ಪತಿಯ ಜೊತೆ ಕಲಹ: ಐವರು ಮಕ್ಕಳನ್ನು ಗಂಗಾ ನದಿಗೆ ತಳ್ಳಿದ ತಾಯಿ
ಲಕ್ನೋ, ಏಪ್ರಿಲ್ 13: ಪತಿಯ ಜೊತೆ ಜಗಳವಾಡಿ ಅದೇ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಂಡಿದ್ದಾಳೆ.
ಮಹಿಳೆ ಕೋಪಕ್ಕೆ ಬುದ್ಧಿಕೊಟ್ಟು ಐವರು ಮಕ್ಕಳನ್ನು ಗಂಗಾನದಿಗೆ ತಳ್ಳಿರುವ ಘಟನೆ ಜಹಂಗೀರಾಬಾದ್ ಘಾಟ್ ಬಳಿ ನಡೆದಿದೆ.ಮಂಜು ಯಾದವ್ ಮಕ್ಕಳನ್ನು ನದಿಗೆ ಎಸೆದಿದ್ದಾಳೆ. ಕಳೆದ 1 ವರ್ಷದಿಂದ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.
ಮಕ್ಕಳನ್ನು ಕೊಲ್ಲುವ ಉದ್ದೇಶದಿಂದಲೇ ಮಂಜು ಯಾದವ್ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಶನಿವಾರ ರಾತ್ರಿ ಪತಿ ಮೃದುಲ್ ಯಾದವ್ ಜೊತೆ ಮಂಜು ಜಗಳ ಮಾಡಿಕೊಂಡಿದ್ದಳು. ಭಾನುವಾರ ಮಕ್ಕಳನ್ನು ನದಿಗೆ ಎಸೆದಿದ್ದಾಳೆ.

ಮಕ್ಕಳು ಕಿರುಚಿತ್ತಿದ್ದಾಗ ರಕ್ಷಿಸದೇ ಓರ್ವ ಮಹಿಳೆ ಓಡಿ ಪರಾರಿಯಾಗುತ್ತಿದ್ದಳು ಎಂದು ಮೀನುಗಾರರು ಪೊಲೀಸರಿಗೆ ತಿಳಿಸಿದ್ದರು.ಇಲ್ಲಿಯವರೆಗೆ 11 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಉಳಿದ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಹಿಳೆ ಮನೆ ನದಿ ದಡದಲ್ಲೇ ಇದೆ. ಆರಂಭದಲ್ಲಿ ಆರು ಮಂದಿ ನದಿಗೆ ಹಾರಿದ್ದು, ಈಕೆ ಪಾರಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ನಂತರ ಈಕೆಯೇ ಮಕ್ಕಳನ್ನು ನದಿಗೆ ದೂಡಿರುವ ವಿಚಾರ ಖಚಿತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications