Get Updates
Get notified of breaking news, exclusive insights, and must-see stories!

ದಕ್ಷಿಣಕೊಡಗಿನ ಕುಂದಾ ಬೆಟ್ಟದಲ್ಲಿ ಪ್ರತ್ಯಕ್ಷವಾಯ್ತು ಬೃಹತ್ ಗಾತ್ರದ ಉಡಾ

ಮಡಿಕೇರಿ, ಅಕ್ಟೋಬರ್‌, 26: ಪಶ್ಚಿಮಘಟ್ಟದ ಅರಣ್ಯ ಪ್ರದೇಶಕ್ಕೆ ಸೇರುವ ಕೊಡಗಿನ ಅರಣ್ಯಗಳಲ್ಲಿ ಹಲವು ಬಗೆಯ ಜೀವ ಸಂಕುಲಗಳಿದ್ದು, ಅವು ಕೆಲವೊಮ್ಮೆ ಅರಣ್ಯ ದಾಟಿ ಕಾಫಿ ತೋಟಗಳ ಮೂಲಕ ನಾಡಿಗೆ ಬಂದು ಅಪರೂಪದ ದರ್ಶನ ನೀಡುವುದು ಹೊಸದೇನಲ್ಲ. ಇದೀಗ ದಕ್ಷಿಣಕೊಡಗಿನ ಕುಂದಾ ಗ್ರಾಮದಲ್ಲಿ ಭಾರೀ ಗಾತ್ರದ ಉಡವೊಂದು ಪ್ರತ್ಯಕ್ಷವಾಗಿದ್ದು ಎಲ್ಲರ ಗಮನಸೆಳೆದಿದೆ.

ಈ ಹಿಂದೆ ಜಿಲ್ಲೆಯ ಬೆಟ್ಟಗುಡ್ಡಗಳ ಅರಣ್ಯ ಪ್ರದೇಶದಲ್ಲಿ ಉಡ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದವು. ಒಂದೆರಡು ದಶಕಗಳ ಹಿಂದೆ ಅರಣ್ಯ ಪ್ರದೇಶಗಳು ಹೇರಳವಾಗಿದ್ದವು. ಆಗ ಏಲಕ್ಕಿ ತೋಟಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಈ ತೋಟಗಳಲ್ಲಿ ಹೇರಳ ಮರಗಿಡಗಳಿದ್ದವು. ಹೀಗಾಗಿ ವನ್ಯಪ್ರಾಣಿಗಳು ಅರಣ್ಯದಿಂದ ಹೊರಬಂದು ತೋಟಗಳಲ್ಲಿ ನೆಲೆವೂರುತ್ತಿದ್ದವು.

big-size-monitor-lizard

ಕಾಫಿ ಮುಕ್ತ ಮಾರುಕಟ್ಟೆಗೆ ಬಂದ ನಂತರ ಕಾಫಿಗೆ ಉತ್ತಮ ಬೆಲೆ ದೊರೆಯಲು ಆರಂಭಿಸಿತು. ಹೀಗಾಗಿ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಾಡು ಮಾಡಿದ ಬಳಿಕ ಬಹಳಷ್ಟು ಅರಣ್ಯ ನಾಶವಾಯಿತು. ಅಷ್ಟೇ ಅಲ್ಲದೆ, ಒಂದು ಕಾಲದಲ್ಲಿ ಪಾಳು ಬಿದ್ದಿದ್ದ ಜಮೀನುಗಳೆಲ್ಲವೂ ತೋಟಗಳಾಗಿ ಮಾರ್ಪಟ್ಟಿದ್ದರಿಂದ ಅರಣ್ಯದಾಚೆಗೂ ತೋಟ ಮತ್ತು ಅದರ ಸುತ್ತಮುತ್ತಲಿದ್ದ ಕಾಡುಗಳಲ್ಲಿ ನೆಲೆ ಕಂಡು ಕೊಂಡಿದ್ದ ಜೀವರಾಶಿಗಳು ಅತಂತ್ರವಾದವು.

ಇದೆಲ್ಲದರ ನಡುವೆ ಒಂದೆರಡು ದಶಕಗಳ ಈಚೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದ ಬಳಿಕವಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆಯೇ ಹೋಂಸ್ಟೇ ಮತ್ತು ರೆಸಾರ್ಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾದವು. ಜನರೇ ಹೋಗದಿದ್ದ ಸ್ಥಳಗಳಲ್ಲಿ ಅರ್ಥಾತ್ ಬೆಟ್ಟಗುಡ್ಡಗಳ ಮೇಲೆಯೂ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕಟ್ಟಡಗಳನ್ನು ನಿರ್ಮಿಸಿದರು.

ಇಷ್ಟೇ ಅಲ್ಲದೆ, ಭತ್ತದ ಗದ್ದೆಗಳು ಕೂಡ ನಿವೇಶನಗಳಾಗಿ ಅಲ್ಲಿ ಜನರು ವಾಸ್ತವ್ಯ ಹೂಡಿದರು. ಮೊದಲೆಲ್ಲ ಮನೆಗಳು ವಿರಳವಾಗಿದ್ದವು. ಹೀಗಾಗಿ ವನ್ಯಪ್ರಾಣಿಗಳು ತೋಟಗಳ ನಡುವೆ ಇರುವ ಬೆಳೆಗಾರರ ಮನೆಗಳ ಅಂಗಳಕ್ಕೆ ಬರುವಷ್ಟರ ಮಟ್ಟಿಗೆ ಸಮೃದ್ಧವಾಗಿತ್ತು. ಆದರೆ ಜಿಲ್ಲೆ ಅಭಿವೃದ್ಧಿ ಆಗುತ್ತಿದ್ದಂತೆಯೇ ವನ್ಯಪ್ರಾಣಿಗಳ ಪೈಕಿ ಕೆಲವು ಅರಣ್ಯ ಸೇರಿದರೆ ಮತ್ತೆ ಕೆಲವು ಕಳ್ಳ ಬೇಟೆಗಾರರಿಗೆ ಬಲಿಯಾದವು.

