ದೇವೇಗೌಡರದು ಬ್ಲ್ಯಾಕ್‌ಮೇಲ್ ತಂತ್ರ: ಅಪ್ಪಚ್ಚು ರಂಜನ್
ಕೊಡಗು, ಜೂನ್ 21: ಮಧ್ಯಂತರ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ನೀಡಿರುವ ಹೇಳಿಕೆ ಕೇವಲ ಬ್ಲ್ಯಾಕ್ ಮೇಲ್ ತಂತ್ರ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕೂರುವ ಪ್ಲ್ಯಾನ್ ಇದು. ದೇವೇಗೌಡರಿಗೆ ಈ ರೀತಿಯ ಎಲ್ಲ ತಂತ್ರಗಳೂ ಗೊತ್ತಿವೆ. ಇದೇ ತಂತ್ರ ಬಳಸಿ ಅವರು ಕಾಂಗ್ರೆಸ್‌ನವರನ್ನು ಬೆದರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಬೇಕಾದ ಕೆಲಸವನ್ನು ಕೂಡ ಎಚ್ ಡಿ ದೇವೇಗೌಡರು ಮಾಡುತ್ತಾರೆ. ಮಧ್ಯಂತರ ಚುನಾವಣೆ ಆದರೆ ಸರ್ಕಾರಕ್ಕೆ ಹೊರೆಯಾಗುತ್ತದೆ. ಹೀಗಾಗಿ ಇನ್ನು ನಾಲ್ಕು ವರ್ಷ ಚುನಾವಣೆಗೆ ಹೋಗಬಾರದು ಎಂದು ಅಭಿಪ್ರಾಯಪಟ್ಟರು.

ದೇವೇಗೌಡರು ಚುನಾವಣಾ ಆಯುಕ್ತರ ರೀತಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಟೀಕಿಸಿದರು.
ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿಯಾದವರ ಮಾತಿನಲ್ಲಿ ಗಾಂಭೀರ್ಯ ಇರಬೇಕು. ಈಗ ಚುನಾವಣೆ ನಡೆದರೂ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅವರು ಹೇಳಿದರು.












Click it and Unblock the Notifications