ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರ ಟ್ರಸ್ಟ್ ಸದಸ್ಯರ ಮೇಲೆ ಭೂ ಕಬಳಿಕೆ ಆರೋಪಗೈದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

|
Google Oneindia Kannada News

ಲಕ್ನೋ, ಜೂ.21: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವಿರುದ್ದ ಕೇಳಿ ಬಂದ ಗಂಭೀರವಾದ ಭೂ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಭಾರತೀಯ ದಂಡ ಸಂಹಿತೆಯ 15 ಸೆಕ್ಷನ್ ಮತ್ತು ಐಟಿ ಕಾಯ್ದೆಯ ಮೂರು ಸೆಕ್ಷನ್‌ಗಳನ್ನು ಪತ್ರಕರ್ತ ಮತ್ತು ಇತರ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.

ಅಯೋಧ್ಯೆಯಲ್ಲಿನ ವಿವಾದಾತ್ಮಕ ಭೂ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ನಾಯಕ ಮತ್ತು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಸಹೋದರರ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.

 ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ

ಬಿಜ್ನೋರ್ ಪೊಲೀಸ್ ಅಧಿಕಾರಿ ಚಂಪತ್ ರಾಯ್ ಹಾಗೂ ಸಹೋದರರಿಗೆ ವಿಚಾರಣೆ ನಡೆಸಲಾಗಿದೆ ಎಂದು ಹೇಳಿ 'ಕ್ಲೀನ್ ಚಿಟ್' ನೀಡಿದ್ದಾರೆ. ತನಿಖೆ ಮುಂದುವರೆದಿದೆ ಎಂದಿದ್ದಾರೆ. ರಾಯ್ ಸಹೋದರ ಸಂಜಯ್ ಬನ್ಸಾಲ್ ದೂರಿನ ಆಧಾರದ ಮೇಲೆ ಪತ್ರಕರ್ತ ವಿನೀತ್ ನಾರಾಯಣ್ ಮತ್ತು ಇತರ ಇಬ್ಬರರಾದ ಅಲ್ಕಾ ಲಾಹೋತಿ ಮತ್ತು ರಜನೀಶ್ ವಿರುದ್ದ ಪ್ರಕರಣ ದಾಖಲಾಗಿದೆ.

Three booked including Journalist Who Accused Ram Temple Trust Member Of Land Grab

ಮೂವರೂ ಚಂಪತ್ ರಾಯ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಸಂಚು ರೂಪಿಸಿದ್ದಾರೆ ಮತ್ತು ಈ ಮೂಲಕ ದೇಶಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದರೆ ಎಂದು ಆರೋಪಿಸಲಾಗಿದೆ.

ಮೂರು ದಿನಗಳ ಹಿಂದೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪತ್ರಕರ್ತ ವಿನೀತ್ ನಾರಾಯಣ್, ಚಂಪತ್ ರಾಯ್ ಸಹೋದರರು ತಮ್ಮ ಊರಿನ ಬಿಜ್ನೋರ್ ಜಿಲ್ಲೆಯಲ್ಲಿ ಭೂ ಕಬಳಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಎನ್‌ಆರ್‌ಐ ಅಲ್ಕಾ ಲಾಹೋತಿ ಒಡೆತನದ ಹಸುವಿನ ಆಶ್ರಯ ತಾಣದ ಪ್ರದೇಶವಾದ 20,000 ಚದರ ಮೀಟರ್ ಭೂಮಿಯನ್ನು ದೋಚಲು ರಾಯ್‌ ತಮ್ಮ ಸಹೋದರರಿಗೆ ಸಹಾಯ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿನೀತ್ ನಾರಾಯಣ್ ದೂರಿದ್ದಾರೆ.

ಅಲ್ಕಾ ಲಾಹೋತಿ 2018 ರಿಂದ ತನ್ನ ಭೂಮಿ ಅತಿಕ್ರಮಿಸಿದವರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ.

ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಅವ್ಯವಹಾರದ ಆರೋಪಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಅವ್ಯವಹಾರದ ಆರೋಪ

ಇನ್ನು ಸಂಜಯ್ ಬನ್ಸಾಲ್ ನೀಡಿರುವ ದೂರಿನಲ್ಲಿ, ತಾನು ನಾರಾಯಣ್‌ ಫೋನ್ ಸಂಖ್ಯೆಯನ್ನು ಹುಡುಕಿ, ಕರೆ ಮಾಡಿ ಈ ಆರೋಪ ಹಿಂಪಡೆಯುವಂತೆ ತಿಳಿಸಿರುವುದಾಗಿ ಉಲ್ಲೇಖಿಸಿದ್ದಾರೆ. ಆದರೆ "ರಜನೀಶ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಫೋನ್ ಎತ್ತಿ, ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ," ಎಂದು ದೂರಿನಲ್ಲಿ ಹೇಳಿದ್ದಾರೆ. ಹಾಗೆಯೇ ಈ ಆರೋಪವು "ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತದೆ. ಇದು ಸುಳ್ಳು ಪುರಾವೆಗಳು, ಮೋಸ," ಎಂದು ದೂರಲಾಗಿದೆ.

ಎಫ್‌ಐಆರ್ ದಾಖಲಾದ ಒಂದು ದಿನದ ನಂತರ, ಬಿಜ್ನೋರ್‌ ಪೊಲೀಸ್ ಮುಖ್ಯಸ್ಥರು ಬನ್ಸಾಲ್‌ ಬೆಂಬಲಿತ ವೀಡಿಯೊ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಪೊಲೀಸ್ ತಂಡ ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಬಿಜ್ನೋರ್ ಪೊಲೀಸ್ ಮುಖ್ಯಸ್ಥ ಡಾ.ಧರ್ಮ್ ವೀರ್ ಸಿಂಗ್, "ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂಪತ್ ರಾಯ್ ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಮತ್ತು ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಆರೋಪಿಗಳು ಚಂಪತ್ ರಾಯ್ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಸಂಬಂಧಿಕರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ," ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Case Filed against journalist Vineet Narain and two others, Alka Lahoti and Rajnish based complaint filed by secretary of the Ram Temple Trust Champat Rai's brother Sanjay Bansal for Accusing Ram Temple Trust Member Of Land Grab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X