ಕೊಡಗಿನಲ್ಲಿ ಬಿಜೆಪಿ ಎದುರು ಮಂಕಾದ ಕಾಂಗ್ರೆಸ್‍!

ಮಡಿಕೇರಿ, ನವೆಂಬರ್ 06; ಇತ್ತೀಚೆಗೆ ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಭಾರೀ ಸುದ್ದಿ ಮಾಡಿತ್ತು. ಜತೆಗೆ ಸಿದ್ದರಾಮಯ್ಯ ಅವರು ಸವಾಲ್ ಕೂಡ ಹಾಕಿ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದರು.

ಈ ಘಟನೆ ಬಳಿಕ ಕೊಡಗಿನತ್ತ ಕಾಂಗ್ರೆಸ್ ನಾಯಕರು ದೌಡಾಯಿಸಿ ಪಕ್ಷ ಸಂಘಟನೆಗೆ ಒತ್ತು ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಪರಿಣಾಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವ ಘಟಾನುಘಟಿ ನಾಯಕರಿದ್ದರೂ ಅವರು ಮಂಕಾದಂತೆ ಕಾಣಿಸುತ್ತಿದ್ದಾರೆ. ಬಹುಶಃ ಸಿದ್ದರಾಮಯ್ಯ ಅವರಿಗೆ ಆದ ಅವಮಾನವನ್ನು ಸವಾಲು ಆಗಿ ಸ್ವೀಕರಿಸಿ ಕೊಡಗಿನಲ್ಲಿ ಕಾಂಗ್ರೆಸ್‍ ಅನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ. ಜತೆಗೆ ಘಟನೆ ಬಳಿಕವೂ ಇಲ್ಲಿನ ಜನ ಕಾಂಗ್ರೆಸ್ ನ್ನು ಬೆಂಬಲಿಸಿದಂತೆ ಕಾಣಿಸುತ್ತಿಲ್ಲ.

ಇತ್ತೀಚೆಗೆ ಇಲ್ಲಿನ ಗ್ರಾಮ ಪಂಚಾಯಿತಿವೊಂದಕ್ಕೆ ನಡೆದ ಚುನಾವಣೆಯಲ್ಲಿ 17 ಸ್ಥಾನಕ್ಕೆ 16 ಸ್ಥಾನವನ್ನು ಬಿಜೆಪಿ ಗೆಲ್ಲುವ ಮೂಲಕ ಬೇರು ಮಟ್ಟದಿಂದ ಅದು ಗಟ್ಟಿಯಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಆದರೆ ಕಾಂಗ್ರೆಸ್ ತಳಮಟ್ಟದಿಂದಲೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಸಂಘಟನೆಯ ಕೊರತೆ ಕಾರಣ ಎನ್ನುವುದಂತು ನಿಜ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಾಯಕರಿಗೆ ಕೊರತೆಯಿಲ್ಲ. ಆದರೆ ಪಕ್ಷವನ್ನು ಒಟ್ಟಾಗಿ ಕೊಂಡೊಯ್ಯುವ ನಾಯಕರ ಕೊರತೆಯಿದೆ. ಪ್ರತಿಷ್ಠೆಯ ಕಾರಣದಿಂದ ಪಕ್ಷ ಛಿದ್ರವಾಗಿದೆ. ಬಿಜೆಪಿಯನ್ನು ಸೋಲಿಸುವ ಶಕ್ತಿಯನ್ನು ಇಲ್ಲಿನ ನಾಯಕರು ಕಳೆದುಕೊಳ್ಳುವಂತಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ವೇಳೆಯೇ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬುದು ಗೊತ್ತಾಗಿತ್ತು. ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕೊಡಗಿನ ಕಾಂಗ್ರೆಸ್‌ನಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಪಕ್ಷದ ಸಂಘಟನೆಗೆ ಒತ್ತುಕೊಡುತ್ತಾರೆ ಎಂದು ನಂಬಲಾಗಿತ್ತು. ಅವರು ಜಿಲ್ಲೆಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಬಹುದು ಎಂಬ ನಂಬಿಕೆಯಿತ್ತು. ಆದರೆ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕೊಡಗಿನ ಕಾಂಗ್ರೆಸ್ ಬಲಿಷ್ಠವಾಗಲೇ ಇಲ್ಲ.

