ನನಗೆ ಜೈಲೇ ಸುರಕ್ಷಿತ ಎಂದು ಪೆರೋಲ್ ನಿರಾಕರಿಸಿದ ಅಪರಾಧಿ!
ಲಕ್ನೋ, ಮೇ 31: ಮೀರತ್ ಜೈಲಿನಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಆಶಿಶ್ ಕುಮಾರ್ ಎಂಬಾತ ತಾನು ವಿಶೇಷ ಪೆರೋಲ್ ಮೇಲೆ ಬಿಡುಗಡೆಯಾಗಲು ನಿರಾಕರಿಸಿದ್ದಾನೆ. ''ಈ ಕೊರೊನಾ ಸಾಂಕ್ರಾಮಿಕದ ಮಧ್ಯೆ ನಾನು ಬಿಡುಗಡೆಯಾಗಿ ಹೊರಗೆ ಹೋಗುವುದಕ್ಕಿಂತ ಇಲ್ಲೇ ಜೈಲಿನಲ್ಲಿರುವುದು ಸುರಕ್ಷಿತ'' ಎಂದು ಹೇಳಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀರತ್ ಜೈಲಿನ ಹಿರಿಯ ಅಧೀಕ್ಷಕ ಬಿ.ಪಿ.ಪಾಂಡೆ, ''ಅಪರಾಧಿ ಆಶಿಶ್ ಕುಮಾರ್ ಮನವಿಯನ್ನು ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿದ್ದು ಅನುಮೋದನೆ ದೊರೆತಿದೆ. ಆದ್ದರಿಂದ ಆಶಿಶ್ ಕುಮಾರ್ ಶಿಕ್ಷೆ ಪೂರ್ಣಗೊಳ್ಳುವವರೆಗೂ ಜೈಲಿನಲ್ಲಿಯೇ ಇರಲಿದ್ದಾರೆ'' ಎಂದು ತಿಳಿಸಿದ್ದಾರೆ.
''ರಾಜ್ಯ ಸರ್ಕಾರದ ನಿರ್ದೇಶನದ ನಂತರ, ಮೀರತ್ ಜೈಲಿನಲ್ಲಿದ್ದ 43 ಕೈದಿಗಳನ್ನು ವಿಶೇಷ ಎಂಟು ವಾರಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ಆಯ್ಕೆ ಮಾಡಲಾಗಿತ್ತು. ಆಶಿಶ್ ಕುಮಾರ್ ಹೊರತುಪಡಿಸಿ ಉಳಿದ 42 ಮಂದಿ ಪೆರೋಲ್ ಸ್ವೀಕರಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗೆಯೇ ಸಾಂಕ್ರಾಮಿಕದ ಹಿನ್ನೆಲೆ 326 ಮಂದಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ'' ಎಂದು ಕೂಡಾ ಜೈಲಿನ ಹಿರಿಯ ಅಧೀಕ್ಷಕರು ವಿವರಿಸಿದ್ದಾರೆ.

ಶಿಕ್ಷಕನಾಗಿ ವೃತ್ತಿ ಜೀವನ ನಡೆಸುತ್ತಿದ್ದ ಆಶಿಶ್‌ನನ್ನು ಪತ್ನಿಗೆ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಲ್ಲಿ 2015 ರಲ್ಲಿ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿತ್ತು.
ಪಿಟಿಐ ವರದಿಯ ಪ್ರಕಾರ, ಯುಪಿ ಒಂಬತ್ತು ಕಾರಾಗೃಹಗಳಲ್ಲಿನ 21 ಕೈದಿಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜೈಲುವಾಸ ಅನುಭವಿಸುವುದೇ ''ಸುರಕ್ಷಿತ ಮತ್ತು ಆರೋಗ್ಯಕರ'' ಎಂದು ಹೇಳಿ ಪೆರೋಲ್ ನಿರಾಕರಿಸಿ ಪತ್ರ ಬರೆದಿದ್ದಾರೆ.
ಹೀಗೆ ಮನವಿ ಮಾಡಿದ ಕೈದಿಗಳನ್ನು ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಮೀರತ್, ಮಹಾರಾಜಗಂಜ್, ಗೋರಖ್‌ಪುರ ಮತ್ತು ಲಖನೌ ಜೈಲುಗಳಲ್ಲಿ ಇರಿಸಲಾಗಿದೆ ಎಂದು ಜೈಲಿನ ಆಡಳಿತ ಮಹಾನಿರ್ದೇಶಕ ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.
''ಈ ಅಪರಾಧಿಗಳು ಬೇರೆ ಪ್ರಮುಖ ಕಾರಣಗಳನ್ನೂ ನೀಡಿದ್ದಾರೆ. ಹೊರಗೆ ಹೋದರೆ, ಜೈಲುಗಳಲ್ಲಿ ಸಿಗುವ ಆಹಾರ ಮತ್ತು ಇತರ ಆರೋಗ್ಯ ಸೌಲಭ್ಯಗಳು ಸಿಗುವುದಿಲ್ಲ. ಜೈಲುಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೊರಗೆ ಹೋದರೆ ನಮಗೆ ಅದ್ಯಾವದೂ ಉಚಿತವಲ್ಲ ಎಂದು ಹೇಳಿದ್ದಾರೆ. ಆಹಾರ ಸರಿಯಾಗಿ ದೊರೆಯುತ್ತದೆ, ಈ ಹಿನ್ನೆಲೆ ಜೈಲುಗಳು ಸುರಕ್ಷಿತ ಮತ್ತು ಆರೋಗ್ಯಕರ. ನಾವು ಈಗ ಜೈಲಿನಿಂದ ಹೊರಗೆ ಹೋದರೆ ಉದ್ಯೋಗವೂ ಇಲ್ಲದೆ ಏನೂ ಇಲ್ಲದೆ ಜೀವನ ದೂಡಲು ಕಷ್ಟಪಡಬೇಕಾಗುತ್ತದೆ ಎಂದು ಕೂಡಾ ಹೇಳಿದ್ದಾರೆ'' ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.
ಇನ್ನು ಲಕ್ನೋ ಜೈಲಿನಿಂದ ನಾಲ್ಕು ಮಂದಿ, ಗಾಜಿಯಾಬಾದ್‌ನಲ್ಲಿ ಮೂರು ಮಂದಿ ಹಾಗೂ ಮಹಾರಾಜ್‌ಗಂಜ್ ಜೈಲಿನಲ್ಲಿ ಎರಡು ಮಂದಿ ಈ ರೀತಿಯ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇ 8 ರಂದು ಕಾರಾಗೃಹಗಳನ್ನು ವಜಾಗೊಳಿಸಲು ನಿರ್ದೇಶನ ನೀಡಿತ್ತು ಮತ್ತು ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದ ಎಲ್ಲ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿತ್ತು.
ಕಳೆದ ವರ್ಷ ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಂದರ್ಭದಲ್ಲಿ ಒಟ್ಟು 2,256 ಕೈದಿಗಳು ವಿಶೇಷ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಈ ವರ್ಷ 2,456 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications