ಲೋಕಸಭೆ ಚುನಾವಣೆಗಾಗಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ತಂತ್ರ

ನವದೆಹಲಿ, ಜನವರಿ 21: ಪ್ರಯಾಗ್ ರಾಜ್ ನ ಕುಂಭಮೇಳ ಸಂಭ್ರಮದ ಜೊತೆಗೆ ಲೋಕಸಭೆ ಚುನಾವಣೆಗಾಗಿ ಸಿಎಂ ಯೋಗಿ ಆದಿತ್ಯನಾಥ್ ಹೊಸ ತಂತ್ರಗಳನ್ನು ಹೆಣೆಯುತ್ತಲೇ ಇದ್ದಾರೆ.

60 ವರ್ಷಗಳಿಗೂ ಮೇಲ್ಪಟ್ಟ ಹಿಂದು ಸ್ವಾಮೀಜಿಗಳಿಗೆ ಪಿಂಚಣಿ ನೀಡುವ ಯೋಜನೆಯನ್ನು ಯೋಗಿ ಆದಿತ್ಯ ನಾಥ್ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಹಿರಿಯ ನಾಗರಿಕರಿಗೆ ಸಿಗುವ ಪಿಂಚಣಿ ಯೋಜನೆಯನ್ನು ಹಿರಿಯ ಸಾಧು ಸಂತರಿಗೂ ವಿಸ್ತರಿಸಲಾಗಿದೆ. ಈ ಯೋಜನೆಯ ಲಾಭವನ್ನು ಸಾಧುಗಳಿಗೆ ತಲುಪಿಸಲು, ನೋಂದಣಿ ಕಾರ್ಯ ಆರಂಭಿಸಲಾಗಿದ್ದು, ಜನವರಿ 30ರೊಳಗೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಇದಲ್ಲದೆ, ನಿರ್ಗತಿಕ ಮಹಿಳೆಯರು, ದಿವ್ಯಾಂಗರಿಗೆ ಸಿಗುತ್ತಿದ್ದ 400 ರು ಗಳ ಪಿಂಚಣಿಯನ್ನು 500 ರು ಗಳಿಗೆ ಏರಿಸಲಾಗಿದೆ. ಪ್ರಯಾಗ್ ರಾಜ್ ಕುಂಭಮೇಳ ಆಯೋಜನೆಯನ್ನು ಯಶಸ್ವಿಗೊಳಿಸಿರುವ ಯೋಗಿ ಆದಿತ್ಯನಾಥ್ ಅವರು, ಲಕ್ಷಾಂತರ ಸಾಧು ಸಂತರು ಭಾಗವಹಿಸಿದ ಈ ಮೇಳದ ಯಶಸ್ಸಿನ ಫಲವಾಗಿ ಪಿಂಚಣಿ ಯೋಜನೆ ಘೋಷಿಸಿದ್ದಾರೆ.

Yogi Adityanath announces pension for Sadhus; Opposition levels appeasement charge

ಸಾಧು- ಸಂತರಿಗೆ 20 ಸಾವಿರ ಪ್ರತಿ ತಿಂಗಳು ನೀಡಲು ಯೋಗಿ ಮುಂದಾಗಿದ್ದಾರೆಯೇ? ರಾಮ, ಸೀತೆ, ಲಕ್ಷ್ಮಣ ಪಾತ್ರ ಮಾಡುವ ಕಲಾವಿದರನ್ನು ಪಿಂಚಣಿ ಯೋಜನೆಗೆ ಸೇರಿಸಿ, ಅವರಿಗೂ ಹಣ ಅವಶ್ಯ ಎಂದು ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಟೀಕೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+