ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಎರಡನೇ ಹಂತದಲ್ಲಿ ಶೇ.61.06ರಷ್ಟು ಮತದಾನ

|
Google Oneindia Kannada News

ಲಕ್ನೋ ಫೆಬ್ರವರಿ 14: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಶೇ.61.06ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಸರಾಸರಿ ಶೇಕಡಾ 23.03 ರಷ್ಟು ಮತದಾನ ನಡೆದಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನವು ನಿಧಾನಗತಿಯಲ್ಲಿ ಆರಂಭವಾಗಿದ್ದು, ತದನಂತರದಲ್ಲಿ ವೇಗ ಪಡೆದುಕೊಂಡಿತು.

ಯುಪಿ: ಚುನಾವಣೆಯಲ್ಲಿ 80% ಜನ ನಮ್ಮವರು 20%? -ಸಿಎಂ ಯೋಗಿಯುಪಿ: ಚುನಾವಣೆಯಲ್ಲಿ 80% ಜನ ನಮ್ಮವರು 20%? -ಸಿಎಂ ಯೋಗಿ

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.61.06ರಷ್ಟು ಮತದಾನ ನಡೆದಿದೆ. ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ್, ಅಮ್ರೋಹಾ, ಬುಡೌನ್, ಬರೇಲಿ ಮತ್ತು ಶಹಜಹಾನ್‌ಪುರದಲ್ಲಿ 586 ಅಭ್ಯರ್ಥಿಗಳು ಎರಡನೇ ಹಂತದಲ್ಲಿ ಕಣದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.

Uttar Pradesh Assembly elections: 61.06% overall voter turnout recorded in the second phase

ಸಮಾಜವಾದಿಗೆ ಮತ ಹಾಕಿದ್ರೆ, ಬಿಜೆಪಿಗೆ ಓಟು:

ಕಳೆದ ಫೆಬ್ರವರಿ 14ರಂದು ನಡೆದ ಏಳು ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಹಂತದ ಮತದಾನದಲ್ಲಿ ಶೇ.61.06ರಷ್ಟು ಮತದಾನವಾಗಿದೆ. ಸಹರಾನ್‌ಪುರದ ಬೆಹತ್‌ನ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಎಸ್‌ಪಿಗೆ ಮತ ಹಾಕಿದ್ದಾರೆ. ಆದರೆ ಆ ಮತ ಕಮಲದ ಚಿಹ್ನೆಗೆ (ಬಿಜೆಪಿ) ಹೋಗುತ್ತಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ಕುರಿತು ಪ್ರಶ್ನಿಸಿದಾಗ ಬೂತ್‌ಗೆ ತಂಡಗಳನ್ನು ಕಳುಹಿಸಲಾಗಿದೆ, ಆದರೆ ಮಾಹಿತಿಯು ಸುಳ್ಳು ಎಂದು ಕಂಡುಬಂದಿದೆ ಎಂದು ತಿವಾರಿ ಹೇಳಿದ್ದಾರೆ.

ಯಾದವ ಸಮುದಾಯದವರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಚುನಾವಣಾ ಆಯೋಗದ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

'ಪ್ರತಿ ಚುನಾವಣೆಯಲ್ಲಿ ಎಸ್‌ಪಿಗೆ ಹೊಸ ಮಿತ್ರ': ಪ್ರಧಾನಿ ಮೋದಿ ಟೀಕೆ'ಪ್ರತಿ ಚುನಾವಣೆಯಲ್ಲಿ ಎಸ್‌ಪಿಗೆ ಹೊಸ ಮಿತ್ರ': ಪ್ರಧಾನಿ ಮೋದಿ ಟೀಕೆ

ಯುಪಿಯಲ್ಲಿ ಮೊದಲ ಹಂತದಲ್ಲಿ ಶೇ.60.17ರಷ್ಟು ಮತದಾನ:

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಗುರುವಾರ ಮೊದಲ ಹಂತದ ಮತದಾನ ನಡೆಯಿತು. ಮೊದಲ ಹಂತದಲ್ಲಿ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಒಟ್ಟು ಶೇ.60.17ರಷ್ಟು ಮತದಾನವಾಗಿತ್ತು. ಆಗ್ರಾದಲ್ಲಿ - ಶೇ 60.23, ಅಲಿಗಢದಲ್ಲಿ ಶೇ 60.49, ಬಾಗ್ಪತ್ - ಶೇ61.25, ಬುಲಂದ್‌ಶಹರ್ - ಶೇ 60.57, ಗೌತಮ್ ಬುಧ್ ನಗರ - ಶೇ54.38, ಗಾಜಿಯಾಬಾದ್ - ಶೇ52.43, ಹಾಪುರ್ - ಶೇ60.53, ಮಥುರಾ - ಶೇ62.90, ಮೀರತ್ - ಶೇ60, ಮುಜಾಫರ್‌ನಗರ - ಶೇ65.32, ಶಾಮ್ಲಿ - ಶೇ 66.14ರಷ್ಟು ಮತದಾನ ನಡೆದಿತ್ತು.

English summary
Uttar Pradesh Assembly elections: 61.06% overall voter turnout recorded in the second phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X