ಕಟ್ಟಡ ಕುಸಿತದ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ
ಮಡಿಕೇರಿ, ಆಗಸ್ಟ್ 07: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತವಾದ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿ ಕಚೇರಿಯನ್ನು ಇಲ್ಲಿನ ನಗರ ಸಭಾ ಕಾರ್ಯಾಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
Recommended Video
Karnataka Rain : ನದಿ ಮದ್ಯೆ ಸಿಲುಕಿದ್ದ ಕೋತಿಗಳನ್ನು ರಕ್ಷಿಸಿದ ರೋಚಕ ದೃಶ್ಯ | Oneindia Kannada
ಹೆದ್ದಾರಿ ಪಕ್ಕದ ಗುಡ್ಡದ ಮೇಲಿರುವ ಜಿಲ್ಲಾಡಳಿತ ಭವನವನ್ನು 2014 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ಗಣಿ ಮತ್ತು ಭೂವಿಜ್ಞಾನ, ಕಾರ್ಮಿಕ, ಶಿಕ್ಷಣ, ಸರ್ವೇ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಜಿಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು.
14.43 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಜಿಲ್ಲಾಡಳಿತ ಭವನದಲ್ಲಿರುವ ಉಳಿದ ಇಲಾಖೆಗಳ ಕಚೇರಿಗಳನ್ನು ಸದ್ಯಕ್ಕೆ ಬಂದ್ ಮಾಡಲು ನಿರ್ಧರಿಸಲಾಗಿದೆ.

ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಜ್ಞರ ಸಲಹೆಯ ಮೇರೆಗೆ ಈ ಭವನವನ್ನು ಮುಚ್ಚಲಾಗುವುದು ಎನ್ನಲಾಗಿದೆ. ಮಳೆ ಇಳಿಮುಖವಾಗುವವರೆಗೂ ಜಿಲ್ಲಾಧಿಕಾರಿ ನಗರಸಭೆಯ ಕಚೇರಿಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ.












Click it and Unblock the Notifications