ಕಾಂಗ್ರೆಸ್ ಸೋಲಿಗೆ ಕಾರಣವೇನು?

ಕಾಂಗ್ರೆಸ್ ಸೋಲಿಗೆ ಕಾರಣವೇನು?

ಕೊಡಗಿನಲ್ಲಿ ಕಾಂಗ್ರೆಸ್ ಅನ್ನು ದೂರವಿಡಲು ಏನೆಲ್ಲ ತಂತ್ರಗಳನ್ನು ಮಾಡಬೇಕೋ ಅದೆಲ್ಲವನ್ನು ಬಿಜೆಪಿ ಮಾಡಿದೆ. ಭಾವತಾತ್ಮಕವಾಗಿ ಜನ ಬಿಜೆಪಿ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಜಿಲ್ಲೆಯಲ್ಲಿ ಮೋದಿಯನ್ನು ಪ್ರೀತಿಸುವವರ ಸಂಖ್ಯೆ ಜಾಸ್ತಿಯಿದೆ. ಜತೆಗೆ ಗ್ರಾಮಪಂಚಾಯಿತಿಯಿಂದ ಆರಂಭವಾಗಿ ವಿಧಾನಸಭೆಯ ತನಕ ಬಿಜೆಪಿ ಪಾರುಪತ್ಯ ಸಾಧಿಸಿದೆ. ಹೀಗಿರುವಾಗ ಕಾಂಗ್ರೆಸ್ ತಳಮಟ್ಟದಿಂದ ಸಂಘಟನೆ ಮಾಡಿ ಚುನಾವಣೆ ಹೋಗಬೇಕಾಗಿದೆ. ಆದರೆ ಅದನ್ನು ಚುನಾವಣೆ ಕಾಲದಲ್ಲಿ ಕಾಂಗ್ರೆಸ್ ಮಾಡಲು ಹೊರಡುತ್ತಿರುವುದು ಸೋಲಿಗೆ ಕಾರಣವಾಗಿದೆ.

ಯುದ್ಧ ಕಾಲದಲ್ಲಿ 'ಕೈ' ಶಸ್ತ್ರಭ್ಯಾಸ

ಯುದ್ಧ ಕಾಲದಲ್ಲಿ 'ಕೈ' ಶಸ್ತ್ರಭ್ಯಾಸ

ಬಹುಶಃ ಕಳೆದ ವಿಧಾನಸಭಾ ಚುನಾವಣೆ ನಂತರ ಸ್ಥಳೀಯ ಕಾಂಗ್ರೆಸ್ ಮುಖಂಡರು ನಾವು ಎಲ್ಲಿ ಎಡವಿದ್ದೇವೆ? ಎಂಬುದನ್ನು ಒಟ್ಟಾಗಿ ಕುಳಿತು ಮನನ ಮಾಡಿಕೊಂಡಿದ್ದರೆ, ಈ ವೇಳೆಗೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಪಕ್ಷದ ನಾಯಕರಲ್ಲಿನ ಅಸಮಾಧಾನ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಿದೆ. ಚುನಾವಣೆಯ ಕಾಲ ಸಮೀಪಿಸುತ್ತಿರುವುದರಿಂದ ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಪಕ್ಷದಲ್ಲಿ ಕಾಣಿಸುತ್ತಿರುವ ನಾಯಕರ ಪೈಕಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಚುನಾವಣೆಯಲ್ಲಿ ಸೋತವರೇ.

