ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ 'ಬಚ್‌ಪನ್ ಕಾ ಪ್ಯಾರ್‌' ಹಾಡಿನ ಮೂಲಕ ಬಿಜೆಪಿ ಪ್ರಚಾರ

|
Google Oneindia Kannada News

ಭೋಜ್‌ಪುರಿ ರಾಪ್‌ಗೆ ದುರ್ಗಾ ಸ್ತುತಿ ಶ್ರೀಲಂಕಾದ ಮೆಲೋಡಿ ರಿಪ್-ಆಫ್: ಸಂಗೀತ, ಸಂದೇಶ ಮತ್ತು ಯುಪಿ ಚುನಾವಣಾ ಪ್ರಚಾರದ ಹಾಡುಗಳು

ಲಕ್ನೋ ಜನವರಿ 20: 'ಮನಿಕೆ ಮಗೆ ಹಿತೆ' ಹಾಡು ಕಿವಿಗೆ ಬೀಳುತ್ತಿದ್ದಂತೆ ಕೇಳುಗರು ಈ ಹಾಡಿಗೆ ಧ್ವನಿ ಗೂಡಿಸಲು ಶುರುಮಾಡುತ್ತಾರೆ. ಕೆಲ ದಿನಗಳ ಹಿಂದೆ ಸಂಗೀತ ಲೋಕದಲ್ಲಿ ಧೂಳೆಬ್ಬಿಸಿದ ಅತ್ಯಂತ ಜನಪ್ರಿಯ ಹಾಡು ಇದು. ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೆ ಮಗೆ ಹಿತೆ ಹಾಡು ನೆಟ್ಟಿಗರ ಫೇವರೇಟ್ ಹಾಡುಗಳಲ್ಲಿ ಒಂದು. ಇದೊಂದೇ ಯಾಕೆ ಬಾಲಕ ಸಹದೇವ್ ಡಿರ್ಡೊ ಹಾಡಿದ 'ಬಚ್‌ಪನ್‌ ಕಾ ಪ್ಯಾರ್' ಹಾಡಂತೂ ಸೋಷಿಯಲ್ ಮೀಡಿಯಾಗಳಾದ ಫೇಸ್ಬುಕ್ ಇನ್ಸ್ಟಾಗ್ರಾಮ್, ವಾಟ್ಸಾಪ್ ಎಲ್ಲಿಯೂ ಅದೇ ಹಾಡಗಳ ಸದ್ದು. ಅಷ್ಟಕ್ಕೂ ಈ ಹಾಡಿನ ವಿಚಾರ ಬಂದಿದ್ದೇಕೆ ಅಂದರೆ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶ್ರೀಲಂಕಾದ ಗಾಯಕ ಯೋಹಾನಿ ಅಥವಾ ಛತ್ತೀಸ್‌ಗಢದ ಬಾಲ ಕಲಾವಿದ ಸಹದೇವ್ ಡಿರ್ಡೊ ಮತ ಚಲಾಯಿಸುವುದಿಲ್ಲ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಮಾತ್ರ 'ಮನಿಕೆ ಮಗೆ ಹಿತೆ ಹಾಗೂ ಬಚ್ಬನ್ ಕಾ ಪ್ಯಾರ್' ಹಾಡುಗಳನ್ನು ತನ್ನ ಪ್ರಚಾರದ ಹಾಡುಗಳನ್ನಾಗಿ ಬದಲಾಯಿಸಿಕೊಂಡಿದೆ. ಜೊತೆಗೆ ತನ್ನ ಪರವಾಗಿ ಮತ ಹಾಕುವಂತೆ ಜನರ ಮೇಲೆ ಪ್ರಭಾವ ಬೀರುತ್ತಿದೆ.

