ಯುಪಿ: ಅಖಿಲೇಶ್ ಎದುರಾಳಿ ಎಸ್‌ಪಿ ಸಿಂಗ್ ಬಘೇಲ್ ಎಷ್ಟು ಶ್ರೀಮಂತ?
ಲಕ್ನೋ ಫೆಬ್ರವರಿ 1: ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಎಸ್‌ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಲಾಗಿದೆ.
ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳು ಬಾಕಿ ಉಳಿದಿವೆ ಎಂದು ತೋರಿಸಿದ್ದಾರೆ. ಅಖಿಲೇಶ್ ಯಾದವ್ ಅವರ ವಿರುದ್ಧ ಒಂದು ಎಫ್‌ಐಆರ್ ದಾಖಲಾಗಿದ್ದು ಅವರ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಕುಟುಂಬದ ಆಸ್ತಿ 8.75 ಕೋಟಿ ರೂ. ಇದೆ. ಚುನಾವಣಾ ಅಫಿಡವಿಟ್‌ನಲ್ಲಿ ನಮೂದಿಸಿರುವ ಬಘೇಲ್ ಅವರ ಆಸ್ತಿಯ ಸಂಪೂರ್ಣ ವಿವರ ಇಲ್ಲಿದೆ:
ಬಘೇಲ್ ಒಟ್ಟು ಆಸ್ತಿ ಮೌಲ್ಯ 8.75 ಕೋಟಿ ರೂ.ಗಿಂತ ಹೆಚ್ಚಿದೆ. ಎಸ್‌ಪಿ ಸಿಂಗ್ ಬಘೇಲ್ (ಅವರ ಪತ್ನಿ ಮತ್ತು ಮಗ) ಅವರ ಒಟ್ಟು ಚರ ಆಸ್ತಿಯು 84 ಲಕ್ಷ ರೂ.ಗಳು. ಇದರಲ್ಲಿ 45.94 ಲಕ್ಷ ರೂ ಬಘೇಲ್‌ಗೆ ಸೇರಿದ್ದು, ರೂ. 25.91 ಲಕ್ಷಕ್ಕೂ ಹೆಚ್ಚು ಪತ್ನಿ ಮಧು ಮತ್ತು ಇನ್ನಷ್ಟು ಮಗ ಪಾರ್ಥ್ 12.14 ಲಕ್ಷ ರೂ. ಹೊಂದಿದ್ದಾರೆ. ಕೇಂದ್ರ ಸಚಿವರ ಒಟ್ಟು ಸ್ಥಿರಾಸ್ತಿ 7.91 ಕೋಟಿ ರೂ. ಇದೆ. ಬಘೇಲ್ ಅವರ ಮೇಲೆ ಯಾವುದೇ ಹೊಣೆಗಾರಿಕೆಗಳಿಲ್ಲ. ಎಲ್ಲ ಅವರ ಪತ್ನಿಯ ಹೊಣೆಗಾರಿಕೆಯಲ್ಲಿದೆ.

ಇನ್ನೂ ಅಖಿಲೇಶ್ ಯಾದವ್ 40.14 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ದಾಖಲೆ ಪತ್ರಗಳನ್ನು ನೀಡಿದ್ದಾರೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಮತ್ತು ಅವರ ಮಗಳು 40.14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ, ಆದರೆ ಸ್ವಂತ ವಾಹನಗಳನ್ನು ಹೊಂದಿಲ್ಲ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ 5.34 ಲಕ್ಷಕ್ಕೂ ಹೆಚ್ಚು ಮೌಲ್ಯದ ವ್ಯಾಯಾಮ ಯಂತ್ರ ಮತ್ತು 76,015 ರೂಪಾಯಿ ಬೆಲೆಯ ಫೋನ್ ಹೊಂದಿದ್ದಾರೆ.
ಅಖಿಲೇಶ್ ಯಾದವ್ ಯಾವುದೇ ಬಂದೂಕುಗಳನ್ನು ಹೊಂದಿಲ್ಲ. ಯಾದವ್ ಮತ್ತು ಅವರ ಪತ್ನಿ ಹಾಗೂ ಪುತ್ರಿ ಅದಿತಿಯ ಒಟ್ಟು ಆಸ್ತಿ ಮೌಲ್ಯ 40.14 ಕೋಟಿ ರೂಪಾಯಿ ಎಂದು ನಾಮಪತ್ರ ಸಲ್ಲಿಕೆ ವೇಳೆ ನೀಡಿದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಅಖಿಲೇಶ್ ಯಾದವ್ 17.22 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದರೆ, ಅವರ ಪತ್ನಿ ಡಿಂಪಲ್ ಯಾದವ್ 9.61 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 26.83 ಕೋಟಿ ರೂಪಾಯಿ ಆಗಿದೆ. ಎಸ್‌ಪಿ ಮುಖ್ಯಸ್ಥರು 28.97 ಲಕ್ಷ ರೂ.ಗಿಂತ ಹೆಚ್ಚಿನ ಹೊಣೆಗಾರಿಕೆ ಹೊಂದಿದ್ದರೆ, ಅವರ ಪತ್ನಿ 14.26 ಲಕ್ಷ ರೂಪಾಯಿ ಹೊಂದಿದ್ದಾರೆ.
ಅಖಿಲೇಶ್ ಯಾದವ್ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್‌ಗೆ 2.13 ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ನೀಡಿದ್ದಾರೆ; ಅದೇ ರೀತಿ ತಮ್ಮ ಪತ್ನಿ ಡಿಂಪಲ್ ಯಾದವ್ ಅವರಿಂದ ಸ್ವತಃ ಅಖಿಲೇಶ್ ಯಾದವ್ 8.15 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾರೆ.

Recommended Video
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications