ಡಿಗ್ರಿ ಮುಗಿದ ತಕ್ಷಣ ಉದ್ಯೋಗದ ಹಿಂದೆ ಓಡ್ಬೇಡಿ:ಯೋಗಿ ಕಿವಿಮಾತು

Recommended Video

      ವಿದ್ಯಾರ್ಥಿಗಳಿಗೆ ಯೋಗಿ ಆದಿತ್ಯನಾಥ್ ಕಿವಿಮಾತು | Yogi Adiyanath | Oneindia kannada

      ಗೋರಖ್‌ಪುರ, ಆಗಸ್ಟ್ 23: ಡಿಗ್ರಿ ಮುಗಿದ ಕೂಡಲೇ ಉದ್ಯೋಗದ ಹಿಂದೆ ಓಡುವುದರ ಬದಲು ಸಮಾಜದ ಅಭಿವೃದ್ಧಿಗೆ ಶ್ರಮಿಸಿರಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

      ಮದನ್ ಮೋಹನ್ ಮಾಳವೀಯ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುರುಕುಲ ರೀತಿಯ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕು. ಯಾವಾಗಲೂ ಸತ್ಯವನ್ನೇ ಮಾತನಾಡುವ, ಸನ್ಮಾರ್ಗದಲ್ಲಿ ನಡೆಯುವುದರ ಜೊತೆಗೆ ಸ್ವಯಂ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ತೋರುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

      ಎಂಜಿನಿಯರ್ಗಳು ಹಲವು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿಯೊಬ್ಬರ ಮನೆಯಲ್ಲೂ ನೀರು ಯೋಜನೆಯಲ್ಲಿ ಕೈಜೋಡಿಸಬೇಕು.ಈ ಯೋಜನೆಯಡಿ 2024ರ ಹೊತ್ತಿಗೆ ಪ್ರತಿ ಮನೆಯಲ್ಲೂ ನೀರು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.

      Yogi Adityanath says Do Not Run Behind The Jobs

      ಸುಮಾರು 50 ಕೋಟಿಯಷ್ಟು ಮಂದಿ ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

      ಎನ್ಸಪಾಲಿಟಿ ಸಿಂಡ್ರೋಮ್(ಮೆದುಳು ಜ್ವರ)ಹೊರ ಬರಲು ಕಳೆದ 25 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. 1977ರಿಂದ 2017ರವರೆಗೂ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ.ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಕಷ್ಟು ಜಾಗೃತಿ ಅಭಿಯಾನವನ್ನು ನಡೆಸಿದ್ದೇವೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+