ಕೃಷಿ ಸಚಿವ ಕೃಷ್ಣಬೈರೇಗೌಡ ಭತ್ತ ನಾಟಿ ಮಾಡಿದ್ದೆಲ್ಲಿ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಡಗು, ಆಗಸ್ಟ್ 10: ಇತ್ತೀಚೆಗೆ ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಕೆಸರುಗದ್ದೆಯಲ್ಲಿ ನಾಟಿ ನೆಡುತ್ತಿರುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೊಂದಷ್ಟು ಲೈಕ್, ಕಾಮೆಂಟ್ ಗಳು ಬಂದಿದ್ದವು.

ಇಷ್ಟಕ್ಕೂ ಕೃಷಿ ಸಚಿವರು ನಾಟಿ ಮಾಡಿದ್ದಾದರೂ ಎಲ್ಲಿ ಎಂದು ಹುಡುಕಿ ಹೊರಟಾಗ ಒಂದಷ್ಟು ಮಾಹಿತಿ ಲಭ್ಯವಾಗಿತ್ತು.

Minister Krishna Byregowda enjoyed paddy cultivation, Kodagu

ಕೊಡಗಿನಲ್ಲಿ ಮಳೆಗಾಲವಾದ್ದರಿಂದ ಈಗ ಎಲ್ಲ ಕಡೆಯೂ ಭತ್ತದ ನಾಟಿ ಕಾರ್ಯ ನಡೆಯುತ್ತಿದೆ. ಇದನ್ನು ಇಲ್ಲಿನ ಕುಟುಂಬಗಳು ಹಬ್ಬದಂತೆ ಒಟ್ಟಾಗಿ ಸೇರಿಕೊಂಡು ಮಾಡುತ್ತವೆ.

ಸಾಮಾನ್ಯವಾಗಿ ಸೇನೆಯಲ್ಲಿ, ದೂರದ ಊರುಗಳಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ಇದೇ ಸಮಯದಲ್ಲಿ ರಜೆ ಹಾಕಿ ಬಂದು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ಖುಷಿ ಪಡುತ್ತಾರೆ.

ನಾಟಿ ಮುಗಿಸುವ ಕೊನೆಯ ದಿನ ಹಬ್ಬದಂತೆ ಭಕ್ಷ್ಯ, ಭೋಜನ ಸವಿದು ಸಂತಸ ಪಡುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದಿದ್ದು, ಈಗಲೂ ನಡೆಯುತ್ತಿದೆ.

Minister Krishna Byregowda enjoyed paddy cultivation, Kodagu

ಇದೀಗ ಕೃಷಿ ಸಚಿವರು ನಾಟಿ ನೆಟ್ಟಿರುವುದು ಕೊಡಗಿನ ನಾಪೋಕ್ಲು ಬಳಿಯ ಕರಡ ಗ್ರಾಮದ ನಿವಾಸಿ ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಎಂ.ಕುಟ್ಟಪ್ಪ ಅವರ ಗದ್ದೆಯಲ್ಲಿ ಎಂಬುದು ಬಯಲಾಗಿದೆ.

ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ನೋಡಿದರೆ ಇದರ ಹಿಂದೆ ಗೆಳೆತನದ ಗಾಢ ಸಂಬಂಧವಿರುವುದು ಗೋಚರಿಸುತ್ತದೆ.

Minister Krishna Byregowda enjoyed paddy cultivation, Kodagu

ಇಷ್ಟಕ್ಕೂ ಕೃಷಿ ಸಚಿವ ಕೃಷ್ಣಬೈರೇಗೌಡ ಹಾಗೂ ಪಾಂಡಂಡ ಎಂ.ಕುಟ್ಟಪ್ಪ ಅವರ ಪುತ್ರ ಬೋಪಣ್ಣ ಸ್ನೇಹಿತರಂತೆ. ಬೋಪಣ್ಣ ಅವರ ಗದ್ದೆಯಲ್ಲಿ ಹಿಂದೆ ನಾಟಿ ಓಟ ನಡೆಸಲಾಗುತ್ತಿತ್ತಂತೆ. ಆ ನಂತರ ನಿಂತು ಹೋಗಿತ್ತಾದರೂ ಕಳೆದ ನಾಲ್ಕು ವರ್ಷಗಳಿಂದ ಇದನ್ನು ಮತ್ತೆ ನಡೆಸಲಾಗುತ್ತಿದೆ.

