ಸಂಜೀತ್ ಯಾದವ್ ಅಪಹರಣ,ಕೊಲೆ ಕೇಸ್: ನಾಲ್ವರು ಪೊಲೀಸರ ಅಮಾನತು

ಕಾನ್ಪುರ, ಜುಲೈ 24: ಪೊಲೀಸರ ಎದುರೇ ಒತ್ತೆಹಣವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಸೇರಿ 4 ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಮಾಡಲಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ 28 ವರ್ಷದ ಸಂಜೀತ್ ಯಾದವ್ ಎಂಬುವವರನ್ನು ಅಪಹರಿಸಲಾಗಿತ್ತು. ಬಳಿಕ 30 ಲಕ್ಷ ಹಣಕ್ಕೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಪೋಷಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಕುಟುಂಬ ಹೇಗೋ 30 ಲಕ್ಷ ರೂ ಹೊಂದಿಸಿ ಅವರು ಹೇಳಿದ ಜಾಗಕ್ಕೆ ಹಣವನ್ನು ತೆಗೆದುಕೊಂಡು ಹೋಗಿದ್ದರು.

Kidnapped UP Man Killed, 4 Cops Including IPS Officer Suspended

ಪೊಲೀಸರು ಕೂಡ ಅವರ ಜೊತೆಯೇ ಇದ್ದರು. ಪೊಲೀಸರ ಕಣ್ಣೆದುರೇ ಆರೋಪಿಗಳು ದುಡ್ಡನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಕುರಿತು ಸಂಜೀತ್ ಪೋಷಕರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದು, ಇದುವರೆಗೂ ಮೃತದೇಹ ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವ್ಯಕ್ತಿಯನ್ನು ಹತ್ಯೆ ಮಾಡಿ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದರೇ? ಆರೋಪಿಗಳು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಐಪಿಎಸ್ ಅಧಿಕಾರಿ ಅಪರ್ಣಾ ಗುಪ್ತಾ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ ಅಪಹರಣಕಾರರಿಗೆ ಯಾವುದೇ ಹಣ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಅಪಹೃತನ ಕುಟುಂಬದವರ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಅದರಲ್ಲಿ ಸತ್ಯ ಇಲ್ಲ. ನಾವು ಕೂಡ ಅಪಹೃತನ ಪತ್ತೆಗಾಗಿ ಶ್ರಮಿಸುತ್ತಿದ್ದೇವೆ. ಆದರೂ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್​ ಸಿಬ್ಬಂದಿ ಹೇಳಿದ್ದಕ್ಕೆ ಕಷ್ಟಪಟ್ಟು 30 ಲಕ್ಷ ರೂ. ಹಣ ಹೊಂದಿಸಿ, ರೈಲು ಹಳಿ ಮೇಲೆ ಹಾಕಿದ್ದೆವು. ಅದನ್ನು ಕೊಂಡೊಯ್ಯಲು ಬಂದರೂ ಪೊಲೀಸರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಲಿಲ್ಲ ಎಂದು ದೂರಿದ್ದಾರೆ.

ಖಾಸಗಿ ಪ್ರಯೋಗಾಲಯ ಒಂದರಲ್ಲಿ ಟೆಕ್ನಿಷಿಯನ್ ಆಗಿ ಸಂಜೀತ್ ಯಾದವ್ ಕೆಲಸ ಮಾಡುತ್ತಿದ್ದರು. ಅದು ಲಕ್ನೋನಿಂದ 90 ಕಿಮೀ ದೂರದಲ್ಲಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+