ಮೈಸೂರು-ತಲಶ್ಯೇರಿ ರೈಲು ಮಾರ್ಗಕ್ಕೆ ಕೊಡವರ ವಿರೋಧ

Posted By: Gururaj
Subscribe to Oneindia Kannada

ಕೊಡಗು, ಫೆಬ್ರವರಿ 12 : ಮೈಸೂರು-ತಲಶ್ಯೇರಿ ರೈಲು ಮಾರ್ಗ ಯೋಜನೆಗೆ ಕೊಡಗಿನಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಫೆ.18ರಂದು ಮೈಸೂರಿನಲ್ಲಿ ಪ್ರತಿಭಟನೆಯನ್ನು ನಡೆಸಲಿದ್ದಾರೆ.

ಈ ರೈಲು ಮಾರ್ಗ ಯೋಜನೆ ಬಗ್ಗೆ ಮೊದಲಿನಿಂದಲೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೊಡಗಿನ ಮೂಲಕ ಈ ಮಾರ್ಗ ಹಾದು ಹೋದರೆ ಅಪಾರ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂಬುದು ವಿರೋಧಕ್ಕೆ ಕಾರಣವಾಗಿದೆ.

ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಕೇರಳದ ಮಾಧ್ಯಮಗಳು ಯೋಜನೆ ಪರವಾರಿ ವರದಿಗಳನ್ನು ಪ್ರಸಾರ ಮಾಡುತ್ತಿದೆ.

Kodagu people opposing Mysuru-Thalassery railway line project

ರೈಲ್ವೆ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಫೆ.19ರಂದು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಡವ ಸಮಾಜ, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಗದ ವಿವರ : ಸುಮಾರು 182 ಕಿ.ಮೀ.ಉದ್ದದ ರೈಲು ಮಾರ್ಗವಿದಾಗಿದೆ. ಮೈಸೂರು-ಪಿರಿಯಾಪಟ್ಟಣ-ತಿತಿಮತಿ-ಬಾಳೆಲೆ-ಕುಟ್ಟ-ಮಾನಂದವಾಡಿ-ಕೂತುಪರಂಬು ಮೂಲಕ ರೈಲು ಮಾರ್ಗ ಕೇರಳದ ತಲಶ್ಯೇರಿಗೆ ತಲುಪಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A protest organized in Mysuru railway office on February 18, 2018 against Mysuru-Thalassery railway line. Kodava Samajas, elected representatives and various pro-people organizations opposing Mysuru-Thalassery railway line project.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