ಈ ಸಂದರ್ಭ ಕುಟುಂಬಸ್ಥರೆಲ್ಲ ಒಟ್ಟಾಗಿ ಸೇರಿ ಸಂತೋಷಕೂಟವನ್ನು ನಡೆಸುತ್ತಾರೆ. ಅದರಂತೆ ಈ ವರ್ಷವೂ ಕೆಲ ದಿನಗಳ ಹಿಂದೆ ಕುಟುಂಬಸ್ಥರ ಸಮ್ಮಿಲನದ ಸಂತೋಷ ಕೂಟ ಏರ್ಪಡಿಸಲಾಗಿತ್ತು. ಇದಕ್ಕೆ ಅತಿಥಿಯಾಗಿ ಬಂದವರು ಬೋಪಣ್ಣ ಅವರ ಕಾಲೇಜು ಗೆಳೆಯ ಕೃಷಿ ಸಚಿವ ಕೃಷ್ಣಬೈರೇಗೌಡ.

Minister Krishna Byregowda enjoyed paddy cultivation, Kodagu

ಗೆಳೆಯನ ಮನೆಗೆ ಬಂದ ಸಚಿವರು ಇಲ್ಲಿನ ಕೆಸರು ಗದ್ದೆ ಮತ್ತು ಎಲ್ಲರೂ ಒಟ್ಟಾಗಿ ಸೇರಿ ನಾಟಿ ನೆಡುವುದನ್ನು ಕಂಡು ಪುಳಕಗೊಂಡರಲ್ಲದೆ, ಪ್ಯಾಂಟನ್ನು ಮಂಡಿ ತನಕ ಮಡಚಿ ಕೆಸರುಗದ್ದೆಗೆ ಇಳಿದೇ ಬಿಟ್ಟರು.

ಎಲ್ಲರ ಜೊತೆ ಸೇರಿ ನಾಟಿ ಮಾಡಿದರು. ಗದ್ದೆ ತುಂಬಾ ಓಡಾಡಿದರು. ಬಳಿಕ ಅಲ್ಲಿದ್ದ ಕೆರೆಯಲ್ಲಿ ಈಜಾಡಿದರು. ಗದ್ದೆಯಲ್ಲಿ ನಾಟಿ ಮಾಡಿದ ಬಳಿಕ ಅದರಲ್ಲಿ ನಡೆದ ಸಾಂಪ್ರದಾಯಿಕ ನಾಟಿ ಓಟವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

Minister Krishna Byregowda enjoyed paddy cultivation, Kodagu

ಇದು ಖಾಸಗಿ ಕಾರ್ಯಕ್ರಮವಾದ್ದರಿಂದ ಯಾರ ಕಿರಿಕಿರಿಯಿಲ್ಲದೆ, ಸಾಮಾನ್ಯರಂತೆ ಬೆರೆತು ಖುಷಿಪಟ್ಟರು. ಒಂದಷ್ಟು ಮಂದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ತೃಪ್ತರಾದರು.

ಅಂತೂ ಕೊಡಗಿನಲ್ಲಿ ನಡೆದ ನಾಟಿ ಕಾರ್ಯಕ್ಕೆ ಕೃಷಿ ಸಚಿವರಾಗಿ ಬಾರದೆ ಗೆಳೆಯನಾಗಿ ಬಂದು ಎಲ್ಲರೊಂದಿಗೆ ಬೆರೆತು ಹೋಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಅವರು ಕೆಸರುಗದ್ದೆಯಲ್ಲಿ ಸಂಭ್ರಮಿಸಿದ ಕ್ಷಣಗಳು ಚಿತ್ರಗಳಾಗಿ ಹರಿದಾಡಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Agriculture minister Krishna Byregowda enjoyed paddy cultivation in classmate's land in Kodag district Karada village near Napoklu.
Please Wait while comments are loading...