರಿಯಲ್ಲಿ ಹಲವು ಅಂಗಡಿಗಳನ್ನು ಒಂದು ದಿನ ಬಂದ್ ಮಾಡಲು ಸೂಚನೆ ಕೊಡಲಾಗಿದೆ.

ಮಡಿಕೇರಿಯ ಜನರಲ್ ಕೆ. ಎಸ್. ತಿಮ್ಮಯ್ಯ ಸ್ಮಾರಕ ಭವನ ಉದ್ಘಾಟನೆ ಹಾಗೂ ತಲಕಾವೇರಿಗೆ ರಾಷ್ಟ್ರಪತಿಗಳು ಭೇಟಿ ನೀಡಲಿದ್ದಾರೆ. ಮಡಿಕೇರಿ ನಗರ, ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅಗತ್ಯ ಸಿದ್ಧತೆ ನಡೆದಿದೆ.

"ರಾಷ್ಟ್ರಪತಿಗಳು ಸಂಚರಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸುವ ಕಾರ್ಯ ಚುರುಕುಗೊಂಡಿದೆ. ಈಗಾಗಗಲೇ ಸ್ವಚ್ಛತಾ ಕಾರ್ಯವು ಆರಂಭವಾಗಿದೆ. ಗಿಡಗಂಟೆಗಳನ್ನು ಕಡಿಯುವುದು, ಶುಚಿತ್ವ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ" ಎಂದು ಪೌರಾಯುಕ್ತ ಎಸ್. ವಿ. ರಾಮದಾಸ್ ಮಾಹಿತಿ ನೀಡಿದ್ದಾರೆ.

Preparations Underway For Ramnath Kovind Visit

ನಗರಸಭೆ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಒಡಿಪಿ, ಧರ್ಮಸ್ಥಳ ಸ್ತ್ರೀಶಕ್ತಿ ಸಂಘ, ಲಯನ್ಸ್ ಕ್ಲಬ್, ಚೇಂಬರ್ ಆಫ್ ಕಾಮರ್ಸ್, ಗ್ರೀನ್ ಸಿಟಿ ಫೋರಂ, ಕ್ಲಬ್ ಮಹೀಂದ್ರ, ಹೋಟೆಲ್ ತಾಜ್, ಸಂತ ಮೈಕಲರ ಶಾಲೆ ಮತ್ತು ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಹೀಗೆ ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ 250 ಕ್ಕೂ ಹೆಚ್ಚು ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನಗರದಲ್ಲಿ ಹಳೇ ವಿದ್ಯುತ್ ಕಂಬಗಳನ್ನು ಬದಲಿಸಿ ಹೊಸ ಕಂಬಗಳನ್ನು ಅಳವಡಿಸುವುದು. ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವುದು ಮುಂತಾದ ಕಾರ್ಯಗಳು ತ್ವರಿತವಾಗಿ ನಡೆದಿವೆ.

ಭಾಗಮಂಡಲ-ತಲಕಾವೇರಿ ಮಾರ್ಗದ ರಸ್ತೆಯಲ್ಲಿ ವಿದ್ಯುತ್ ಮಾರ್ಗ ಸರಿಪಡಿಸುವ ಕಾರ್ಯ ನಡೆದಿದೆ. ಜಿಲ್ಲಾಧಿಕಾರಿ ಚಾರುಲತ ಸೋಮಲ್ ರಾಷ್ಟ್ರಪತಿಗಳ ಆಗಮನ ಹಿನ್ನೆಲೆ ವಿವಿಧ ಇಲಾಖೆಗಳು ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಅಂಗಡಿ ಬಂದ್‌ಗೆ ಸೂಚನೆ; ಮಡಿಕೇರಿ ಕಾರ್ಯಪ್ಪ ಕಾಲೇಜ್‌ನಿಂದ ಎಲ್.ಐ.ಸಿ, ರಾಜಾ ಸೀಟ್, ತಿಮ್ಮಯ್ಯ ವೃತ್ತ, ಈಸ್ಟ್ ಎಂಡ್, ಸರ್ಕಾರಿ ಬಸ್ ಡಿಪೋ, ಕಾರ್ಯಪ್ಪ ಸರ್ಕಲ್ ಮಾರ್ಗದ ರಸ್ತೆ ಬದಿಯ ಎಲ್ಲಾ ಅಂಗಡಿಗಳನ್ನು ಶನಿವಾರ ಮುಚ್ಚಲು ನಗರಸಭೆ ಸೂಚನೆ ನೀಡಿದೆ.

ಮೊದಲು ಶುಕ್ರವಾರ ಕೂಡ ಅಂಗಡಿ ಮುಚ್ಚುವಂತೆ ಸೂಚಿಸಿದ್ದ ನಗರಸಭೆ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಶನಿವಾರ ರಾಷ್ಟ್ರಪತಿಗಳು ಸಾಗುವ ರಸ್ತೆಯಲ್ಲಿ ಸಾಗುವ ಕಾರಣ ಬಂದೋಬಸ್ತ್‌ಗಾಗಿ ಔಷಧಿ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+