'ರಾಮನವಮಿ ಆಚರಣೆಯಂದು ಯುಪಿಯಲ್ಲಿ ಥೂ.. ಥೂ..ಎನ್ನುವಂತ ಗಲಭೆಗಳು ನಡೆದಿಲ್ಲ' ಯೋಗಿ
ಲಕ್ನೋ ಏಪ್ರಿಲ್ 13: ಹಲವಾರು ರಾಜ್ಯಗಳಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರದ ಘಟನೆಗಳು ವರದಿಯಾಗಿದ್ದರೂ, ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಹಿಂದೂ ಹಬ್ಬವು ಮುಸ್ಲಿಂ ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ನಡೆದಿದ್ದರೂ ಸಹ ಅಂತಹ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ಹೇಳಿದ್ದಾರೆ. "ಥೂ.. ಥೂ.. ಎನ್ನುವಂತ ಮುಖ್ಯ (ಜಗಳ) ಗಲಭೆಗಳು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ" ಎಂದು ಆದಿತ್ಯನಾಥ್ ಹೇಳಿದ್ದಾರೆ.
ಮಂಗಳವಾರ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ರಾಮ ನವಮಿಯನ್ನು ಆಚರಿಸಲಾಯಿತು" ಎಂದು ಹೇಳಿದರು. "ಉತ್ತರ ಪ್ರದೇಶವು 25 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ರಾಜ್ಯಾದ್ಯಂತ 800 ರಾಮನವಮಿ ಮೆರವಣಿಗೆಗಳು ನಡೆದವು ಮತ್ತು ರಂಜಾನ್ ತಿಂಗಳು ಈ ಆಚರಣೆಗಳೊಂದಿಗೆ ಹೊಂದಿಕೊಂಡಿದೆ. ಅನೇಕ ರೋಸಾ ಇಫ್ತಾರ್ ಕಾರ್ಯಕ್ರಮಗಳು ನಡೆದಿವೆ. ಆದರೆ ಗಲಭೆಗಳನ್ನು ಬಿಡಿ ಎಲ್ಲಿಯೂ 'ಥೂ.. ಥೂ..' ಎನ್ನುವ ಜಗಳ ಪ್ರಕರಣಗಳು ಇರಲಿಲ್ಲ" ಎಂದು ಹೇಳಿದ್ದಾರೆ.
ಆದಿತ್ಯನಾಥ್ ಪ್ರಕಾರ ಇದು, "ಯುಪಿಯ ಹೊಸ ಅಭಿವೃದ್ಧಿ ಕಾರ್ಯಸೂಚಿಯ" ಸಂಕೇತವಾಗಿದೆ. ಇಲ್ಲಿ ಗಲಭೆ, ಅನಾಚಾರ ಅಥವಾ ಗೂಂಡಾಗಿರಿಗೆ ಜಾಗವಿಲ್ಲ ಎಂದಿದ್ದಾರೆ. ಜೊತೆಗೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಕೋಮು ಘರ್ಷಣೆಗಳಿಂದ ಆಚರಣೆಗಳನ್ನು ಹಾಳುಮಾಡಲಾಗಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡ ಉದಾಹರಣೆಗಳನ್ನು ಉಲ್ಲೇಖಿಸಿದರು.

ಮಧ್ಯಪ್ರದೇಶದಲ್ಲಿ, ಖಾರ್ಗೋನ್ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ 10 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಚೌಧರಿ ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Karnataka Contractors Association decides to stop all Government work for a month from May 25th. Say they are receiving threats. President Kempanna says Water Resources, PWD and Health are the most corrupt departments.
— DP SATISH (@dp_satish) April 13, 2022
ಗುಜರಾತ್‌ನಲ್ಲಿ ಹಿಮ್ಮತ್‌ನಗರ ಮತ್ತು ಖಂಭತ್ ನಗರಗಳಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆಗಳು ನಡೆದವು. ಒಬ್ಬರ ಮೇಲೆ ಒಬ್ಬರು ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಅಂಗಡಿಗಳು ಮತ್ತು ವಾಹನಗಳು ಹಾನಿಗೊಳಗಾದವು. ಹೀಗಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 144 ಪ್ರಸ್ತುತ ಹಿಮ್ಮತ್‌ನಗರದಲ್ಲಿ ಜಾರಿಯಲ್ಲಿದೆ.
ಹೈದರಾಬಾದ್‌ನಲ್ಲಿ ರಾಮನವಮಿಯಂದು ಬಿಜೆಪಿ ಶಾಸಕ ಟಿ ರಾಜಾ ಅವರು ವಿವಾದಾತ್ಮಕ ಹಾಡನ್ನು ಹಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಶಾಸಕ ಟಿ ರಾಜಾ ಅಧ್ಯಕ್ಷತೆಯಲ್ಲಿ ಏಪ್ರಿಲ್ 10ರಂದು ರಾಮನವಮಿ ಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಸಮಯದಲ್ಲಿ ಟಿ ರಾಜಾ ವಿವಾದಾತ್ಮಕ ಹಾಡನ್ನು ಹಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಬಿಜೆಪಿ ಶಾಸಕ ಟಿ ರಾಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಮನವಮಿ ಯಾತ್ರೆಯಲ್ಲಿ ಬಿಜೆಪಿ ಶಾಸಕರು ಹಾಡಿದ ಹಾಡಿನ ಸಾಹಿತ್ಯ ಹೀಗಿದೆ- "ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಮತ್ತು ಭಗವಾನ್ ರಾಮನ ಹೆಸರನ್ನು ತೆಗೆದುಕೊಳ್ಳದವರು ಭಾರತದಿಂದ ಪಲಾಯನ ಮಾಡಬೇಕಾಗುತ್ತದೆ" ಎಂದು ಹೇಳುತ್ತದೆ.












Click it and Unblock the Notifications