ಯುಪಿ ಗ್ರಾಮದಲ್ಲಿ ನಿರ್ಮಿಸಲಾದ "ಕೊರೊನಾ ಮಾತಾ" ದೇವಾಲಯ ಐದು ದಿನದಲ್ಲೇ ನೆಲಸಮ

ಲಕ್ನೋ, ಜೂ.13: ಉತ್ತರ ಪ್ರದೇಶದ ಪ್ರತಾಪಗಢ ಬಳಿಯ ಜುಹಿ ಶುಕುಲ್ಪುರ್ ಗ್ರಾಮದ ಜನರು ಕೊರೊನಾ ಸೋಂಕಿಗೆ ದೇವರ ಮುನಿಸೇ ಕಾರಣ ಎಂದು ನಂಬಿ ಸೋಂಕಿನಿಂದ ದೂರವಿರಲು ದೈವಿಕ ಅನುಗ್ರಹವನ್ನು ಕೋರಿ ಜೂನ್ 7 ರಂದು ನಿರ್ಮಿಸಿದ್ದ "ಕೊರೊನಾ ಮಾತಾ" ದೇವಾಲಯವನ್ನು ಶುಕ್ರವಾರ ರಾತ್ರಿ ನೆಲಸಮ ಮಾಡಲಾಗಿದೆ.

ಈ ದೇವಾಲಯವನ್ನು ಪೊಲೀಸರು ನೆಲಸಮ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು ಈ ದೇವಾಲಯವನ್ನು ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಈ ಭೂಮಿಯ ವಿಚಾರದಲ್ಲಿ ಯಾರೋ ಅದನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಸ್ಥಳೀಯ ನಿವಾಸಿಗಳ ದೇಣಿಗೆಯನ್ನು ಪಡೆದು ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬವರು ಐದು ದಿನಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 The Corona mata temple built in UP village, demolished in five days

ಲೋಕೇಶ್ ಕುಮಾರ್ ಶ್ರೀವಾಸ್ತ ಈ ದೇವಾಲಯದಲ್ಲಿ "ಕೊರೊನಾ ಮಾತಾ" ವಿಗ್ರಹವನ್ನು ಸ್ಥಾಪಿಸಿದ್ದು, ಗ್ರಾಮದ ರಾಧೆ ಶ್ಯಾಮ್ ವರ್ಮಾ ಈ ವಿಗ್ರಹಕ್ಕೆ ಪೂಜೆ ಮಾಡುವ ಅರ್ಚಕರಾಗಿ ನೇಮಿಸಲಾಗಿತ್ತು. ಹಾಗೆಯೇ ಜನರು ಕೂಡಾ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ನೋಯ್ಡಾದಲ್ಲಿ ವಾಸವಾಗಿರುವ ಲೋಕೇಶ್ ಎಂಬವರು ನಾಗೇಶ್ ಕುಮಾರ್, ಶ್ರೀವಾಸ್ತವ ಮತ್ತು ಜೈ ಪ್ರಕಾಶ್ ಶ್ರೀವಾಸ್ತವ ಜೊತೆಗೆ ಜಂಟಿಯಾಗಿ ಈ ದೇವಾಲಯ ನಿರ್ಮಿಸಿರುವ ಭೂಮಿಯ ಪಾಲುದಾರಿಕೆ ಹೊಂದಿದ್ದರು. ದೇವಾಯಲವನ್ನು ನಿರ್ಮಾಣ ಮಾಡಿದ ಬಳಿಕ ಲೋಕೇಶ್ ತನ್ನ ಹಳ್ಳಿಯಿಂದ ನೋಯ್ಡಾಕ್ಕೆ ತೆರಳಿದರು.

ಆದರೆ ಈ ಭೂಮಿಯಲ್ಲಿ ದೇವಾಲಯ ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಈ ಭೂಮಿಯ ಇನ್ನೋರ್ವ ಪಾಲುದಾರ ನಾಗೇಶ್, "ಭೂಮಿಯನ್ನು ಕಸಿದುಕೊಳ್ಳುವ ದುರಾಲೋಚನೆಯಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ " ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಗಿಪುರ ಪೊಲೀಸ್ ಠಾಣೆ ಎಸ್‌ಎಚ್‌ಒ ತುಷಾರ್ದುತ್ ತ್ಯಾಗಿ, "ವಿವಾದಾತ್ಮಕ ಭೂಮಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ವಿವಾದದಲ್ಲಿ ಭಾಗಿಯಾಗಿರುವ ದೇವಾಲಯ ಧ್ವಂಸ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ. ಹಾಗೆಯೇ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+