ಹುಟ್ಟುವಾಗ ಮೋದಿ ಹಿಂದುಳಿದ ವರ್ಗದವರಾಗಿರಲಿಲ್ಲ: ಮಾಯಾವತಿ
ಲಕ್ನೋ, ಮೇ 10: "ನರೇಂದ್ರ ಮೋದಿ ಒಬ್ಬ ಅಪ್ರಬುದ್ಧ ಪ್ರಧಾನಿ, ಅವರು ಹುಟ್ಟುವಾಗ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಲಿಲ್ಲ" ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದರು.
ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಜಾತೀಯತೆಯನ್ನು ಪ್ರತಿಪಾದಿಸುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಯಾವತಿ ಉತ್ತರ ನೀಡಿದರು. "ಅವರಿಗೆ ಜಾತೀಯತೆಯ ನಿಜವಾದ ಅನುಭವವಾಗಿಲ್ಲ. ಏಕೆಂದರೆ ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಕರೆಯಲಾಗುತ್ತದೆ. ಆದರೆ ನಿಜಕ್ಕೂ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಹುಟ್ಟುವಾಗ ಅವರು ಒಬಿಸಿ ಆಗಿರಲಿಲ್ಲ. ಆದರೆ ಮತಕ್ಕೋಸ್ಕರ ತಾವು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಅವರು ಹೇಳಿಕೊಳ್ಳುತ್ತಾರೆ" ಎಂದು ಮಾಯಾವತಿ ಹೇಳಿದರು.

ಮೋದಿಯವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಗುಜರಾತಿನಲ್ಲಿ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಗುಜರಾತಿನಲ್ಲಿ ದಲಿತರು ಗೌರವಯುತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ತನ್ನ ಮದುವೆಯಲ್ಲಿ ದಲಿತನೊಬ್ಬನಿಗೆ ಕುದುರೆ ಸವಾರಿ ಮಾಡಲು ಅವಕಾಶ ನೀಡದಿರುವುದು ಗುಜರಾತಿನಲ್ಲಿ ಎಂಬುದು ನನಗೆ ನೆನಪಿದೆ" ಎಂದು ಮಾಯಾವತಿ ಹೇಳಿದರು.












Click it and Unblock the Notifications