Virajpet Assembly Constituency: ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ, ಬೋಪಯ್ಯಗೆ ಟಿಕೆಟ್ ಅನುಮಾನ?
ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳ ಪೈಕಿ ಒಂದಾಗಿರುವ ವಿರಾಜಪೇಟೆಯಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅದು ಸಾಧ್ಯವಾಗುತ್ತೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದ ವಿಶ್ಲೇಷಣೆ..
1792ರಲ್ಲಿ ಕೊಡಗಿನ ಅರಸರಾಗಿದ್ದ ವೀರ ರಾಜೇಂದ್ರ ಅವರು ಕಟ್ಟಿದ್ದರಿಂದ ಕ್ಷೇತ್ರಕ್ಕೆ ವೀರ ರಾಜೇಂದ್ರ ಪೇಟೆ ಎಂದು ಹಿಂದೆ ಕರೆಯಲ್ಪಟ್ಟು ಈಗ ವಿರಾಜಪೇಟೆ ಎಂದು ಜನನಿತವಾಗಿದೆ. ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ವಿರಾಜಪೇಟೆಯು ಜಲಪಾತ ಮತ್ತು ಪ್ರಕೃತಿ ಸೌಂದರ್ಯದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರದಲ್ಲೊಂದಾಗಿದೆ.
ಬ್ರಿಟಿಷರು ಕಟ್ಟಿದ ಗಡಿಯಾರ ಕಂಬ, ಅದರ ಪಕ್ಕದಲ್ಲಿ ಗಣೇಶನ ಗುಡಿ, 250 ವರ್ಷಗಳಿಗೂ ಹಿಂದೆ ಕಟ್ಟಿದ ಸೈಂಟ್ ಏನ್ಸ್ ಚರ್ಚ್, ಅಲ್ಲಿಂದ ಸುಮಾರು ಒಂದು ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಕುಂದ ಬೆಟ್ಟ, ಗೋಣಿಕೊಪ್ಪಲಿನಲ್ಲಿರುವ ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ ಮುಂತಾದವು ಕ್ಷೇತ್ರದ ಪ್ರವಾಸಿ ತಾಣಗಳು.

ದೇಶದಲ್ಲೇ ಗಮನಾರ್ಹ ಎನ್ನುವ ಶೇ. 93.12 ಸಾಕ್ಷರತೆಯನ್ನು ಹೊಂದಿರುವ ವಿರಾಜಪೇಟೆಯಲ್ಲಿ, ಕೊಡವ ಪ್ರಮುಖ ಸಂವಹನ ಭಾಷೆಯಾಗಿದೆ. ಇದರ ಜೊತೆಗೆ, ಕನ್ನಡ, ಮಲಯಾಳಂ, ತುಳು ಭಾಷೆ ಕೂಡಾ ಇಲ್ಲಿನ ಪ್ರಮುಖ ಭಾಷೆಗಳಾಗಿವೆ. ಮೈಸೂರು ಲೋಕಸಭಾ ವ್ಯಾಪ್ತಿಗೆ ಬರುವ ವಿರಾಜಪೇಟೆಗೆ ಪ್ರಮುಖ ಹತ್ತಿರದ ವಾಣಿಜ್ಯ ಕೇಂದ್ರ ಮೈಸೂರು ಮತ್ತು ಕೇರಳದ ಕಣ್ಣೂರು. ಇಲ್ಲಿನ ಪ್ರಮುಖ ಬೆಳೆಗಳು ಕಾಫಿ, ಕರಿಮೆಣಸು, ಏಲಕ್ಕಿ ಮುಂತಾದವು. ಪ್ರವಾಸೋದ್ಯಮ ಜಿಲ್ಲೆಯ ಪ್ರಮುಖ ಆರ್ಥಿಕ ಮೂಲ ಕೂಡಾ..
