ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; 18 ಸಾವು
ಲಕ್ನೋ, ಜುಲೈ 28; ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಐಷಾರಾಮಿ ಖಾಸಗಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 18 ಜನರು ಮೃತಪಟ್ಟಿದ್ದು,19 ಜನರು ಗಾಯಗೊಂಡಿದ್ದಾರೆ.
ಬಾರಬಂಕಿ ಜಿಲ್ಲೆಯ ರಾಮ್ ಸನೇಹಿ ಘಾಟ್ ಸಮೀಪ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಐಷಾರಾಮಿ ಖಾಸಗಿ ಬಸ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ 18 ಜನರು ಮೃತಪಟ್ಟಿದ್ದಾರೆ. 19 ಜನರು ಗಾಯಗೊಂಡಿದ್ದಾರೆ. ಬಸ್ ನಜ್ಜುಗುಜ್ಜಾಗಿದ್ದು, ಗಾಯಗೊಂಡವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲವು ಶವಗಳು ಜಖಂಗೊಂಡ ಬಸ್‌ನ ಅವಶೇಷಗಳಡಿ ಸಿಲಕಿದ್ದು ತಡರಾತ್ರಿಯೇ ಕಾರ್ಯಾಚರಣೆ ನಡೆಸಿ ಎಲ್ಲಾ ಶವಗಳನ್ನು ತೆಗೆಯಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಲಕ್ನೋ ವಲಯದ ಎಡಿಜಿ ಸತ್ಯನಾರಾಯಣ ಸಬತ್ ಮಾಹಿತಿ ನೀಡಿದ್ದಾರೆ. "ಲಾರಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. 18 ಜನರು ಮೃತಪಟ್ಟಿದ್ದಾರೆ. 19 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.












Click it and Unblock the Notifications