Cauvery Theerthodbhava 2023: ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

ಕೊಡಗು, ಸೆಪ್ಟೆಂಬರ್‌ 20: ಕೊಡಗಿನ ಆರಾಧ್ಯದೈವ ಕಾವೇರಿ ತೀರ್ಥೋದ್ಭವಕ್ಕೆ ಈ ಬಾರಿಯ ಮಹೂರ್ತ ನಿಗದಿಯಾಗಿದೆ.

ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರತಿ ವರ್ಷದಂತೆ ಅಕ್ಟೋಬರ್‌ 17ರಂದು ಕಾವೇರಿ ತೀರ್ಥೋದ್ಭವಕ್ಕೆ ನಡೆಯಲಿದ್ದು, ಮಂಗಳವಾರ ಮಧ್ಯರಾತ್ರಿ 1:27ಕ್ಕೆ ಕರ್ಕಾಟಕ ಲಗ್ನದಲ್ಲಿ ಮಹೂರ್ತ ನಿಗದಿ ಮಾಡಲಾಗಿದೆ.

Muhurta Fixed For Talacauvery Theerthodbhava

ಈ ಬಾರಿ ಮಳೆಯ ಕೊರತೆಯಿಂದ ಕೃಷ್ಣರಾಜಸಾಗರ ಜಲಾಶಯ ತುಂಬಿಲ್ಲ. ಮತ್ತೊಂದೆಡೆ ತಮಿಳುನಾಡು ಕೂಡ ಕಾವೇರಿ ನೀರು ಹರಿಸಲಾಗುತ್ತಿದ್ದು, ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದೆ. ಈ ಜಂಜಾಟದ ನಡುವೆಯೇ ತೀರ್ಥೋದ್ಭವಕ್ಕೆ ಸಿದ್ದತೆಗಳು ಆರಂಭವಾಗಿದೆ.

ಕೊಡಗು ಮಾತ್ರವಲ್ಲದೇ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾನಾ ಭಾಗಗಳಿಂದ ಭಕ್ತರು ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಭಕ್ತರು ತೀರ್ಥೋದ್ಭವಕ್ಕೆ ಆಗಮಿಸಿ ಸ್ನಾನ ಮಾಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಕೊಡಗು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಆರಂಭಿಸಿದೆ.

ಅಕ್ಟೋಬರ್‌ 17ರಂದೇ ತೀರ್ಥೋದ್ಭವ ನಡೆಯುತ್ತದೆ. ಆದರೆ ಪ್ರತಿ ವರ್ಷ ಆರು ಗಂಟೆಯ ಲೆಕ್ಕದಲ್ಲಿ ನಡೆಯುತ್ತದೆ. ಹಿಂದಿನ ವರ್ಷ ಸಂಜೆ ನಡೆದಿದ್ದರೆ, ಈ ವರ್ಷ ಮಧ್ಯರಾತ್ರಿ. ಮರು ವರ್ಷ ಬೆಳಗಿನ ಜಾವ. ನಂತರದ ವರ್ಷದಲ್ಲಿ ಮಧ್ಯಾಹ್ನ ನಡೆಯುತ್ತದೆ. ಹೀಗೆ ಪ್ರತಿ ವರ್ಷ ಆರು ಗಂಟೆಯಲ್ಲಿ ಮುಹೂರ್ತ ಬದಲಾಗುತ್ತಾ ಹೋಗುತ್ತದೆ ಎನ್ನುವುದನ್ನು ಸ್ಥಳೀಯರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+