ಗುಂಡಿಕ್ಕಿಕೊಂಡು ಕಾಫಿ ವ್ಯಾಪಾರಿ ಆತ್ಮಹತ್ಯೆಗೆ ಶರಣು
Recommended Video
ಸಂಚಾರಿ ಪೊಲೀಸ್ ನಿಂದ ಹಲ್ಲೆಗೊಳಗಾದ ಟ್ರಕ್ ಚಾಲಕ ಸುನೀಲ್ ಹೇಳಿದ್ದೇನು ? | Oneindia Kannada
ಮಡಿಕೇರಿ, ಸೆಪ್ಟೆಂಬರ್ 29: ಕಾಫಿ ವ್ಯಾಪಾರಿಯೊಬ್ಬರು ತಮ್ಮ ಮಳಿಗೆಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಚ್ಚಿಯಂಡ ಸುನೀಲ್ (45) ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶನಿವಾರ ಸೆಪ್ಟೆಂಬರ್ 28ರಂದು ಹುದಿಕೇರಿಯ ಮಹಾದೇವ ದೇವಾಲಯ ಮುಂಭಾಗದ ತನ್ನ ಮಳಿಗೆಯಲ್ಲಿ ಅವರದೇ ರಿವಾಲ್ವರ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ 20 ವರ್ಷಗಳಿಂದ ಕಾಫಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದರು. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.












Click it and Unblock the Notifications