ಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು: ಸ್ಥಾನಕ್ಕೆ ಕುತ್ತಾಗುತ್ತಾ ಹೊಸ ಜನಸಂಖ್ಯಾ ನೀತಿ
ನವದೆಹಲಿ, ಜು.14: ಉತ್ತರಪ್ರದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಕರಡು ಮಸೂದೆಯ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಜನರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬಹುದಾಗಿದೆ. ಹಾಗೆಯೇ ಸರ್ಕಾರಿ ಉದ್ಯೋಗಗಳಲ್ಲಿ ಅರ್ಜಿ ಸಲ್ಲಿಸುವುದು, ಬಡ್ತಿ ಪಡೆಯುವುದು ಮತ್ತು ಸರ್ಕಾರದ ಸಬ್ಸಿಡಿಗಳನ್ನು ಪಡೆಯುವುದು ತಡೆಯಬಹುದಾಗಿದೆ.
ಆದರೆ ವಿಪರ್ಯಾಸವೆಂದರೆ, 2021 ರ ಕರಡು ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆಯ ಈ ನಿಬಂಧನೆಯ ಪ್ರಕಾರ ಆಡಳಿತಾರೂಢ ಬಿಜೆಪಿಯ ಅರ್ಧದಷ್ಟು ಶಾಸಕರು ಮುಂದಿನ ರಾಜ್ಯದ ವಿಧಾನಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅನರ್ಹರಾಗಲಿದ್ದಾರೆ.
ಉತ್ತರಪ್ರದೇಶ ರಾಜ್ಯ ವಿಧಾನಸಭೆಯು ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ 397 ಶಾಸಕರ ಜೀವನ ಹಾಗೂ ರಾಜಕೀಯ ಹಿನ್ನೆಲೆಯನ್ನು ಅದರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪೈಕಿ 304 ಆಡಳಿತ ಪಕ್ಷದ ಶಾಸಕರು ಆಗಿದ್ದಾರೆ. ಈ ಪೈಕಿ 152 ಮಂದಿ ಅಂದರೆ ನಿಖರವಾಗಿ ಅರ್ಧದಷ್ಟು ಶಾಸಕರು ಮೂರು ಅಥವಾ ಅದಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದಾರೆ.

ಬಿಜೆಪಿ ಶಾಸಕರಿಗೆ ಎಷ್ಟು ಮಕ್ಕಳಿದ್ದಾರೆ?
ಬಿಜೆಪಿ ಶಾಸಕರ ಪೈಕಿ ಒಬ್ಬರಿಗೆ ಎಂಟು ಮಕ್ಕಳು ಇದ್ದಾರೆ. ಈ ಶಾಸಕ ಅತಿ ಹೆಚ್ಚು ಮಕ್ಕಳು ಹೊಂದಿರುವ ಬಿಜೆಪಿಯ ಶಾಸಕರಾಗಿದ್ದಾರೆ. ಮತ್ತೊಬ್ಬರಿಗೆ ಏಳು ಮಕ್ಕಳು ಇದ್ದಾರೆ. ಅದಲ್ಲದೇ ಎಂಟು ಶಾಸಕರಿಗೆ ತಲಾ ಆರು ಮಕ್ಕಳು ಇದ್ದಾರೆ. ಇನ್ನು 15 ಮಂದಿ ಶಾಸಕರು ತಲಾ ಐದು ಮಕ್ಕಳ ಪೋಷಕರಾಗಿದ್ದಾರೆ. ಆಡಳಿತ ಪಕ್ಷದ ಇನ್ನೂ 44 ಶಾಸಕರು ತಲಾ ನಾಲ್ಕು ಮಕ್ಕಳನ್ನು ಹೊಂದಿದ್ದರೆ, 83 ಮಂದಿಗೆ ತಲಾ ಮೂರು ಮಕ್ಕಳಿದ್ದಾರೆ. ರಾಜ್ಯ ವಿಧಾನಸಭೆಗೆ ಉತ್ತರಪ್ರದೇಶದ ಈ ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಅನ್ವಯ ಮಾಡಿದರೆ, ಈ ಎಲ್ಲಾ ಶಾಸಕರು ಅನರ್ಹರಾಗುತ್ತಾರೆ.

