ಅಪರೂಪದ ಆಚರಣೆ: ಬಿಜೆಪಿ ಶಾಸಕನ ಮೇಲೆ ಮಣ್ಣಿನ ನೀರು ಎರಚಿದ ಮಹಿಳೆಯರು
ಗೋರಖ್‌ಪುರ ಜುಲೈ 14: ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಯರ ತಂಡವೊಂದು ಸ್ಥಳೀಯ ಶಾಸಕ ಮತ್ತು ನಗರಪಾಲಿಕೆ ಅಧ್ಯಕ್ಷರ ಮೇಲೆ ಮಣ್ಣಿನ ನೀರನ್ನು ಹಾಕಿದ್ದಾರೆ. ಅಧಿಕ ಮಳೆಗೆಯಿಂದಾಗಿ ಶಾಸಕರು ಇಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಕಾರಣಕ್ಕೆ ಮಹಿಳೆಯರು ಕೋಪಗೊಂಡು ಮಣ್ಣಿನ ನೀರು ಎರಚಿರಬಹುದು ಎಂದು ಹಲವರು ಭಾವಿಸಬಹುದು. ಆದರೆ ಇದಕ್ಕೆ ಕಾರಣ ಬೇರೆನೇ ಇದೆ. ಇದಕ್ಕೆ ಕಾರಣ ಕೇಳಿದರೆ ನಿಮಗೆ ಆಶ್ಚರ್ಯ ಆಗೋದರಲ್ಲಿ ಅನುಮಾನವೇ ಇಲ್ಲ.
ಎಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು. ಆದರೆ, ಈ ಮಳೆಗೂ ಶಾಸಕರ ಮೇಲೆ ಮಣ್ಣಿನ ನೀರು ಹಾಕುವುದಕ್ಕೂ ಕಾರಣವಿದೆ. ಮಳೆ ದೇವರು ಇಂದ್ರನನ್ನು ಮೆಚ್ಚಿಸುವ ಮೂಲಕ ಸ್ಥಳೀಯ ಶಾಸಕರಿಗೆ ಇಲ್ಲಿನ ಮಹಿಳೆಯರು ಮಣ್ಣಿನ ನೀರನ್ನು ಎರಚಿದ್ದಾರೆ. ಈ ಮೂಲಕ ಧಾರ್ಮಿಕ ವಿಧಿ ವಿಧಾನ ಮಾಡಿದ್ದಾರೆ. ಊರಿನ ಜನ ಮೆಚ್ಚಿದ ವ್ಯಕ್ತಿಗೆ ಮಡೆಸ್ನಾನ ಮಾಡುವುದರಿಂದ ಈ ಪ್ರದೇಶಕ್ಕೆ ಮಳೆ ತರುವ ಮಳೆ ದೇವರಿಗೆ ಸಂತೋಷವಾಗುತ್ತದೆ ಎಂಬುದು ಈ ಭಾಗದ ಪ್ರಾಚೀನ ನಂಬಿಕೆ.
ಮಹಾರಾಜ್‌ಗಂಜ್‌ನ ಪಿಪರ್ಡೆಯುರಾ ಪ್ರದೇಶದ ಮಹಿಳೆಯರು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್‌ಗೆ ಮಡೆ ಸ್ನಾನ ಮಾಡಿಸಿದ್ದಾರೆ. ''ನಗರದ ತಲೆಗೆ ಮಣ್ಣಿನ ಸ್ನಾನವು ಇಂದ್ರ ದೇವರಿಗೆ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯಾಗಿದೆ. ಮಳೆಯ ಕೊರತೆಯು ಭತ್ತದ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಕೆಲ ಬಾರಿ ಇಂದ್ರ ದೇವನನ್ನು ಮೆಚ್ಚಿಸಲು, ಮಕ್ಕಳು ಮಣ್ಣಿನಲ್ಲಿ ಸ್ನಾನ ಮಾಡುತ್ತಾರೆ ಮತ್ತು ಸ್ಥಳೀಯವಾಗಿ ಇದನ್ನು ಕಲ್ ಕಲೂಟಿ ಎಂದು ಕರೆಯಲಾಗುತ್ತದೆ" ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿದೇವಿ ಹೇಳಿದರು.
#WATCH | Women in Pipardeura area of Maharajganj in Uttar Pradesh throw mud at MLA believing this will bring a good spell of rainfall for the season pic.twitter.com/BMFLHDgYxb
— ANI UP/Uttarakhand (@ANINewsUP) July 13, 2022
ಶಾಸಕ ಕನೋಜಿಯ ಮತ್ತು ನಗರ ಪಾಲಿಕೆ ಅಧ್ಯಕ್ಷ ಜೈಸ್ವಾಲ್ ಮಳೆಗಾಗಿ ಕೆಸರು ಸ್ನಾನ ಮಾಡಲು ಸಂತಸದ ವಿಷಯ ಎಂದಿದ್ದಾರೆ. ಬಿಸಿಲಿನ ತಾಪದಿಂದ ಜನರು ಚಡಪಡಿಸುತ್ತಿದ್ದು, ಇಂದ್ರ ದೇವರನ್ನು ಮೆಚ್ಚಿಸಲು ಮಡೆಸ್ನಾನ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ನಗರದ ಮಹಿಳೆಯರು ಮಳೆಗಾಗಿ ಮಡೆ ಸ್ನಾನ ಮಾಡಿಸಿದ್ದಾರೆ ಎಂದು ಕನೋಜಿಯವರು ತಿಳಿಸಿದರು. ಮಹಿಳೆಯರು ಮಳೆ ದೇವರನ್ನು ಮೆಚ್ಚಿಸಲು ಈ ಪ್ರದೇಶದ ಪ್ರಾಚೀನ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂದು ಜೈಸ್ವಾಲ್ ಹೇಳಿದರು.

ಎಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗದಂತೆ, ಮುಂದೆ ಬರಗಾಲವನ್ನು ತಪ್ಪಿಸಲು ಮಳೆರಾಯನನ್ನು ಮೆಚ್ಚಿಸಲು ಪೂಜೆ ಮಾಡಲಾಗುತ್ತದೆ.












Click it and Unblock the Notifications