ಉತ್ತರ ಪ್ರದೇಶದಿಂದ ಐಎಸ್‌ಐಗೆ ಮಾಹಿತಿ; ಎನ್‌ಐಎ ದಾಳಿ

ಲಕ್ನೋ, ಜೂನ್ 29 : ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಚಂಡೋಲಿಯ ವ್ಯಕ್ತಿಯೊಬ್ಬನಿಗೆ ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಇರುವ ಕುರಿತು ಎನ್‌ಐಎ ತನಿಖೆ ಕೈಗೊಂಡಿದೆ.

ಚಂಡೋಲಿಯ ನಿವಾಸಿ ಮೊಹಮ್ಮದ್‌ ರಶೀದ್‌ಗೆ ಸೇರಿದ ಮನೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎನ್‌ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. 2020ರ ಜನವರಿ 19ರಂದು ದಾಖಲಾಗಿದ್ದ ಎಫ್‌ಐಆರ್‌ ಅನ್ವಯ ತನಿಖೆ ನಡೆದಿದೆ.

ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದ ಎನ್‌ಐಎಗೆ ಮೊಹಮ್ಮದ್‌ ರಶೀದ್ ಪಾಕಿಸ್ತಾನದ ಐಎಸ್ಐನಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿ ಇದ್ದ ಮಾಹಿತಿ ಸಿಕ್ಕಿತ್ತು. ಎರಡು ಬಾರಿ ಈತ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದ.

UP Man Connection With ISI NIA Raids On House

ಭಾರತದಲ್ಲಿನ ಕೆಲವು ಸೂಕ್ಷ್ಮ ಮತ್ತು ನಿಷೇಧಿತ ಪ್ರದೇಶದ ಫೋಟೋಗಳನ್ನು ತೆಗೆದು ಮೊಹಮ್ಮದ್ ರಶೀದ್ ಪಾಕಿಸ್ತಾನಕ್ಕೆ ಕಳಿಸಿರುವುದು ಪತ್ತೆಯಾಗಿದೆ. ಆದ್ದರಿಂದ, ಆತನ ಮನೆ, ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ.

ಭಾರತೀಯ ಯೋಧರ ಸಂಚಾರ, ಪಡೆಗಳ ಜಮಾವಣೆ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ಕಳಿಸುತ್ತಿದ್ದ. ದಾಳಿಯ ವೇಳೆ ಹಲವು ಮೊಬೈಲ್ ಫೋನ್, ಕೆಲವು ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+