ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ, ಮಾಯಾವತಿ ಅಚ್ಚರಿಯ ಹೇಳಿಕೆ!

ಲಕ್ನೋ, ಮಾರ್ಚ್ 20: "ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋಲ್ಲ" ಎನ್ನುವ ಮೂಲಕ ಬಿಎಸ್ಪಿ ನಾಯಕಿ ಮಾಯಾವತಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆ ಮಾಜಿ ಸಂಸದೆ ಮಾಯಾವತಿ ಅವರು ಈ ಬಾರಿ ಲೋಕಸಭಾ ಚುನಾವನೆಗೆ ಸ್ಪರ್ಧಿಸಬಹುದು ಎಂದು ಊಹಿಸಲಾಗಿತ್ತು. ಪ್ರಧಾನಿ ಪಟ್ಟದ ಮೇಲೂ ಕಣ್ಣೀಟ್ಟಿರುವ ಕಾರಣ ಅವರು ಕಣಕ್ಕಿಳಲಿಯುತ್ತಾರೆ ಎಂದು ನೀರೀಕ್ಷಿಸಲಾಗಿತ್ತು. ಆದರೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

I will not contest lok Sabha elections says Mayawati

ಚುನಾವಣೆಗೆ ಸ್ಪರ್ಧಿಸಿದರೆ ತಮ್ಮ ಕ್ಷೇತ್ರದ ಮೇಲೆಯೇ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅದರಿಂದ ಉಳಿದ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕಾಗದೆ ಇರಬಹುದು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಇಲ್ಲ ಎಂದು ಈ ಮೊದಲೂ ಒಮ್ಮೆ ಮಾಯಾವತಿ ಹೇಳಿದ್ದರು.

ಕೊನೆಯಲ್ಲಿ, 'ತೀರಾ ಅಗತ್ಯ ಬಂದರೆ ಸ್ಪರ್ಧಿಸುತ್ತೇನೆ. ಆದರೆ ಸದ್ಯಕ್ಕಂತೂ ಚುನಾವಣೆಗೆ ಸ್ಪರ್ಧಿಸುವ ಯಾವ ಇರಾದೆಯೂ ಇಲ್ಲ' ಎಂಬ ವಾಕ್ಯವನ್ನೂ ಸೇರಿಸುವುದಕ್ಕೆ ಅವರು ಮರೆಯಲಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+