ಗಮನಸೆಳೆದ ಬೃಹತ್ ಗಾತ್ರದ ಉಡಾ

ಇವತ್ತಿಗೂ ಕೊಡಗಿನ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳ ನಡುವೆ ಹಲವು ಜಾತಿಯ ಪ್ರಾಣಿ, ಪಕ್ಷಿಗಳಿದ್ದು, ಕೆಲವು ಅರಣ್ಯದಿಂದ ಆಹಾರ ಅರಸಿಕೊಂಡು ಹೊರ ಬರುತ್ತಿದ್ದು, ಅವು ಕೆಲವೊಮ್ಮೆ ತೋಟಗಳ ನಡುವೆ ದಾರಿ ತಪ್ಪಿ ನಾಡಿಗೂ ಬಂದು ಬಿಡುತ್ತವೆ. ಹೀಗೆ ಬಂದ ಸಂದರ್ಭದಲ್ಲಿ ಕೆಲವೊಮ್ಮೆ ಜನರ ಕಣ್ಣಿಗೆ ಬಿದ್ದು ಸುದ್ದಿಯಾಗುತ್ತಿವೆ.

ಇದೆಲ್ಲದರ ನಡುವೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ಕುಂದ ಗ್ರಾಮದಲ್ಲಿ ಸುಮಾರು 6 ಅಡಿ ಉದ್ದದ ಬೃಹತ್ ಗಾತ್ರದ ಉಡಾ (monitor lizard) ಪತ್ತೆಯಾಗಿದೆ. ಸಮೀಪದ ಕುಂದ ಬೆಟ್ಟದಿಂದ ಬಂದಿರ ಬಹುದೆಂದು ಶಂಕಿಸಲಾಗಿದ್ದು, ಹೀಗೆ ಬಂದ ಉಡಾ ಅಲ್ಲಿನ ನಿವಾಸಿ ಕೊಡಂದೇರ ದಿಲೀಪ್ ಎಂಬುವರ ಮನೆಯ ಸಮೀಪದ ಕಾಂಪೌಂಡ್ ಹತ್ತುವ ಪ್ರಯತ್ನ ಮಾಡಿದ್ದು, ಇದನ್ನು ರಕ್ಷಿಸಿ ಸಮೀಪದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ವನ್ಯಪ್ರಾಣಿಗಳ ರಕ್ಷಣೆ ನಮ್ಮ ಹೊಣೆ

ಸಾಮಾನ್ಯವಾಗಿ ಅಲ್ಲಲ್ಲಿ ಚಿಕ್ಕ ಗಾತ್ರದ ಉಡಾವನ್ನು ನೋಡಿದವರು ಈಗ ಕಾಣಲು ಸಿಕ್ಕಿರುವ ಬೃಹತ್ ಗಾತ್ರದ ಉಡಾವನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಈ ರೀತಿ ಊರಿನೊಳಗೆ ಬಂದರೆ ಆ ಪ್ರಾಣಿಗಳಿಗೆ ತೊಂದರೆ ಆಗಬಹುದು. ಹೀಗಾಗಿ ಇಂತಹ ಪ್ರಾಣಿಗಳು ಕಂಡು ಬಂದರೆ ರಕ್ಷಿಸಿ ಕಾಡಿಗೆ ಬಿಡಬೇಕು ಎಂಬ ಮನವಿಯನ್ನು ಪ್ರಾಣಿ ಪ್ರಿಯರು ಮಾಡುತ್ತಿದ್ದಾರೆ.

ಇನ್ನು ಬೃಹತ್ ಗಾತ್ರದ ಉಡಾ ಕಾಣಿಸಿಕೊಂಡಿರುವ ಕುಂದಾ ಗ್ರಾಮವು ಬೆಟ್ಟ ಮತ್ತು ಅರಣ್ಯದಿಂದ ಕೂಡಿದೆ. ಕೊಡವ ಭಾಷೆಯಲ್ಲಿ ಕುಂದ್ ಎಂದರೆ ಬೆಟ್ಟ ಎಂದರ್ಥ. ಹೀಗಾಗಿ ಬೆಟ್ಟದಿಂದ ಕೂಡಿದ ಗ್ರಾಮ ಕುಂದಾ ಆಗಿದೆ. ಸಮುದ್ರ ಮಟ್ಟದಿಂದ 3,200 ಅಡಿ ಎತ್ತರವಿದೆ. ಈ ವ್ಯಾಪ್ತಿಯಲ್ಲಿ ಉಡಾ ಮಾತ್ರವಲ್ಲದೆ ಇನ್ನು ಹಲವು ಬಗೆಯ ವನ್ಯ ಜೀವಿಗಳಿಗೆ ಕುಂದಾ ವ್ಯಾಪ್ತಿಯ ಮರಗಿಡಗಳಿಂದ ಆವೃತವಾದ ಬೆಟ್ಟಗುಡ್ಡಗಳ ನಡುವೆ ಇದೆ. ಹೀಗಾಗಿ ಈ ಪ್ರದೇಶ ವನ್ಯಪ್ರಾಣಿಗಳಿಗೆ ಆಶ್ರಯತಾಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+