ಕಳೆದ ವರ್ಷದ ಎರಡು ವೈರಲ್ ಹಿಟ್‌ ಹಾಡುಗಳಾದ 'ಮನಿಕೆ ಮಾಗೆ ಹಿತೆ ಮತ್ತು ಬಚ್‌ಪನ್ ಕಾ ಪ್ಯಾರ್‌ 'ಹಾಡಿನ ದಾಟಿಯಲ್ಲಿ ರಚಿಸಿದ ಹಾಡುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮತದಾರರನ್ನು ಓಲೈಸುತ್ತಿದೆ. ಇದಕ್ಕೆ ಬೇರೆ ಪಕ್ಷಗಳು ಹೊರತಾಗಿಲ್ಲ. ಬೇರೆ ಬೇರೆ ಪಕ್ಷಗಳು ಕೆಲ ವೈರಲ್ ಹಾಡುಗಳನ್ನ ಬಳಸಿಕೊಂಡು ಪಕ್ಷದ ಸಾಧನೆಗಳನ್ನ ಹೊಗಳುವ ಹಾಡನ್ನು ಕ್ರಿಯೇಟ್ ಮಾಡಿದರೆ ಇನ್ನೂ ಕೆಲವು ಬೇರೆಯದ್ದೇ ಹಾಡುಗಳನ್ನು ಕ್ರಿಯೇಟ್ ಮಾಡಿವೆ. ಕೋವಿಡ್-19 ಬೆದರಿಕೆಯ ಕಾರಣ ಚುನಾವಣಾ ಆಯೋಗವು ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳನ್ನು ನಿಷೇಧಿಸಿದೆ. ಚುನಾವಣೆಗೂ ಇನ್ನೂ ಕೆಲವೇ ದಿನಗಳ ಬಾಕಿ ಇವೆ. ಅಷ್ಟರಲ್ಲಿ ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳು ರಣತಂತ್ರವನ್ನು ರೂಪಿಸಿವೆ. ಪಕ್ಷಗಳು ಮತದಾರರನ್ನು ಓಲೈಸಲು ಇತರ ಎಲ್ಲಾ ವಿಧಾನಗಳಲ್ಲಿ ಪ್ರಯತ್ನಿಸುತ್ತಿವೆ. ಉತ್ತರಪ್ರದೇಶದಲ್ಲಿ ಪ್ರಬಲ ಮತ್ತು ಕಠಿಣ ಪೈಪೋಟಿ ನಡೆಸುವ ಬಿಜೆಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಹಾಡುಗಳ ಮೂಲಕ ಮತದಾರರನ್ನು ಸೆಳೆಯುವುದರಲ್ಲಿ ಮುಂಚುಣಿಯಲ್ಲಿವೆ.

ಬಿಜೆಪಿ

ಮನಿಕೆ ಮಾಗೆ ಹಿತೆ ಮತ್ತು ಬಚ್‌ಪನ್ ಕಾ ಪ್ಯಾರ್‌

Durga hymn to Bhojpuri rap to Sri Lankan melody rip-off: Music, message and more of UP poll campaign songs

ಉತ್ತರ ಪ್ರದೇಶದಲ್ಲಿ 'ಮನಿಕೆ ಮಾಗೆ ಹಿತೆ ಮತ್ತು ಬಚ್‌ಪನ್ ಕಾ ಪ್ಯಾರ್‌' ಹಾಡುಗಳು ಭಾರೀ ವೈರಲ್ ಆಗಿವೆ. ಈ ಹಾಡುಗಳನ್ನು ಪ್ರಚಾರಕ್ಕಾಗಿ ಬಿಜೆಪಿ ಬಳಸಿಕೊಂಡಿದೆ. ಬಾಲಕ ಸಹದೇವ್ ಡಿರ್ಡೊ ಹಾಡಿದ 'ಬಚ್‌ಪನ್‌ ಕಾ ಪ್ಯಾರ್' ವೈರಲ್ ಹಾಡನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಿಸಿಕೊಂಡಿದೆ. ಈ ಹಾಡಿನ ದಾಟಿಯಲ್ಲಿ ಹಾಡು ತಯಾರಾಗಿದ್ದು ಬಿಜೆಪಿ ಕಾರ್ಯವೈಖರಿಗಳನ್ನು ಹಾಡಿನಲ್ಲಿ ಸೇರಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂಬುದನ್ನು ಮರೆಯದೇ ಗಮನಹರಿಸಿ ಎಂದು ಹಾಡಿನಲ್ಲಿ ಮತದಾರರಿಗೆ ಮನವಿ ಮಾಡಲಾಗಿದೆ. AIIMS, ರೈತರಿಗೆ MSP, ರಸ್ತೆಗಳು, ವಿದ್ಯುದ್ದೀಕರಣ, ಉಚಿತ ಪಡಿತರ, ಉಚಿತ ವೈದ್ಯಕೀಯ ಚಿಕಿತ್ಸೆ, ಕುಶಿನಗರ ವಿಮಾನ ನಿಲ್ದಾಣ, ರಕ್ಷಣಾ ಕಾರಿಡಾರ್, ಇತ್ಯಾದಿ ವಿಷಯಗಳು ಹಾಡಿನಲ್ಲಿದೆ. ಜೊತೆಗೆ ಹಿಂದಿನ ಸರ್ಕಾರಗಳ 'ಮಾಫಿಯಾ ಆಡಳಿತ' ಮತ್ತು 'ಘೋರ್ ಬ್ರಷ್ಟಾಚಾರ'ವನ್ನು ಮರೆಯಬಾರದು ಎಂದು ಹೇಳಲಾಗಿದೆ.

