ಪೆಟ್ರೋಲ್ ಸುರಿದು 7 ಜನರನ್ನು ಕೊಂದವನು ಆತ್ಮಹತ್ಯೆಗೆ ಶರಣು

ಮಡಿಕೇರಿ, ಏಪ್ರಿಲ್ 6: ಕಳೆದ ಶುಕ್ರವಾರ ಮಧ್ಯರಾತ್ರಿ ದಕ್ಷಿಣ ಕೊಡಗಿನ ಮುಗುಟಗೇರಿ ಗ್ರಾಮದಲ್ಲಿ ಮನೆ ಮೇಲೆ ಪೆಟ್ರೋಲ್ ಸುರಿದು ಸುಟ್ಟು, 7 ಜನರನ್ನು ಬಲಿ ತೆಗೆದುಕೊಂಡಿದ್ದ ಭೋಜನ ದೇಹ ಮಂಗಳವಾರ ಮುಂಜಾನೆ ಹೆಣವಾಗಿ ಪತ್ತೆಯಾಗಿದೆ.

ಕುಡಿದ ಮತ್ತಿನಲ್ಲಿ ಮನೆ ಮೇಲೆ ಪೆಟ್ರೋಲ್ ಸುರಿದು ದಹನ ಮಾಡಿದ ಪ್ರಕರಣದ ಆರೋಪಿ ಭೋಜ ಆತ್ಮಹತ್ಯೆ ಮಾಡಿಕೊಂಡಿದ್ದು, ಮುಗುಟಗೇರಿ ಸಮೀಪದ ಕಾಫಿ ತೋಟದಲ್ಲಿ ಮೃತದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ.

Mugutageri: A Man Who Killed 7 People By Pouring Petrol Later Commit Suicide

ಭೋಜನ ದೇಹ ಕೃತ್ಯ ನಡೆದ ಅರ್ಧ ಕಿಲೋಮೀಟರ್‌ ದೂರದ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈತ ಕೃತ್ಯ ನಡೆದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಆರೋಪಿಯ ಆಡಿಯೋ ವೈರಲ್
"ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು" ಹೀಗೆಂದು ತನ್ನ ಮಗಳೊಂದಿಗೆ ಮೊಬೈಲ್ ಕರೆ ಮಾತನಾಡಿದವನು ಮುಗುಟಗೇರಿಯಲ್ಲಿ 7 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ದುಷ್ಕರ್ಮಿ ಬೋಜ.

ಮುಗುಟಗೇರಿಯ ಲೈನ್ ಮನೆಯ ಮೇಲೇರಿ ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಂದವನೇ ನಿಗೂಢ ಜಾಗದಿಂದ ತನ್ನ ಮಗಳಿಗೆ ಕರೆ ಮಾಡಿದ್ದಾನೆ. ಈ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾತು ಮುಂದುವರೆಸಿರುವ ಬೋಜ "ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು, ಈಗ ನಾನು ಕೂಡ ಸಾಯ್ತೀನಿ" ಎಂದು ಕರೆ ಕಟ್ ಮಾಡಿದ್ದಾನೆ.

ತನಿಖೆಯ ವೇಳೆ ಈ ಆಡಿಯೋ ತುಣುಕು ಬಹಿರಂಗಗೊಂಡಿದೆ. ಇದೀಗ ಬೋಜ ಆತ್ಮಹತ್ಯೆಗೆ ಶರಣಾಗಿರುವುದು ಖಾತ್ರಿಯಾಗಿದ್ದು, ಪೊನ್ನಂಪೇಟೆ ಸಮೀಪ ತಾನಿದ್ದ ಲೈನ್ ಮನೆಯ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ.

ಮತ್ತೊಂದೆಡೆ ಮೈಸೂರು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತೋಲ ಅವರ ಪತ್ನಿ ಭಾಗ್ಯ (28) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಮೃತಪಟ್ಟಿದ್ದರು. ಮುಗುಟಗೇರಿ ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ.

ಬೋಜನ ಸಾವಿನಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ 7 ಅಮಾಯಕರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಬೋಜನ ಮನೋಸ್ಥಿತಿಯ ಬಗ್ಗೆ ಸಮಾಜದಲ್ಲಿ ಧಿಕ್ಕಾರದ ಮನೋಭಾವನೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+