ಗೋರಖ್‌ನಾಥ ದೇವಸ್ಥಾನಕ್ಕೆ ನುಗ್ಗಿದ ದಾಳಿಕೋರರು: ಪೊಲೀಸರ ಮೇಲೆ ದಾಳಿ

ಗೋರಖ್‌ಪುರ ಏಪ್ರಿಲ್ 4: ಹರಿತವಾದ ಆಯುಧ ಹಿಡಿದ ವ್ಯಕ್ತಿಯೊಬ್ಬರು ಭಾನುವಾರ ಸಂಜೆ ಉತ್ತರ ಪ್ರದೇಶದ ಗೋರಖನಾಥ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳ ಪ್ರಕಾರ, ದುಷ್ಕರ್ಮಿಗಳು ಪೊಲೀಸರ ಮೇಲೆ ದಾಳಿ ಮಾಡಿದಾಗ 'ಅಲ್ಲಾ ಹು ಅಕ್ಬರ್' ಎಂದು ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಿದ್ದಾರೆ. ಜೊತೆಗೆ ಪೊಲೀಸ್ ಸಿಬ್ಬಂದಿಯ ಎಸ್‌ಎಲ್‌ಆರ್ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರ ಬಳಿ ರೈಫಲ್ ಕಸಿದುಕೊಳ್ಳುವ ವೇಳೆ ದಾಳಿ ಮಾಡಲಾಗಿದೆ. ಇದರಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜೊತೆಗೆ ದಾಳಿಕೋರನನ್ನು ಬಂಧಿಸಲಾಗಿದೆ.

"ಆರೋಪಿಯು ಹರಿತವಾದ ಆಯುಧದೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ನಮ್ಮ (ಪಿಎಸಿ) ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ಅವರು ಗೇಟ್ ಬಳಿಯ ಪಿಎಸಿ ಪೋಸ್ಟ್‌ಗೆ ಹೋಗಿ ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು" ಎಂದು ಗೋರಖ್‌ಪುರ ವಲಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅಖಿಲ್ ಕುಮಾರ್ ಹೇಳಿದ್ದಾರೆ.

ಗಾಯಗೊಂಡಿರುವ ಪೊಲೀಸರು ಸದ್ಯ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರನ್ನು ಕಾನ್‌ಸ್ಟೆಬಲ್‌ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಎಂದು ಹೇಳಲಾಗಿದ್ದು ಗುರು ಗೋರಖ್‌ನಾಥ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಈ ಘಟನೆಯಲ್ಲಿ ಗಾಯಗೊಂಡ ಆರೋಪಿಯೊಬ್ಬ ಕೂಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Gorakhnath Temple Attack: Man Attacks 2 Constables at up Gorakhnath Temple Gate; Arrested

ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ವ್ಯಕ್ತಿಯನ್ನು ಗೋರಖ್‌ಪುರ ಕಂಟೋನ್ಮೆಂಟ್ ಪ್ರದೇಶದ ನಿವಾಸಿ ಮೊಹಮ್ಮದ್ ಅಹ್ಮದ್ ಮುರ್ತಾಜಾ ಎಂದು ಗುರುತಿಸಲಾಗಿದೆ. ಆತನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಮುಂಬೈನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಆತನ ಬಳಿ ಹರಿತವಾದ ಆಯುಧದ ಹೊರತಾಗಿ ಲ್ಯಾಪ್‌ಟಾಪ್, ಪ್ಯಾನ್ ಕಾರ್ಡ್ ಮತ್ತು ವಿಮಾನ ಟಿಕೆಟ್ ಪತ್ತೆಯಾಗಿದೆ.

Gorakhnath Temple Attack: Man Attacks 2 Constables at up Gorakhnath Temple Gate; Arrested

ಅಧಿಕಾರಿಗಳು ಈಗ ಅವರ ನಿಖರ ಉದ್ದೇಶಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ದೇವಾಲಯದ ಆವರಣಕ್ಕೆ ನುಗ್ಗುವ ಪ್ರಯತ್ನದಲ್ಲಿ ಎರಡನೇ ವ್ಯಕ್ತಿ ಅವರಿಗೆ ಸಹಾಯ ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಾಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಭಯೋತ್ಪಾದನೆಯ ಮಾರ್ಗವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಎಡಿಜಿ ಹೇಳಿದ್ದಾರೆ. ಸಿಎಂ ಗೋರಖ್‌ಪುರದಲ್ಲಿರುವಾಗ ದೇವಸ್ಥಾನದಲ್ಲಿಯೇ ತಂಗುತ್ತಾರೆ ಎಂಬ ಕಾರಣಕ್ಕೆ ಗೋರಖ್‌ನಾಥ ದೇವಸ್ಥಾನಕ್ಕೆ ಅತ್ಯುನ್ನತ ಭದ್ರತೆ ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+