ಇನ್ನೂ ಮನಿಕೆ ಮಾಗೆ ಹಿತೆ ಆಧಾರಿತ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ಒತ್ತಿಹೇಳುತ್ತವೆ. ಉಪ ಮುಖ್ಯಮಂತ್ರಿ ಸ್ವಾಮಿ ಪ್ರಸಾದ್ ಮೌರ್ಯ, ಯುಪಿ ಪಕ್ಷದ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಂತಹ ಇತರ ನಾಯಕರು ಸಹ ವೀಡಿಯೊಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

ಬಿಜೆಪಿಯಲ್ಲಿರುವ ಆಂತರಿಕ ಪ್ರತಿಭೆಗಳು - ಭೋಜ್‌ಪುರಿ ಗಾಯಕರಾದ ದಿನೇಶ್ ಲಾಲ್ ನಿರಾಹುವಾ, ರವಿ ಕಿಶನ್ ಮತ್ತು ಮನೋಜ್ ತಿವಾರಿ ತಲಾ ಒಂದು ಹಾಡನ್ನು ನೀಡಿದ್ದಾರೆ. ತಿವಾರಿಯವರ ಹಾಡು, ಭಗವ ರಂಗ್ ಚದ್ನೆ ಲಗಾ ಹೈ (ಕೇಸರಿ ಬಣ್ಣ ಹರಡುತ್ತಿದೆ), ಪ್ರಮುಖವಾಗಿ ಹಿಂದೂ ಧಾರ್ಮಿಕ ಸ್ಥಳಗಳಾದ ಕಾಶಿ, ಮಥುರಾ ಮತ್ತು ಅಯೋಧ್ಯೆಯ ಮೇಲೆ ಕೇಂದ್ರೀಕರಿಸುತ್ತದೆ. ಇನ್ನೊಂದು ಹಾಡಿನಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡ ಗಾಯಕ ನಿರಾಹುವಾ 'ಆಯೇಂಗೆ ತೌ ಯೋಗಿ ಹೈ (ಯೋಗಿ ಹಿಂತಿರುಗುವುದು ಖಚಿತ)' ಎಂದು ಹಾಡಿದ್ದಾರೆ.

Durga hymn to Bhojpuri rap to Sri Lankan melody rip-off: Music, message and more of UP poll campaign songs

ಸಮಾಜವಾದಿ ಪಕ್ಷ

'ಜಂತಾ ಪುಕಾರ್ತಿ ಹೈ, ಅಖಿಲೇಶ್ ಆಯಿಯೇ'