ಜಿಲ್ಲಾ ನಾಯಕರಿಗೆ ಟಿಕೆಟ್ ನದ್ದೇ ಚಿಂತೆ

ಜಿಲ್ಲಾ ನಾಯಕರಿಗೆ ಟಿಕೆಟ್ ನದ್ದೇ ಚಿಂತೆ

ಈಗಿರುವ ನಾಯಕರ ಪೈಕಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಇವರೆಲ್ಲರಿಗೂ ಪಕ್ಷ ಸಂಘಟನೆಗಿಂತ ಹೆಚ್ಚಾಗಿ ಟಿಕೆಟ್ ಪಡೆಯುವುದರ ಬಗ್ಗೆಯೇ ಚಿಂತೆಯಾಗಿದೆ. ಒಂದು ವೇಳೆ ಪ್ರಭಾವ ಬಳಸಿ ಟಿಕೆಟ್ ಪಡೆದರೂ ಅವರಿಗೆ ಟಿಕೆಟ್ ವಂಚಿತ ನಾಯಕರು ಸಂಪೂರ್ಣವಾಗಿ ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇಲ್ಲದಾಗಿದೆ. ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಳಿಕ ಈ ಪ್ರಕರಣವನ್ನು ಕಾಂಗ್ರೆಸ್‌ನ ರಾಜ್ಯ ನಾಯಕರು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿ ಬಿಜೆಪಿಗೆ ಬಿಸಿ ಮುಟ್ಟಿಸಬಹುದೇನೋ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಯಾವುದೂ ಇಲ್ಲಿವರೆಗೆ ಆಗಿಲ್ಲ.

ಬಿಜೆಪಿಯನ್ನು ಮಣಿಸಲು ಸಾಧ್ಯವಾಗುತ್ತಾ?

ಬಿಜೆಪಿಯನ್ನು ಮಣಿಸಲು ಸಾಧ್ಯವಾಗುತ್ತಾ?

ಜಿಲ್ಲಾ ಕಾಂಗ್ರೆಸ್ ನಲ್ಲಿ ಪ್ರಾಮಾಣಿಕರಿಗೆ, ಪಕ್ಷ ಸಂಘಟನೆ ಮಾಡುವವರಿಗೆ ಅವಕಾಶವಿಲ್ಲದಂತಾಗಿದೆ. ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತಹ ಅರ್ಹತೆ ಇರುವ ವ್ಯಕ್ತಿಗೆ ಬ್ಲಾಕ್ ಮಟ್ಟದ ಅಧ್ಯಕ್ಷ ಸ‍್ಥಾನ ನೀಡಿದರೆ ಪಕ್ಷ ಹೇಗೆ ಉದ್ಧಾರವಾಗಲು ಸಾಧ್ಯ? ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಹಲವರು ನಿಭಾಯಿಸಿದ್ದಾರೆ. ಯಾರಿಂದಲೂ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಿಲ್ಲ. ಸದ್ಯ ಧರ್ಮಜ ಉತ್ತಪ್ಪ ಅಧ್ಯಕ್ಷರಾಗಿದ್ದಾರೆ. ಮುಂದಿನ ಚುನಾವಣೆಗೆ ಕೇವಲ ಆರು ತಿಂಗಳಷ್ಟೆ ಬಾಕಿಯಿದೆ. ಅವರು ಯಾವ ರೀತಿಯಲ್ಲಿ ಪಕ್ಷದ ಸಂಘಟನೆ ಮಾಡಿ ಬಿಜೆಪಿಗೆ ಸವಾಲ್ ಒಡ್ಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಒಮ್ಮತದ ಅಭ್ಯರ್ಥಿ ಆಯ್ಕೆ ಹೇಗೆ?

ಒಮ್ಮತದ ಅಭ್ಯರ್ಥಿ ಆಯ್ಕೆ ಹೇಗೆ?

ಕೊಡಗು ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿ ಕಂಡು ಬರುತ್ತಿರುವ ವೀಣಾ ಅಚ್ಚಯ್ಯ ಹಾಗೂ ಚಂದ್ರಕಲಾ ಪ್ರಸನ್ನ, ಅರುಣ್ ಮಾಚಯ್ಯ, ಜೀವಿಜಯ, ಚಂದ್ರಮೌಳಿ, ಮಂಥರ್ ಗೌಡ ಹೀಗೆ ಎಲ್ಲ ನಾಯಕರು ಬಿಜೆಪಿ ಶಾಸಕರ ಮುಂದೆ ಸ್ಪರ್ಧಿಸಿ ಸೋತವರೇ. ಇರುವ ಬೆರಳೆಣಿಕೆಯ ನಾಯಕರ ನಡುವೆ ಗೆಲ್ಲುವ ಕುದುರೆಯನ್ನು ಕಾಂಗ್ರೆಸ್‌ನ ರಾಜ್ಯ ನಾಯಕರು ಯಾವ ಅರ್ಹತೆ ಮೇಲೆ ಆಯ್ಕೆ ಮಾಡುತ್ತಾರೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಿಲ್ಲ ಎಂಬುದಂತು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+