ಯುಪಿ: ಶಾಲಾ ಶುಲ್ಕಕ್ಕಾಗಿ 13 ವರ್ಷದ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
ಶ್ರಾವಸ್ತಿ, ಆಗಸ್ಟ್ 18: ಇತ್ತೀಚೆಗಷ್ಟೇ ರಾಜಸ್ಥಾನದ ಜಲೋರ್‌ನಲ್ಲಿ ಶಿಕ್ಷಕರೊಬ್ಬರು 9 ವರ್ಷದ ದಲಿತ ವಿದ್ಯಾರ್ಥಿಗೆ ಥಳಿಸಿದ್ದು, ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ. ಶಾಲೆಯಲ್ಲಿ ನೀರಿನ ಪಾತ್ರೆ ಬಳಸಿದ್ದಕ್ಕಾಗಿ ಬಾಲಕನ್ನು ಥಳಿಸಲಾಗಿತ್ತು. ಶಿಕ್ಷಕನಿಂದ ತೀವ್ರವಾಗಿ ಥಳಿಸಲ್ಪಟ್ಟ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಆಘಾತಕಾರಿ ಘಟನೆ ನಡೆದು ಕೆಲವು ದಿನಗಳ ನಂತರ, ಈಗ ಉತ್ತರ ಪ್ರದೇಶದಲ್ಲಿ ಅಂತಹ ವಿಧ್ವಂಸಕ ಕೃತ್ಯವು ಮುನ್ನೆಲೆಗೆ ಬಂದಿದೆ. ಇಲ್ಲಿ ಶಿಕ್ಷಕರೊಬ್ಬರು ಶುಲ್ಕಕ್ಕಾಗಿ ಅಮಾಯಕನನ್ನು ಕೊಂದಿದ್ದಾರೆ.
ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ಶಿಕ್ಷಕನೊಬ್ಬ ಶುಲ್ಕದ ವಿಚಾರದಲ್ಲಿ ವಿಕೃತ ಮೆರೆದಿದ್ದಾರೆ. ಅಮಾನುಷವಾಗಿ 3ನೇ ತರಗತಿಯ ವಿದ್ಯಾರ್ಥಿಗೆ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶಾಲಾ ಶುಲ್ಕಕ್ಕಾಗಿ ಶಿಕ್ಷಕರು ಥಳಿಸಿದ್ದಾರೆ ಎಂದು ಮೃತನ ಹಿರಿಯ ಸಹೋದರ ಆರೋಪಿಸಿದ್ದಾರೆ. ಶಾಲಾ ಶುಲ್ಕ ನೀಡಲ್ಲ (ತಿಂಗಳಿಗೆ 250 ರೂ.) ಎಂಬ ಕಾರಣಕ್ಕೆ ನನ್ನ ಸಹೋದರನನ್ನು ಶಿಕ್ಷಕರು ಥಳಿಸಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಸಹೋದರ ತಿಳಿಸಿದ್ದಾರೆ.
UP | A 13-year-old student of class 3rd, who went to a school near his village under Sirsiya PS limits, died in hospital in Bahraich on Aug 17. Complain by his uncle states that he was beaten by his school teacher on Aug 8. Case filed; probe underway: Shravasti SP Arvind K Maurya pic.twitter.com/LlUK1gxpNs
— ANI UP/Uttarakhand (@ANINewsUP) August 18, 2022
'ನಾನು ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದ್ದೇನೆ ಎಂದು ಮೃತ ವಿದ್ಯಾರ್ಥಿಯ ಸಹೋದರ ರಾಜೇಶ್ ವಿಶ್ವಕರ್ಮ ತಿಳಿಸಿದ್ದಾನೆ, ಆದರೆ ಅದು ಮೇಷ್ಟ್ರಿಗೆ ಗೊತ್ತಿಲ್ಲ. ನನ್ನ ಸಹೋದರನನ್ನು ಮನಬಂದಂತೆ ಥಳಿಸಿದ್ದಾರೆ. ಶಿಕ್ಷಕನ ಹೊಡೆತದಿಂದ ಅವನ ಕೈ ಮುರಿದು ರಕ್ತಸ್ರಾವವಾಗಿದೆ. ಇದರಿಂದ ನನ್ನ ಸಹೋದರ ಮೃತಪಟ್ಟಿದ್ದಾನೆ. ಶಿಕ್ಷಕರು ನನ್ನ ಸಹೋದರನನ್ನು ಕೊಂದಿದ್ದಾರೆ' ಎಂದು ಆರೋಪಿಸಿದ್ದಾರೆ.

ಈ ಘಟನೆಯ ಕುರಿತು ಮಾಹಿತಿ ನೀಡುತ್ತಿರುವ ಶ್ರಾವಸ್ತಿ ಎಸ್ಪಿ ಅರವಿಂದ್ ಕೆ ಮೌರ್ಯ ಅವರು, ಸಿರ್ಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ 3 ನೇ ತರಗತಿ ಓದುತ್ತಿದ್ದ 13 ವರ್ಷದ ವಿದ್ಯಾರ್ಥಿ ಆಗಸ್ಟ್ 17 ರಂದು ಬಹ್ರೈಚ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದರು. ಆ.8ರಂದು ಶಾಲಾ ಶಿಕ್ಷಕ ತನಗೆ ಥಳಿಸಿದ್ದಾರೆ ಎಂದು ಆತನ ಚಿಕ್ಕಪ್ಪನ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.












Click it and Unblock the Notifications