ಯುಪಿ: ಕಾಲುವೆ ನಿರ್ಮಾಣ ವಿರೋಧಿಸಿ ನೆಲದ ಮೇಲೆ ಮಲಗಿದ ನ್ಯಾಯಾಧೀಶ
ಲಕ್ನೋ ಮಾರ್ಚ್ 25: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮನೋಜ್ ಕುಮಾರ್ ಶುಕ್ಲಾ ಅವರ ಪ್ರಕರಣವನ್ನು ತಕ್ಷಣವೇ ನ್ಯಾಯಾಂಗ ತನಿಖೆಗೊಳಪಡಿಸಲು ಒತ್ತಾಯಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಖಿಲೇಶ್ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ ಸಾರ್ವಜನಿಕರಿಗೆ ನ್ಯಾಯ ಬೇಕು, ಜೆಸಿಬಿ ಅಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬಸ್ತಿಯ ಹರ್ರೈಯಾದಲ್ಲಿನ ಛಾಪಿಯಾ ಶುಕ್ಲಾ ಗ್ರಾಮದ ತನ್ನ ಜಮೀನಿನಲ್ಲಿ ಬಲವಂತವಾಗಿ ಕಾಲುವೆ ನಿರ್ಮಾಣಕ್ಕಾಗಿ ಕೋಪಗೊಂಡ ಸುಲ್ತಾನ್‌ಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮನೋಜ್ ಶುಕ್ಲಾ ಜಮೀನಿನಲ್ಲಿಯೇ ಮಲಗಿದ್ದರು.
ನೀರಾವರಿ ಇಲಾಖೆ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜಮೀನು ಮಾಲಿಕರ ಒಪ್ಪಿಗೆ ಇಲ್ಲದೆ ಏಕಾಏಕಿ ಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಇದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಗುರುವಾರ ಬಿಸಿಲಿನ ಕಾರಣ ಗ್ರಾಮಸ್ಥರು ಟೆಂಟ್ ಹಾಕಲು ಯತ್ನಿಸಿದರಾದರೂ ಪೊಲೀಸರು ಟೆಂಟ್ ಹಾಕಲು ಬಿಡಲಿಲ್ಲ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮನೋಜ್ ಶುಕ್ಲಾ ಬುಧವಾರದಿಂದಲೇ ಪ್ರತಿಭಟನೆ ಆರಂಭಿಸಿದರು. ತಹಸೀಲ್ದಾರ್, ಸಿಒ ಮತ್ತು ಇತರ ಅಧಿಕಾರಿಗಳು ರಾತ್ರಿಯಿಡೀ ಸ್ಥಳದಲ್ಲಿಯೇ ತಂಗಿದ್ದಾರೆ. ಜಂಟಿ ಮ್ಯಾಜಿಸ್ಟ್ರೇಟ್ ಅಮೃತಪಾಲ್ ಕೌರ್ ಅವರು ರಾತ್ರಿ 11 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಅವರು ಪ್ರತಿಭಟನಾಕಾರರ ನ್ಯಾಯಾಂಗ ಅಧಿಕಾರಿಯೊಂದಿಗೆ ಮಾತನಾಡದೆ ಹಿಂತಿರುಗಿದ್ದಾರೆ. ಇದರಿಂದಾಗಿ ಆಕ್ರೊಶ ಹೆಚ್ಚಾಗಿದೆ.

ಅಷ್ಟರಲ್ಲಿ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಇದಲ್ಲದೇ ಛಾಪಿಯಾ ಶುಕ್ಲಾ ಗ್ರಾಮದಲ್ಲಿಯೇ ಕಾಲುವೆ ಅಗೆಯಲು ಬಲವಂತವಾಗಿ ಮಣ್ಣು ಅಗೆದಿದ್ದಾರೆ ಎಂದು ಮತ್ತೊಬ್ಬ ಕೃಷಿಕ ಕಮಲಾ ಶುಕ್ಲಾ ಅವರೂ ಆರೋಪಿಸಿದ್ದಾರೆ. ಗುರುವಾರ ಜಂಟಿ ಮ್ಯಾಜಿಸ್ಟ್ರೇಟ್‌ಗೆ ದೂರು ಪತ್ರ ನೀಡಿ, ಒಪ್ಪಂದ ಮಾಡಿಕೊಳ್ಳದೇ ತಮ್ಮ ಜಮೀನು ಅಗೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. "ಯುಪಿಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮನೋಜ್ ಕುಮಾರ್ ಶುಕ್ಲಾ ಅವರ ಪ್ರಕರಣದಲ್ಲಿ ತಕ್ಷಣವೇ ನ್ಯಾಯಾಂಗ ತನಿಖೆ ನಡೆಯಬೇಕು. ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಹೀಗಾದರೆ ಜನಸಾಮಾನ್ಯರ ಗತಿ ಏನಾಗಬೇಡ. ಇದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕೆಟ್ಟ ಉದಾಹರಣೆಯಾಗಿದೆ. ಜನರಿಗೆ ನ್ಯಾಯ ಬೇಕು, ಜೆಸಿಬಿ ಅಲ್ಲ" ಎಂದು ಅಖಿಲೆಶ್ ಟ್ವೀಟ್ ಮಾಡಿದ್ದಾರೆ.
ಇತ್ತ ಉತ್ತರಪ್ರದೇಶ ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರು ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನರೇಂದ್ರ ಮೋದಿ, ಅಮಿತ್ ಶಾ, ಮತ್ತಿತರ ಹಿರಿಯ ಗಣ್ಯರು, ಶಾಸಕರು, ಸಚಿವರು ಬೃಹತ್ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 200 ವಿವಿ ಅತಿಥಿಗಳು ಭಾಗಿಯಾಗಿದ್ದಾರೆ. ಇದಲ್ಲದೇ ಈ ಪ್ರಮಾಣ ವಚನ ಸಮಾರಂಭಕ್ಕೆ 45 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಇನ್ನೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಖ್ಯಾತ ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಸಮಾಜಸೇವಕರು, ಸಾಹಿತಿಗಳು, ಸಾಹಿತಿಗಳು, ವೃತ್ತಿಪರರು, ವೈದ್ಯರು, ಎಂಜಿನಿಯರ್‌ಗಳು ಭಾಗಿಯಾಗಿದ್ದಾರೆ. ಮಾಜಿ ಸಿಎಂ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೇರಿದಂತೆ ಎಲ್ಲ ವಿಪಕ್ಷ ನಾಯಕರನ್ನು ಆಹ್ವಾನಿಸಲಾಗಿದೆ.












Click it and Unblock the Notifications