ಮಡಿಕೇರಿಯಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಖಾದರ್ ಪೊಲೀಸ್ ವಶಕ್ಕೆ

Posted By:
Subscribe to Oneindia Kannada

ಮಡಿಕೇರಿ, ಆಗಸ್ಟ್ 29: ಮಡಿಕೇರಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಉಗ್ರಾಣದಿಂದ 40 ಕೆ.ಜಿ. ದನದ ಮಾಂಸ ವಶಪಡಿಸಿಕೊಂಡಿರುವ ಪೊಲೀಸರು, ಉಗ್ರಾಣದ ನಿರ್ವಹಣೆ ನೋಡಿಕೊಳ್ಳುವ ಖಾದರ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಎರಡು ಅಪರಿಚಿತ ಲಗೇಜ್ ಬ್ಯಾಗ್ ನಲ್ಲಿ ದನದ ಮಾಂಸ ಇತ್ತು. ಅದನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಿಂದ ಕಳಿಸಲಾಗಿತ್ತು.

ಹಿಂದೂಪರ ಸಂಘಟನೆ ಕಾರ್ಯಕರ್ತರು ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಕಂಡಕ್ಟರ್ ಮೂಲಕ ಕಳಿಸಿದ ಬ್ಯಾಗ್ ಅನ್ನು ಖಾದರ್ ಪಡೆದಿದ್ದು, ಸ್ಥಳೀಯ ಪಶುವೈದ್ಯರು, ಇದು ದನದ ಮಾಂಸವೇ ಎಂದು ಖಾತ್ರಿ ಪಡಿಸಿದ್ದಾರೆ. ಸ್ವಾಮಿ ವಿವೇಕಾನಂದ ಜನಸೇವಾ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ದಾಖಲಿಸಿದ ದೂರಿನ ಆಧಾರದಲ್ಲಿ ಖಾದರ್ ನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.[ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್]

Muslim man charged with smuggling beef

ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಸ್ ಕಂಡಕ್ಟರ್ ಸಂಕಪ್ಪ ಅವರಿಗೆ ಬ್ಯಾಗ್ ನಲ್ಲಿ ಏನಿತ್ತು ಎಂಬುದು ತಿಳಿದಿರಲಿಲ್ಲ. ಹುಣಸೂರಿನಲ್ಲಿ ಅದನ್ನು ನವೀದ್ ಎಂಬಾತ ಬಸ್ ಗೆ ಹಾಕಿದ್ದಾನೆ. ಆತನಿಗಾಗಿ ಶೋಧ ನಡೆದಿದೆ. ಇದೇ ರೀತಿ ಹಲವು ತಿಂಗಳಿನಿಂದ ನಡೆಯುತ್ತಿತ್ತು. ಈ ರೀತಿ ವ್ಯವಹಾರ ಮಾಡಬೇಡ ಅಂತ ಖಾದರ್ ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಸಿಬ್ಬಂದಿ ನಾರಾಯಣ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madikeri police seized 40kg of beef in Madikeri KSRTC bus stand, registered a case against Khadar, who manages the cloakroom. Two unclaimed luggage bags contained beef, that was reportedly ferried from Hunsur in Mysuru district.
Please Wait while comments are loading...