ಸಮಾಜವಾದಿ ಪಕ್ಷದ ಯೂಟ್ಯೂಬ್ ಪೇಜ್‌ನಲ್ಲಿ 'ಜಂತಾ ಪುಕಾರ್ತಿ ಹೈ, ಅಖಿಲೇಶ್ ಆಯಿಯೇ (ಜನರು ಕರೆಯುತ್ತಿದ್ದಾರೆ, ಅಖಿಲೇಶ್ ಬನ್ನಿ)' ಎನ್ನುವ ಹಾಡನ್ನು ಹಂಚಿಕೊಳ್ಳಲಾಗಿದೆ. ಈ ಹಾಡನ್ನು ಬಿಲಾಲ್ ಸಹರನ್‌ಪುರಿ ಬರೆದಿದ್ದಾರೆ ಮತ್ತು ಅಲ್ತಮಶ್ ಫರಿದಿ ಹಾಡಿದ್ದಾರೆ.

ಈ ಹಾಡು ಬಿಜೆಪಿಯ ಮೇಲೆ ದಾಳಿ ಮಾಡುವ ಬದಲು, ಅದು ಪ್ರಕಾಶಮಾನವಾದ ಮತ್ತು ಸುಂದರವಾದ ಎಲ್ಲ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಖುಷ್ಹಾಲಿ (ಸಂತೋಷ) ಮತ್ತು ವಿಕಾಸ್ (ಪ್ರಗತಿ), ಅಖಿಲೇಶ್ ಜೆಪಿ ಮತ್ತು ಲೋಹಿಯಾ ಅವರ ಪರಂಪರೆಯ ಉತ್ತರಾಧಿಕಾರಿ, ಲಕ್ನೋ ಮೆಟ್ರೋ, ಆಗ್ರಾ ಹೆದ್ದಾರಿ, ಗೋಮತಿ ನದಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.

ಹಣದುಬ್ಬರ, ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆ, ಬಿಜೆಪಿ ತಂದಿದೆ ಎಂದು ಹೇಳಲಾದ "ಲಾಶ್ (ಶವಗಳು) ಮತ್ತು ವಿನಾಶ (ವಿನಾಶ)" ಉಲ್ಲೇಖಗಳೊಂದಿಗೆ ಮತ್ತೊಂದು ಹಾಡು, 'ಹುಂಕಾರ (ಯುದ್ಧದ ಕೂಗು)' ಹೆಚ್ಚು ವೈರಲ್ ಆಗಿದೆ. 'ಏಕ್ ಬಾರ್ ಮುಜೆ ಫಿರ್ ದಿಲ್ ದೇ ದೋ, ಸಬ್ಕಾ ಪ್ಯಾರಾ ಅಖಿಲೇಶ್ ಹುನ್ ಮೈನ್ (ಮತ್ತೆ ನಿಮ್ಮ ಹೃದಯದಿಂದ ನನ್ನನ್ನು ನಂಬಿರಿ, ನಾನು ನಿಮ್ಮ ಪ್ರೀತಿಯ ಅಖಿಲೇಶ್)' ಎಂದು ಹೇಳುತ್ತದೆ.

ಕಾಂಗ್ರೆಸ್

'ಲಡ್ಕಿ ಹೂ ಲಡ್ ಸಕ್ತಿ ಹೂ'

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಧಿಕೃತ ಯೂಟ್ಯೂಬ್ ಪುಟದಲ್ಲಿ ಬಿಡುಗಡೆಯಾದ ಹಾಡು ಕಾಂಗ್ರೆಸ್‌ನ ಚುನಾವಣಾ ಕೂಗು, 'ಲಡ್ಕಿ ಹೂ ಲಡ್ ಸಕ್ತಿ ಹೂ (ನಾನು ಹುಡುಗಿ, ನಾನು ಹೋರಾಡಬಲ್ಲೆ)' ಅನ್ನು ಕೇಂದ್ರೀಕರಿಸಿದೆ. ಈ ಹಾಡು ದುರ್ಗಾ ದೇವಿಗೆ ಅರ್ಪಿತವಾದ ಐಗಿರಿ ನಂದಿನಿ ಸ್ತೋತ್ರದೊಂದಿಗೆ ಪ್ರಾರಂಭವಾಗುತ್ತದೆ. ವೀಡಿಯೊದಲ್ಲಿ ಗೋಚರಿಸುವ ಇಬ್ಬರು ರಾಜಕಾರಣಿಗಳು ಕೇವಲ ಆರಂಭದಲ್ಲಿ ಪ್ರಿಯಾಂಕಾ ಮತ್ತು ಮಹಿಳೆಯು ಮನೆಯನ್ನು ಮತ್ತು ದೇಶವನ್ನು ನಡೆಸಬಲ್ಲಳು ಎಂದು ಹೇಳುವ ಸಾಲುಗಳಲ್ಲಿ ಇಂದಿರಾ ಗಾಂಧಿ ಹೆಸರು ಕೇಳಿ ಬಂದಿದೆ. ಹಾಡಿನ ಉದ್ದಕ್ಕೂ ಹಿಂದೂ ಪೂಜಾ ವಿಧಿಗಳು ಸಾಗುತ್ತವೆ.

