ಮಡಿಕೇರಿ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿಗೆ ‘ಕೈ’ ಮಣೆ: ಕಾಂಗ್ರೆಸ್‌ ಲೆಕ್ಕಚಾರವೇನು?

ಮಡಿಕೇರಿ, ಏಪ್ರಿಲ್‌ 6: ಹಲವು ಸಮಯಗಳಿಂದ ನಡೆಯುತ್ತಿದ್ದ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ಮುಗಿದಿದ್ದು, ಸ್ಥಳೀಯ ನಾಯಕರನ್ನು ಬದಿಗೆ ತಳ್ಳಿ ಹೊರಗಿನ ನಾಯಕನಿಗೆ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಆ ಮೂಲಕ ಜಿಲ್ಲಾ ಕಾಂಗ್ರೆಸ್ ನಲ್ಲಿದ್ದ ಅಸಮಾಧಾನ ಶಮನವಾಗುತ್ತಾ? ಅಥವಾ ತುಪ್ಪ ಸುರಿದಂತಾಗುತ್ತಾ? ಎಂಬ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ಬಿಜೆಪಿಗೆ ಮಂಡಿಯೂರಿ ಬಹಳಷ್ಟು ವರ್ಷಗಳೇ ಕಳೆದಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ, ಜಿಲ್ಲಾ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯ ಬಲ್ಲ ಸಮರ್ಥ ನಾಯಕರಿಲ್ಲದಿರುವ ಕಾರಣದಿಂದ ಮತ್ತು ಸ್ಥಳೀಯ ನಾಯಕರಲ್ಲಿನ ಪೈಪೋಟಿಯಿಂದಾಗಿ ಹೊರಗಿನ ಯುವನಾಯಕನಿಗೆ ಟಿಕೆಟ್ ನೀಡಿ ಮಡಿಕೇರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕಾದ ಪರಿಸ್ಥಿತಿಗೆ ಬಂದಿರುವುದು ವಿಷಾದದ ಸಂಗತಿಯಾಗಿದೆ.

Karnataka Election 2023: Mantar Gowda Contesting From Madikeri Constituency

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಇವತ್ತು ಬಿಜೆಪಿ ಗಟ್ಟಿಯಾಗಿ ನೆಲೆಯೂರಿದ್ದರೆ ಅದಕ್ಕೆ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಗಳೇ ಸಾಕ್ಷಿ ಎಂದರೆ ತಪ್ಪಾಗಲಾರದು. ಕಾಂಗ್ರೆಸ್‌ನ ರಾಜ್ಯ ನಾಯಕರು ಕೂಡ ಜಿಲ್ಲೆಯ ನಾಯಕರಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ನಾಯಕರು ಮತ್ತು ಕಾರ್ಯಕರ್ತರನ್ನು ಒಂದಾಗಿಸುವ ಕೆಲಸ ಮಾಡಲಿಲ್ಲ.

ರಾಜ್ಯ ನಾಯಕರು ಹಲವು ಬಾರಿ ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ರಾಜ್ಯ ನಾಯಕರಿಗೂ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಒಂದು ಮಾಡಲಾಗದ ಬಿರುಕು ಇದೆ ಎಂಬುದು ಗೊತ್ತಾಗಿತ್ತು.

ಕೊಡಗಿನಲ್ಲಿ ಕಾಂಗ್ರೆಸ್‌ಗೆ ಲಾಭ?

ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ನಾಯಕರು ಮತ್ತು ಕಾರ್ಯಕರ್ತರನ್ನು ದೂರ ಇಟ್ಟಿದ್ದೇ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಲು ಕಾರಣವಾಯಿತು. ಮೂಲ ಕಾಂಗ್ರೆಸ್ ನಾಯಕರನ್ನು ಬದಿಗೆ ತಳ್ಳಿ ವಲಸಿಗರಿಗೆ ಮಣೆ ಹಾಕಿದ್ದು, ಮತ್ತೊಂದೆಡೆ ರಾಜ್ಯಮಟ್ಟದಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ನಾಯಕರು ಪಕ್ಷದಿಂದ ದೂರಸರಿದಿದ್ದು, ಇನ್ನು ಕೆಲವರು ಮೌನವಾಗಿ ಉಳಿದಿದ್ದು ಹೀಗೆ ಹತ್ತಾರು ವಿಚಾರಗಳು ಕೊಡಗಿನಲ್ಲಿ ಕಾಂಗ್ರೆಸ್ ಕ್ಷೀಣಿಸಲು ಕಾರಣವಾಯಿತು.

