ಸುಂಟಿಕೊಪ್ಪ ಬಳಿ ಸ್ಕಾರ್ಪಿಯೋ ಡಿಕ್ಕಿಯಾಗಿ ಬಾಲಕ ಸಾವು
ಹೊಸಕೋಟೆ ಬಳಿ ಸೋಮವಾರ ನಡೆದ ಭೀಕರ ಅಪಘಾತದಿಂದ ಏಳು ವರ್ಷದ ಬಾಲಕನೊಬ್ಬ ಅಸುನೀಗಿದ್ದಾನೆ.
ಮಡಿಕೇರಿ ಮಾರ್ಚ್ 21: ಹೊಸಕೋಟೆ ಮೇಟ್ನಳ್ಳ ಬಳಿಯಲ್ಲಿ ಸ್ಕಾರ್ಪಿಯೋ ವಾಹನಕ್ಕೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಾರ್ಚ್ 20 ಸೋಮವಾರ ದಂದು ನಡೆದಿದೆ.
ಮಂಗಳೂರಿನಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಮಹೇಂದ್ರ ಸ್ಕಾರ್ಪಿಯೋ(ಕೆಎ19ಎಂಎಂ3696) ವಾಹನವು 7ನೇ ಹೊಸಕೋಟೆಯ ಮೇಟ್ನಳ್ಳ ನಿವಾಸಿ ಮಹಮ್ಮದ್ ಇಸ್ಮಾಯಿಲ್ ಎಂಬುವವರ ಪುತ್ರ 7 ವರ್ಷದ ಇಸಾಕ್ ತನ್ನ ಸಂಬಂಧಿಕರ ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸಂದರ್ಭ ಸ್ಕಾರ್ಪಿಯೋ ವಾಹನಕ್ಕೆ ಸಿಲುಕಿ ರಸ್ತೆಗೆ ಬಿದ್ದ ಪರಿಣಾಮ ತಲೆ ಹಾಗೂ ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿತ್ತು. ಕೂಡಲೇ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡುವ ಸಂದರ್ಭ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.[ಮಡಿಕೇರಿ: ಪಿಕಪ್ ವಾಹನ ಪಲ್ಟಿ, 22 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ]

ಬಾಲಕ ಸಂತ ಮೇರಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದನು.[ಗುಂಡು ಹಾರಿಸಿಕೊಂಡು ಕೊಡಗು ಪ್ರಗತಿಪರ ಸಂಘದ ಅಧ್ಯಕ್ಷ ಆತ್ಮಹತ್ಯೆ]
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಅನೂಫ್ ಮಾದಪ್ಪ ಹಾಗೂ ಸಿಬ್ಬಂದಿ ತೆರಳಿ ಮಹಜರು ನಡೆಸಿ, ವಾಹನ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ನೀಡಲಾಯಿತು.












Click it and Unblock the Notifications