ಕಾಂಗ್ರೆಸ್ ಅನಧಿಕೃತ ಯೂಟ್ಯೂಬ್ ಪೇಜ್‌ನಲ್ಲಿ ಹಂಚಿಕೊಂಡಿರುವ ಮತ್ತೊಂದು ಹಾಡು, 'ಬೆಹೆನ್ ಪ್ರಿಯಾಂಕಾ ಆಯೇಂಗಿ, ಬಿಜೆಪಿ ತೋ ಜಾಯೇಗಿ (ಸಹೋದರಿ ಪ್ರಿಯಾಂಕಾ ಬರುತ್ತಾರೆ, ಬಿಜೆಪಿ ಹೋಗಬೇಕಾಗುತ್ತದೆ)', ಇದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರನ್ನು 'ಸಾರಥಿ' ಎಂದು ಉಲ್ಲೇಖಿಸುತ್ತದೆ.

ಬಿಎಸ್ಪಿ

'ಆ ರಹೀ ಹೈ ಸಬ್ಕಿ ಬೆಹೆನ್ಜಿ'

ಇಲ್ಲಿಯವರೆಗಿನ ಚುನಾವಣೆಯ ಓಟದಲ್ಲಿ ಬಿಎಸ್‌ಪಿ ವೇಗದಲ್ಲಿ. 'ಭೀಮ್ ಮ್ಯೂಸಿಕ್' ಎಂಬ ಯೂಟ್ಯೂಬ್ ಪುಟದಲ್ಲಿ ಪೋಸ್ಟ್ ಮಾಡಲಾದ ಪ್ರಚಾರ ಗೀತೆಯು 'ಆ ರಹೀ ಹೈ ಸಬ್ಕಿ ಬೆಹೆನ್ಜಿ (ಎಲ್ಲರ ಸಹೋದರಿ ಹಿಂತಿರುಗುತ್ತಿದ್ದಾರೆ)' ಎಂದು ಘೋಷಿಸುತ್ತದೆ. ಈ ಹಾಡು ಮಯಾವತಿ ಅವರನ್ನೊಳಗೊಂಡಿದೆ. ಯುಪಿಯಲ್ಲಿ ಸಾಕಷ್ಟು ಗುಂಡಗಾರ್ಡಿ (ಬೆದರಿಕೆ) ಮತ್ತು ದುರಾಚಾರ್ (ಕೆಟ್ಟ ನಡವಳಿಕೆ) ಇದೆ ಎಂದು ಹಾಡು ಹೇಳುತ್ತದೆ. ಕುತೂಹಲಕಾರಿಯಾಗಿ ಕೋಮುವಾದದ ಬಗ್ಗೆ ಒಂದು ಸಾಲಿನ ದೃಶ್ಯಗಳು ಪಿಎಂ ಮೋದಿ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಇಬ್ಬರನ್ನೂ ತೋರಿಸುತ್ತವೆ.

English summary
Neither Sri Lankan singer Yohani nor Chhattisgarh child artiste Sahdev Dirdo will vote in the upcoming Uttar Pradesh Assembly elections. But the BJP government in the state is hoping they can influence other people to vote in its favour, by setting its campaign songs to the tune of Manike Mage Hithe and Bachpan Ka Pyar, the two viral hits of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X