ಲೋಕಸಭೆಯಲ್ಲೂ ಸ್ಥಾನ ಕಳೆದುಕೊಳ್ಳುತ್ತಾ ಬಿಜೆಪಿ
ಇನ್ನು ಲೋಕಸಭೆಯಲ್ಲೂ ಬಿಜೆಪಿಗೆ ಈ ಹೊಸ ಜನಸಂಖ್ಯಾ ನೀತಿ ಬಿಜೆಪಿ ಸಂಸದರಿಗೆ ಕುತ್ತಾಗಲಿದೆ. ಇಲ್ಲಿ ಮತ್ತೊಂದು ವ್ಯಂಗ್ಯವಾದ ವಿಚಾರ ಅಡಗಿದೆ. ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ 2019 ರ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಲು ಬಿಜೆಪಿಯ ಗೋರಖ್‌ಪುರ ಸಂಸದ ಮತ್ತು ಭೋಜ್‌ಪುರಿ ಚಲನಚಿತ್ರ ನಟ ರವಿ ಕಿಶನ್ ಹೆಸರನ್ನು ಪಟ್ಟಿ ಮಾಡಲಾಗಿದೆ. ಆದರೆ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಲು ರವಿ ಕಿಶನ್‌ಗೆ ನಾಲ್ವರು ಮಕ್ಕಳಿದ್ದಾರೆ. ಖಾಸಗಿ ಸದಸ್ಯರ ಮಸೂದೆಗಳು ಸರ್ಕಾರದ ಬೆಂಬಲವಿಲ್ಲದೆ ಅಂಗೀಕಾರಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಪಿಆರ್‌ಎಸ್ ಶಾಸಕಾಂಗದ ಪ್ರಕಾರ, 1970 ರಿಂದ ಸಂಸತ್ತು ಯಾವುದೇ ಖಾಸಗಿ ಸದಸ್ಯರ ಮಸೂದೆಗಳನ್ನು ಅಂಗೀಕರಿಸಿಲ್ಲ. ಯುಪಿ ಪ್ರಸ್ತಾವನೆಯಂತೆ, ಈ ಮಸೂದೆಯು ಎರಡು ಮಕ್ಕಳಿಗಿಂತ ಅಧಿಕ ಮಕ್ಕಳು ಹೊಂದಿರುವ ದಂಪತಿಗಳು ಸರ್ಕಾರಿ ಉದ್ಯೋಗಗಳು ಮತ್ತು ಸಬ್ಸಿಡಿಗಳಿಗೆ ಅನರ್ಹರನ್ನಾಗಿ ಮಾಡಬಹುದಾಗಿದೆ. ಆದರೆ ಲೋಕಸಭಾ ವೆಬ್‌ಸೈಟ್‌ನ ಪ್ರಕಾರ, 168 ಸಂಸದರು ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ. ಈ ಪೈಕಿ 105 ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ.

ಜನಸಂಖ್ಯಾ ವಿರೂಪಕ್ಕೆ ಕಾರಣವಾಗಬಹುದು ಈ ತಾಕೀತು
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಚೀನಾ ಮಾದರಿಯನ್ನು ಆಧರಿಸಿ ಜನಸಂಖ್ಯಾ ನಿಯಂತ್ರಣ ಕಾನೂನು ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು, ವಿವಿಧ ಸ್ವಯಂಪ್ರೇರಿತ ಜನನ ನಿಯಂತ್ರಣ ಕ್ರಮಗಳ ಮೂಲಕ ಜನನ ದರವನ್ನು 2.1 ರ ಬದಲಿ ಮಟ್ಟವನ್ನು ಸಾಧಿಸುವ ಹಾದಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹಾಗೆಯೇ ಚೀನಾ ಮಾದರಿಯಂತಹ ಅಂತರರಾಷ್ಟ್ರೀಯ ಅನುಭವವು ನಿರ್ದಿಷ್ಟ ಸಂಖ್ಯೆಯ ಮಕ್ಕಳನ್ನು ಹೊಂದಲು ಯಾವುದೇ ಬಲವಂತವು ಜನಸಂಖ್ಯಾ ವಿರೂಪಕ್ಕೆ ಕಾರಣವಾಗುತ್ತದೆ ಎಂದು ತೋರಿಸಿದೆ ಎಂದು ಕೂಡಾ ಉಲ್ಲೇಖ ಮಾಡಿದೆ.

ಅಧಿಕ ಜನನ ಪ್ರಮಾಣ ಹೊಂದಿದೆ ಏಳು ರಾಜ್ಯಗಳು
36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 25 ರಾಜ್ಯಗಳು ಈಗಾಗಲೇ ಜನನ ಪ್ರಮಾಣದಲ್ಲಿ 2.1 ಅಥವಾ ಅದಕ್ಕಿಂತ ಕಡಿಮೆ ಸಾಧಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಏಳು ರಾಜ್ಯಗಳ 146 ಜಿಲ್ಲೆಗಳಲ್ಲಿ ಉತ್ತರ ಪ್ರದೇಶ (57), ಬಿಹಾರ (37), ರಾಜಸ್ಥಾನ (14), ಮಧ್ಯ ಪ್ರದೇಶ (25), ಛತ್ತೀಸ್‌ಗಢ (2), ಜಾರ್ಖಂಡ್ (9) ಮತ್ತು ಅಸ್ಸಾಂ (2) ಜನನ ಪ್ರಮಾಣವು 3 ಕ್ಕಿಂತ ಅಧಿಕವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications