ಕನಿಕಾ ಕಪೂರ್ ಜತೆಗಿದ್ದ ವಸುಂಧರಾ ರಾಜೇ, ಮಗ ದುಶ್ಯಂತ್‌ಗೆ ಹೆಚ್ಚಿದ ಆತಂಕ

ಲಕ್ನೋ, ಮಾರ್ಚ್ 20: ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಇದೀಗ, ಕನಿಕಾ ಜತೆಗಿದ್ದ ಎಲ್ಲರಿಗೂ ಆತಂಕ ಹೆಚ್ಚಿದೆ. ಹೌದು, ಕನಿಕಾ ಕಪೂರ್ ಉತ್ತರ ಪ್ರದೇಶದ ಲಕ್ನೌನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು.

ಆ ಪಾರ್ಟಿಯಲ್ಲಿ ಸುಮಾರು 200 ಜನರು ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಪ್ರಮುಖವಾಗಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಆಕೆಯ ಪುತ್ರ ಬಿಜೆಪಿ ಸಂಸದ ದುಶ್ಯಂತ್ ಕೂಡ ಈ ಪಾರ್ಟಿಯಲ್ಲಿ ಕನಿಕಾ ಜತೆಗಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಬಾಲಿವುಡ್ ಗಾಯಕಿಗೆ ಕೊರೊನಾ ವೈರಸ್: ಕನಿಕಾ ಉದ್ಧಟತನದಿಂದ ಶುರುವಾಯ್ತು ಆತಂಕ

ಈ ಕುರಿತು ವಸುಂಧರಾ ರಾಜೇ ಖುದ್ದು ಟ್ವೀಟ್ ಮಾಡಿದ್ದಾರೆ. 'ಲಕ್ನೌನಲ್ಲಿ ನಾನು ಮತ್ತು ನನ್ನ ಮಗ ದುಶ್ಯಂತ್ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದೇವೆ. ಆ ಪಾರ್ಟಿಯಲ್ಲಿ ಕೊರೊನಾ ಸೋಂಕಿತೆ ಕನಿಕಾ ಕೂಡ ಅತಿಥಿಯಾಗಿ ಬಂದಿದ್ದರು. ಈ ವಿಷಯ ತಿಳಿದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

Vasundhara Raje Self Quarantined After Met Of Kanika Kapoor

ಇನ್ನು ವಸುಂಧರಾ ರಾಜೇ ಅವರ ಪುತ್ರ ಹಾಗೂ ಸಂಸದ ದುಶ್ಯಂತ್ ಪಾರ್ಟಿಯಿಂದ ಬಂದ ಬಳಿಕ ಸಂಸತ್‌ಗೂ ಹೋಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಓಬ್ರೆನ್ ಆಕ್ರೋಶ ವ್ಯಕ್ತಪಡಿಸಿ, ಈ ಕೂಡಲೇ ಸಂಸತ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಎಂದು ಒತ್ತಡ ಹಾಕಿದ್ದಾರೆ.

ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಕೂಡ ಸ್ವಯಂಪ್ರೇರಿತವಾಗಿ ಗೃಹಬಂಧನಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ. ಲಕ್ನೌನಲ್ಲಿ ನಡೆದ ಪಾರ್ಟಿಯಲ್ಲಿ ಕನಿಕಾ ಕಪೂರ್ ಅವರನ್ನು ಜೈ ಪ್ರತಾಪ್ ಸಿಂಗ್ ಭೇಟಿ ಮಾಡಿದ್ದರು.

ಅಂದ್ಹಾಗೆ, ಕನಿಕಾ ಕಪೂರ್ ಅವರ ಲಂಡನ್‌ನಿಂದ ಭಾರತಕ್ಕೆ ವಾಪಸ್‌ ಆಗಿದ್ದರು. ವಿದೇಶದಿಂದ ಬಂದರೂ ಕೊರೊನಾ ಬಗ್ಗೆ ಜಾಗೃತರಾಗದ ಕನಿಕಾ, ಪಾರ್ಟಿಯಲ್ಲಿ ಭಾಗವಹಿಸಿ ಈಗ ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಆತಂಕ ಹೆಚ್ಚಿಸಿದ್ದಾರೆ.

Vasundhara Raje Self Quarantined After Met Of Kanika Kapoor

ಇನ್ನುಳಿದಂತೆ ನಟಿ ನೈನಾ ಬಾಲ್ಸ್‌ವೇರ್, ಸಂಸದ ದುಶ್ಯಂತ್ ಅವರ ಪತ್ನಿ ನಿಹಾರಿಕ ಮತ್ತು ಮಗ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಎಲ್ಲರಿಗೂ ಈಗ ಆತಂಕ ಮನೆಮಾಡಿದೆ. ಇನ್ನು ಕನಿಕಾ ಅವರ ತಾಯಿ ಹೇಳಿರುವ ಪ್ರಕಾರ, ಲಂಡನ್‌ನಿಂದ ಬಂದ ಬಳಿಕ ಮೂರು ಪಾರ್ಟಿಯಲ್ಲಿ ಕನಿಕಾ ಭಾಗವಹಿಸಿದ್ದರು ಮತ್ತು ಸುಮಾರು 400 ಜನರ ಜೊತೆ ಸಂಪರ್ಕ ಹೊಂದಿದ್ದರು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+