ಔಷಧ ತರಲು ಹಣ ಕೇಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್
ಹಾಪುರ, ಆಗಸ್ಟ್ 13: ಆರೋಗ್ಯ ಹದಗೆಟ್ಟಿದೆ ಮಾತ್ರೆ ತೆಗೆದುಕೊಳ್ಳಬೇಕು 30 ರೂಪಾಯಿ ಇದ್ರೆ ಕೊಡಿ ಎಂದು ಪತಿಯನ್ನು ಕೇಳಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
ಹೌದು ಈಗಂತೂ ವಿಚ್ಛೇದನ ನೀಡುವುದಕ್ಕೆ ಕಾರಣವೇ ಬೇಕಿಲ್ಲ, ಸಣ್ಣ ಪುಟ್ಟ ಕಾರಣಕ್ಕೂ ಡಿವೊರ್ಸ್ ನೀಡುವುದೇ ಪರಿಹಾರ ಎಂದುಕೊಂಡವರು ಸಾಕಷ್ಟಿದ್ದಾರೆ. ಆದರೆ ಒಟ್ಟಿಗೆ ಬದುಕಲೂ ಸಾವಿರ ಕಾರಣಗಳಿರುತ್ತವೆ ಎನ್ನುವುದನ್ನು ಅವರು ಮರೆತಿರುತ್ತಾರೆ.
''ನನ್ನ ಮಗಳಿಗೆ ಆರೋಗ್ಯ ಸರಿ ಇರಲಿಲ್ಲ ಆಸ್ಪತ್ರೆಗೆ ಹೋಗಬೇಕು ಹಣ ಕೊಡಿ ಎಂದು ಹೇಳಿದರೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಆಕೆಗೆ ತಲಾಖ್ ನೀಡಿದ್ದಾನೆ'' ಇದು ಮಹಿಳೆ ತಾಯಿಯ ಮಾತು.

'ಮೂರು ವರ್ಷದ ಹಿಂದೆ ಮದುವೆಯಾಗಿದ್ದೆ, ಕೇವಲ 30 ರೂಪಾಯಿ ಕೇಳಿದ್ದಕ್ಕೆ ತಲಾಖ್ ನೀಡಿದ್ದಾರೆ, ಕೊನೆಗೆ ಮನೆಯಿಂದ ಹೊರಹಾಕಿದ್ದಾರೆ' ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.
ಅಷ್ಟೇ ಅಲ್ಲದೆ ಅವರಿಂದ ಇಬ್ಬರು ಮಕ್ಕಳನ್ನು ಕೂಡ ದೂರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆಕೆಯ ಪತಿಯ ವಿರುದ್ಧ ಹಾಪುರದ ಡಿಎಸ್‌ಪಿ ರಾಜೇಶ್ ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications