ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 29: ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೊಡಗಿನ ಯುವತಿ ಮೂಕೋಂಡ ಪ್ರೀತ್ ಆಗಸ್ಟ್ 26ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತರಪ್ರದೇಶದಲ್ಲಿ ಎಸ್ ಪಿಯಾಗಿ ನಿಯೋಜನೆಗೊಂಡಿದ್ದ ಅವರು, ನಂತರ ಐಆರ್ ಎಸ್ (ಇಂಡಿಯನ್ ರೆವೆನ್ಯೂ ಸರ್ವೀಸ್) ಉತ್ತೀರ್ಣರಾಗಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿದ್ದಾರೆ.

ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕೊಡಗಿನಲ್ಲಿ ಕಡಿಮೆಯಿದ್ದ ಕಾಲದಲ್ಲೇ ಪ್ರೀತ್ ಅವರು ಈ ಸಾಧನೆ ಮಾಡಿದ್ದರು. ನಿವೃತ್ತ ಎಸ್ ಪಿ ಅಮ್ಮತ್ತಿಯ ಮೂಕೋಂಡ ಗಣಪತಿ- ಗೌರಿ ದಂಪತಿ ಪುತ್ರಿ ಪ್ರೀತ್ ಗಣಪತಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]

IRS officer preeth married a software engineer

ಇದೀಗ ಸಾಫ್ಟ್ ವೇರ್ ಎಂಜಿನಿಯರ್ ಸಿದ್ದಾಪುರದ ದೇವಣಿರ ವಿಜಯ್- ಲೀಲಾ ದಂಪತಿ ಪುತ್ರ ಕೌಶಿಕ್ ಕಾರ್ಯಪ್ಪ ಅವರನ್ನು ವರಿಸಿದ್ದಾರೆ. ವೀರಾಜಪೇಟೆ ಸೆರಿನಿಟಿ ಹಾಲ್ ನಲ್ಲಿ ಕೊಡವ ಸಂಪ್ರದಾಯದಂತೆ ನಡೆದ ವಿವಾಹಮಹೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.[ದೇಹ, ಮನಸ್ಸುಗಳ ಉಲ್ಲಾಸಕ್ಕೆ ನಿಸರ್ಗಧಾಮಕ್ಕೆ ಭೇಟಿ...]

ಎಂಜಿನಿಯರಿಂಗ್ ಓದಿದ ಪ್ರೀತ್ ಬಳಿಕ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಂಡು, ಅದರಲ್ಲಿ ತೇರ್ಗಡೆಯಾಗಿ ಎಸ್ ಪಿಯಾಗಿ ಕೆಲ ಕಾಲ ಕೆಲಸ ಮಾಡಿದ್ದರು. ಆ ನಂತರ ಐಆರ್ ಎಸ್ (ಇಂಡಿಯನ್ ರೆವಿನ್ಯೂ ಸರ್ವೀಸ್) ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಅದರಲ್ಲಿ ಗೆಲುವಿನ ನಗೆ ಬೀರಿ ಇದೀಗ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

English summary
Preeth Officer in excise department, Bengaluru married a softare engineer Koushik kaariyappa in Veerajapete. Preeth native is Kodagu. She passed in UPSC, and served as SP in Uttarpradesh. After that cleared IRS and currently serving as an officer in excise department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X