ಬೆಂಗಳೂರಲ್ಲೇ ಏರ್‌ ಶೋ: ಕೇಂದ್ರಕ್ಕೆ ಎಚ್ಡಿಕೆ ಅಭಿನಂದನೆ

ಬೆಂಗಳೂರು, ಸೆಪ್ಟೆಂಬರ್ 8: ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಲ್ಲೇ ನಡೆಸಲಾಗುತ್ತದೆ ಯಾವುದೇ ಕಾರಣಕ್ಕೂ ಸ್ಥಳಾಂತರವಿಲ್ಲ ಎಂದ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ಜರುಗಲಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಏರ್ ಷೋ ಇಲ್ಲಿಯೇ ಮುಂದುವರಿಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ.

ಫೆಬ್ರವರಿ 20ರಿಂದ ಐದು ದಿನಗಳ ಕಾಲ ಬೆಂಗಳೂರಲ್ಲಿ ಏರ್ ಶೋ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ನಡೆಯಲಿದೆ. ಇದು ನನಗೆ ಸಂತೋಷ ತಂದಿದೆ.

HDK led delegation to meet PM for special package

ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ ಎನ್ನುವುದು ಆತಂಕವನ್ನು ಉಂಟು ಮಾಡಿತ್ತು. ಪ್ರತಿಷ್ಠಿತ ಏರ್‌ ಇಲ್ಲಿಯೇ ಮುಂದುವರೆಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಮೊದಲು ಲಖ್ನೋಗೆ ಏರ್ ಇಂಡಿಯಾ ಸ್ಥಳಾಂತರವಾಗುತ್ತದೆ ಎನ್ನುವ ಮಾತು ಕೇಳಿ ಬಂದಾಗ ಎಚ್‌ಡಿಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವಿಗೆ ಪತ್ರ ಬರೆದಿದ್ದರು. ಬೆಂಗಳೂರು ಏರ್ ಶೋ ನಡೆಸಲು ಉತ್ತಮವಾದ ಸ್ಥಳವಾಗಿದ್ದು, ಎಲ್ಲಾ ಸೌಕರ್ಯಗಳು ಇಲ್ಲಿವೆ ಎಂದು ಪತ್ರದಲ್ಲಿ ತಿಳಿಸಿದ್ದರು.

11ನೇ ಎಡಿಷನ್ ನ ಏರ್‌ ಶೋ ಫೆಬ್ರವರಿ 2017ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ವಿವಿಧ ದೇಶಗಳ 549 ಮತ್ತು ಭಾರತದ 51 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದವು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+