ಜ.26ರಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ

ಅಯೋಧ್ಯೆ, ಡಿಸೆಂಬರ್ 17: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೇಲ್ವಿಚಾರಣೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಅಯೋಧ್ಯೆಯಲ್ಲಿ ಪರ್ಯಾಯವಾಗಿ ನಿಗದಿಪಡಿಸಲಾಗಿರುವ ಜಾಗದಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೂ ಶೀಘ್ರವೇ ಅಡಿಪಾಯ ಹಾಕಲಿರುವುದಾಗಿ ತಿಳಿದುಬಂದಿದೆ.

ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ (ಯುಪಿಎಸ್ ಸಿಡಬ್ಲುಬಿ) 2021ರ ಜನವರಿ 26ರಂದು ಅಡಿಪಾಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ. ಸುದ್ದಿಗೋಷ್ಠಿ ನಡೆಸಿ ಡಿಸೆಂಬರ್ 19ಕ್ಕೆ ಅಧೀಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ಗೋಷ್ಠಿಯಲ್ಲಿ ಮಸೀದಿಯ ನೀಲನಕ್ಷೆಯನ್ನು ಬಿಡುಗಡೆಗೊಳಿಸಲಿದ್ದು, ಸ್ಥಳದ ಐತಿಹಾಸಿಕ ಮಹತ್ವಕ್ಕೆ ತಕ್ಕಂತೆ ಮಸೀದಿಯ ರಚನೆ, ವಿನ್ಯಾಸ ಇರುವುದಾಗಿ ಮಂಡಳಿ ತಿಳಿಸಿದೆ.

ಸುಮಾರು ಆರು ತಿಂಗಳ ಹಿಂದೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಸಂಬಂಧ ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಲಾಗಿತ್ತು. ಇದೀಗ ಮಸೀದಿ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಹಾಕುವ ಕೆಲಸ ಆರಂಭಗೊಳ್ಳುತ್ತಿದೆ.

New Ayodhya mosque To Be Bigger Than Babri Masjid, Foundation Laying Ceremony Likely On Jan 26

ಜನವರಿ 26, ಗಣರಾಜ್ಯೋತ್ಸವದಂದು ಅಡಿಪಾಯ ಕಾರ್ಯಕ್ರಮ ನಡೆಸಬೇಕೆಂದು ಮಂಡಳಿಯ ಸದಸ್ಯರು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ವರದಿಯ ಪ್ರಕಾರ, ನಿರ್ಮಾಣಗೊಳ್ಳಲಿರುವ ಈ ಮಸೀದಿಯು ಬಾಬ್ರಿ ಮಸೀದಿಗಿಂತ ಬೃಹತ್ ಆಕಾರದಲ್ಲಿದ್ದು, ವಿನ್ಯಾಸದಲ್ಲಿಯೂ ಭಿನ್ನವಾಗಿರುವುದಾಗಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+