ಗೆಳೆಯ ಕರಣ್ ಮೇದಪ್ಪರನ್ನು ವರಿಸಿದ ಅಶ್ವಿನಿ ಪೊನ್ನಪ್ಪ

Posted By:
Subscribe to Oneindia Kannada

ಮಡಿಕೇರಿ, ಡಿಸೆಂಬರ್ 25: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ತಮ್ಮ ಗೆಳೆಯ ರೂಪದರ್ಶಿ ಕರಣ್ ಮೇದಪ್ಪ ಅವರನ್ನು ಭಾನುವಾರ(ಡಿಸೆಂಬರ್ 24) ದಂದು ವರಿಸಿದ್ದಾರೆ.

ಸುಮಾರು ಐದು ವರ್ಷಗಳ ಗೆಳೆತನ, ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ. ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಅಶ್ವಿನಿ ಹಾಗೂ ಕರಣ್ ಮದುವೆ ನೆರವೇರಿತು.ಕೆಂಪು ಸೀರೆಯಲ್ಲಿ ಅಪ್ಪಟ ಕೊಡವ ಯುವತಿಯಂತೆ ಅಶ್ವಿನಿ ಮಿಂಚಿದರು.

ನವೆಂಬರ್ ತಿಂಗಳಿನಲ್ಲಿ ಇಬ್ಬರ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಕೊಡವ ಸಂಪ್ರದಾಯದಂತೆ ಅಶ್ವಿನಿ ಮತ್ತು ಕರಣ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರೋಹನ್ ಬೋಪಣ್ಣ, ಜ್ಯೋತ್ಸ್ನ ಚಿನ್ನಪ್ಪ ಸೇರಿದಂತೆ ಆತ್ಮೀಯರು, ಬಂಧುಗಳು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನವದಂಪತಿಗೆ ಶುಭ ಹಾರೈಸಿದರು.

2011ರಲ್ಲಿ ಪೊನ್ನಪ್ಪ ಹಾಗೂ ಗುತ್ತಾ ಅವರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, 2014ರಲ್ಲಿ ಇಂಚಿಯಾನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದರು.

ಕರಣ್ ವರಿಸಿದ ಅಶ್ವಿನಿ ಪೊನ್ನಪ್ಪ

ಕರಣ್ ವರಿಸಿದ ಅಶ್ವಿನಿ ಪೊನ್ನಪ್ಪ

ಕೆಂಪು ಸೀರೆಯಲ್ಲಿ ಅಪ್ಪಟ ಕೊಡವ ಯುವತಿಯಂತೆ ಅಶ್ವಿನಿ, ಕರಣ್ ಅವರು ಸಾಂಪ್ರದಾಯಿಕ ಬಿಳಿವಸ್ತ್ರ ಧರಿಸಿ ಮಿಂಚಿದರು.

ಅಶ್ವಿನಿಗೆ ಶುಭಹಾರೈಕೆಗಳ ಮಹಾಪೂರ

ಬಾಡ್ಮಿಂಟನ್ ತಾರೆಅಶ್ವಿನಿಗೆ ಶುಭಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

ಕರಣ್ ಹಾಗೂ ಅಶ್ವಿನ್ ಮದುವೆ

ಕರಣ್ ಹಾಗೂ ಅಶ್ವಿನ್ ಮದುವೆ ಸಮಾರಂಭದ ಇನ್ನಷ್ಟು ಚಿತ್ರಗಳು ಇಲ್ಲಿವೆ

ಅಶ್ವಿನಿ ದಂಪತಿಗೆ ಶುಭಾಶಯ

ಅಶ್ವಿನಿ ದಂಪತಿಗೆ ಸಾರ್ವಜನಿಕರು, ಮಾಧ್ಯಮ ಸಂಸ್ಥೆ, ಅಭಿಮಾನಿಗಳಿಂದ ಶುಭಹಾರೈಕೆಗಳು ಬಂದಿವೆ.

ರೋಹನ್ ಬೋಪಣ್ಣರಿಂದ ಶುಭಹಾರೈಕೆ

ಟೆನಿಸ್ ಆಟಗಾರ ರೋಹನ್ ಬೋಪಣ್ಣರಿಂದ ಶುಭಹಾರೈಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Star badminton player Ashwini Ponnappa married long-time boyfriend and model Karan Medappa in a wedding ceremony in Kodagu (Coorg) on Sunday (December 24).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