ಶ್ರೀರಾಮಚಂದ್ರನೇ 9ನೇ ಪೈಂಗಬರ : ವಿನಯ್ ಕತಿಯಾರ್
ಲಕ್ನೋ, ಫೆಬ್ರವರಿ 10: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಈ ನಡುವೆ ಬಿಜೆಪಿಯ ಫೈರ್ ಬ್ರ್ಯಾಂಡ್ ಮುಖಂಡ ವಿನಯ್ ಕತಿಯಾರ್ ಅವರು ವಿಚಿತ್ರ ಹೇಳಿಕೆ ನೀಡಿದ್ದಾರೆ.
ಅಯೋಧ್ಯ ಸಂಜಾತ ಶ್ರೀರಾಮಚಂದ್ರನೇ 9ನೇ ಪೈಗಂಬರ್ಎಂದಿದ್ದಾರೆ. ಎಲ್ಲಾ ಮುಸ್ಲಿಮರು ಈ ಮುಂಚೆ ಹಿಂದುಗಳಾಗಿದ್ದರು. ಆದರೆ, ಮುಸ್ಲಿಂ ದೊರೆಗಳು ಹಿಂದುಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದರು ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಭೂಮಿ ಪೂಜೆಗಾಗಿ ಬಸಂತ್ ಪಂಚಮಿ ದಿನದಂದು ಜಾಥಾ ತೆರಳುವ ಬಗ್ಗೆ ಸ್ವಾಮಿ ಸ್ವರೋಪಾನಂದರ ಬಸಂತ್ ಪಂಚಮಿ ನೀಡಿದ ಹೇಳಿಕೆಗೆ ವಿನಯ್ ಕತಿಯಾರ್ ಪ್ರತಿಕ್ರಿಯಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ಅಡಿಗಲ್ಲು ಹಾಕಲಾಗಿದೆ. ಮತ್ತೆ ಆ ಕಾರ್ಯ ಮಾಡುವ ಅಗತ್ಯವಿಲ್ಲ. ಚುನಾವಣೆ ಕಾರಣ ರಾಮಮಂದಿರ ಚಳವಳಿಯಿಂದ ಸದ್ಯಕ್ಕೆ ವಿಎಚ್ಪಿ ಹಿಂದೆ ಸರಿದಿರುವುದು ಸರಿಯಾದ ನಿರ್ಧಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಗುಜ್ಜಾರ್ ಸಮುದಾಯದ ಹೋರಾಟಕ್ಕೆ ವಿನಯ್ ಬೆಂಬಲ ವ್ಯಕ್ತಪಡಿಸಿದ್ದಾರೆ. ರಫೆಲ್ ಒಪ್ಪಂದದ ಕುರಿತಂತೆ ಪ್ರಧಾನಿ ಮೋದಿ ಅವರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗಳನ್ನು ವಿನಯ್ ಖಂಡಿಸಿದ್ದಾರೆ.












Click it and Unblock the Notifications