Karnataka Election 2023: Mantar Gowda Contesting From Madikeri Constituency

ಕೊಡಗಿನಲ್ಲಿ ಜನ ಪಕ್ಷ ನೋಡಿ ಮತ ಹಾಕುತ್ತಾರಾ? ಜಾತಿ, ಸಮುದಾಯ ನೋಡಿ ಮತ ನೀಡುತ್ತಾರಾ? ಎಂಬುದು ಜಿಜ್ಞಾಸೆಯಾಗಿಯೇ ಉಳಿದಿದೆ. ಏಕೆಂದರೆ ಇದುವರೆಗಿನ ಚುನಾವಣೆಗಳನ್ನು ಗಮನಿಸಿದರೆ ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕಿಂತ ಗೌಡ, ಇನ್ನಿತರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಕ್ಷೇತ್ರವನ್ನು ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಪ್ರತಿನಿಧಿಸುತ್ತಾ ಬಂದಿದ್ದಾರೆ. ಇನ್ನು ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಸಮುದಾಯದ ಪ್ರಾಬಲ್ಯವಿದೆ. ಆದರೆ ಆ ಕ್ಷೇತ್ರವನ್ನು ಗೌಡ ಸಮುದಾಯದ ಕೆ.ಜಿ.ಬೋಪಯ್ಯ ಪ್ರತಿನಿಧಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಏನಿರಬಹುದು?

ಇದನ್ನು ಗಮನಿಸಿದರೆ ಕೊಡಗಿನ ಜನ ಸಮುದಾಯ,ವ್ಯಕ್ತಿ ಎಲ್ಲವನ್ನು ಮೀರಿ ಪಕ್ಷವನ್ನು ನೋಡಿ ಮತಹಾಕುತ್ತಿದ್ದಾರೆ ಎನ್ನುವುದನ್ನು ಗಮನಿಸಲೇ ಬೇಕಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಹೊಸ ತಂತ್ರ ಮಾಡಿದೆ. ಕೊಡವ ಸಮುದಾಯದ ಎ.ಎಸ್.ಪೊನ್ನಣ್ಣ ಅವರನ್ನು ಕಾಂಗ್ರೆಸ್ ನಿಂದ ಕಣಕ್ಕಿಳಿಸಿದೆ. ಹಾಗೆಂದು ಇದೇನು ಹೊಸದೇನಲ್ಲ.

ಈ ಹಿಂದೆ ಕೊಡವ ಸಮುದಾಯದ ಅರುಣ್ ಮಾಚಯ್ಯ ಅವರ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೀಗ ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನತ್ತ ಜನ ವಿಶ್ವಾಸವಿಟ್ಟಿದ್ದಾರೆ. ಜತೆಗೆ ಕೊಡವ ಸಮುದಾಯದ ಅಭ್ಯರ್ಥಿಯೇ ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವುದರಿಂದ ಗೆಲುವು ಸುಲಭವಾಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಹೆಚ್ಚಿನ ಆಕಾಂಕ್ಷಿಗಳು ಇಲ್ಲದ ಕಾರಣದಿಂದ ಅಭ್ಯರ್ಥಿ ಘೋಷಣೆ ಸುಲಭವಾಗಿತ್ತು. ಆದರೆ ಮಡಿಕೇರಿ ಕ್ಷೇತ್ರದಲ್ಲಿ ಹಾಗಿರಲಿಲ್ಲ ಸುಮಾರು ಏಳು ಮಂದಿ ಟಿಕಟ್ ಗಾಗಿ ಕಾದು ಕುಳಿತಿದ್ದರು. ಅವರಲ್ಲಿ ಅಂತಿಮವಾಗಿ ಬಿ.ಎ.ಜೀವಿಜಯ, ಎಚ್‍.ಎಸ್.ಚಂದ್ರಮೌಳಿ, ಮಂಥರಗೌಡ ಅವರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಈ ಮೂವರಲ್ಲಿ ಸ್ಥಳೀಯರಾದ ಬಿ.ಎ.ಜೀವಿಜಯ ಮತ್ತು ಎಚ್‍್.ಎಸ್‍. ಚಂದ್ರಮೌಳಿ ಅವರನ್ನು ಬದಿಗೆ ತಳ್ಳಿ ಹಾಸನದ ಮಾಜಿ ಶಾಸಕ ಎ.ಮಂಜು ಅವರ ಪುತ್ರ ಮಂಥರಗೌಡರಿಗೆ ನೀಡಲಾಗಿದೆ.

ಮಡಿಕೇರಿ ಕ್ಷೇತ್ರದಲ್ಲಿ ಏನಾಗಬಹುದು?

ಇನ್ನು ಮಂಥರ ಗೌಡ ಅವರು ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇವರು ಜಿಲ್ಲೆಯವರಲ್ಲ ಎಂಬ ಅಸಮಾಧಾನ ಇಲ್ಲವೆಂದೆನಿಲ್ಲ. ಯುವ ನಾಯಕರಾಗಿರುವ ಇವರಿಗೆ ಹೈಕಮಾಂಡ್ ಮಣೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಅರೆಭಾಷೆ ಗೌಡರು ಸೇರಿದಂತೆ ಇತರೆ ಸಮುದಾಯದವರು ಹೆಚ್ಚಿದ್ದು, ಮಂಥರ ಗೌಡರನ್ನು ಕಣಕ್ಕಿಳಿಸಿದರೆ ಮತ ಸೆಳೆಯಬಹುದು ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಲೆಕ್ಕಾಚಾರವಾಗಿದ್ದು ಅದರಂತೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಇದು ವರ್ಕೌಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+