2008ರಲ್ಲಿ ಕ್ಷೇತ್ರ ವಿಂಗಡಣೆಯ ನಂತರ ಸೋಮವಾರಪೇಟೆ ಕ್ಷೇತ್ರ ರದ್ದಾಗಿ ವಿರಾಜಪೇಟೆ ಮತ್ತು ಮಡಿಕೇರಿ ಮಾತ್ರ ಉಳಿದುಕೊಂಡಿದೆ. ಸತತವಾಗಿ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ ಅವರು ವಿರಾಜಪೇಟೆಯಿಂದ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಪೊನ್ನಂಪೇಟೆ ಮತ್ತು ಮಡಿಕೇರಿ ತಾಲೂಕಿನ ಕೆಲವೊಂದು ಪ್ರದೇಶಗಳೂ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಕೆ.ಜಿ.ಬೋಪಯ್ಯ ಹ್ಯಾಟ್ರಿಕ್ ಗೆಲುವು
ಕ್ಷೇತ್ರದ ಇತಿಹಾಸವನ್ನು ತಿರುವಿದಾಗ ಕೆ.ಜಿ.ಬೋಪಯ್ಯ ಹ್ಯಾಟ್ರಿಕ್ ಗೆಲುವು ಸಾಧಿಸಿದಂತೆ, ಈ ಹಿಂದೆ ಕಾಂಗ್ರೆಸ್ಸಿನ ಜಿ.ಕೆ.ಸುಬ್ಬಯ್ಯ ಕೂಡಾ (1972, 1978, 1983) ಗೆಲುವನ್ನು ಸಾಧಿಸಿದ್ದರು. ಕಾಂಗ್ರೆಸ್ಸಿನ ಸುಮಾ ವಸಂತ್ ಮೂರು ಬಾರಿ (1985, 1989, 1999) ಕ್ಷೇತ್ರದಿಂದ ಗೆಲುವನ್ನು ಕಂಡಿದ್ದಾರೆ. 1957-2018ರ ಅವಧಿಯಲ್ಲಿ ನಡೆದ ಒಟ್ಟು ಹದಿನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಎಂಟು, ಬಿಜೆಪಿ ಐದು ಮತ್ತು ಭಾರತೀಯ ಜನಸಂಘ ಒಮ್ಮೆ ಗೆಲುವನ್ನು ಸಾಧಿಸಿದೆ.
ಗುಜರಾತ್ ಮೊಡೆಲ್ ಟಿಕೆಟ್ ಹಂಚಿಕೆ ಪ್ರಯೋಗ
ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಸಜ್ಜಾಗಿರುವ ಕೊಂಬಾರಣ್ಣ ಗಣಪತಿ ಬೋಪಯ್ಯ ಕೊಡಗಿನ ಒಕ್ಕಲಿಗ(ಗೌಡ) ಕುಟುಂಬದವರು. ಕೊಡವರ ಮತವೇ ನಿರ್ಣಾಯಕವಾಗಿರುವುದರಿಂದ, ಬಿಜೆಪಿಯಲ್ಲಿ ಈಗ ಕೇಳಿ ಬರುತ್ತಿರುವ ಗುಜರಾತ್ ಮೊಡೆಲ್ ಟಿಕೆಟ್ ಹಂಚಿಕೆ ಪ್ರಯೋಗ ಇಲ್ಲಿ ನಡೆಯುವುದು ಅನುಮಾನ. 2013ರಲ್ಲಿ ಕಾಂಗ್ರೆಸ್ ಉತ್ತಮ ಪೈಪೋಟಿಯನ್ನು ನೀಡಿ ಸುಮಾರು ನಾಲ್ಕು ಸಾವಿರ ಮತಗಳ ಅಂತರದಿಂದ ಸೋಲುಂಡಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಕೆ.ಜಿ.ಬೋಪಯ್ಯ ತಮ್ಮ ಗೆಲುವಿನ ಲೀಡ್ ಅನ್ನು ಹದಿಮೂರು ಸಾವಿರಕ್ಕೆ ಏರಿಸಿಕೊಂಡಿದ್ದರು.
ಬಿಜೆಪಿ ಟಿಕೆಟಿಗೆ ಭಾರೀ ಪೈಪೋಟಿ
ಈ ಬಾರಿ ಬೋಪಯ್ಯ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಹೊಸಬರಿಗೆ ಟಿಕೆಟ್ ನೀಡಬೇಕೆನ್ನುವ ಒತ್ತಡ ಜಿಲ್ಲಾ ಬಿಜೆಪಿ ಘಟಕದಲ್ಲಿ ಹೆಚ್ಚಿದೆ. ಸಂಘ ಪರಿವಾರದ ಹಿನ್ನಲೆಯ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ರೀನಾ ಪ್ರಕಾಶ್, ಮಾಚಿಮಾಡ ರವೀಂದ್ರ, ಮನು ಉತ್ತಪ್ಪನವರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಕಾಂಗ್ರೆಸ್ಸಿನಿಂದ ವೀಣಾ ಅಚ್ಚಯ್ಯ, ಎ.ಎಸ್.ಪೊನ್ನಣ್ಣ, ಹರೀಶ್ ಬೊಪಣ್ಣ ಅವರ ಹೆಸರು ಚಾಲ್ತಿಯಲ್ಲಿದೆ.
ಕ್ಷೇತ್ರದ ಮತದಾರರ ಸಂಖ್ಯೆ (2018ರ ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ)
ಪುರುಷರು: 1,09,109
ಮಹಿಳೆಯರು: 1,08,337
ಇತರರು: 11
ಒಟ್ಟು ಮತದಾರರು: 2,17,457
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications