ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹೇಳಿದಂತೆ ಕೋರ್ಸ್ ಮಾಡಿದ್ರೂ ಸಾಲ ತೀರಿಸಲು ಕಿಡ್ನಿ ಮಾರಾಟ!

|
Google Oneindia Kannada News

ಲಕ್ನೋ, ಆಗಸ್ಟ್ 23: ಉತ್ತರಪ್ರದೇಶದ ಸಹರನ್‌ಪುರದ ಚತ್ತರ್ ಸಾಲಿ ನಿವಾಸಿ ರಾಮ್ ಕುಮಾರ್ ಅವರಿಗೆ ಇನ್ನು 30 ವರ್ಷ ವಯಸ್ಸು. ಹೈನುಗಾರಿಕೆ ನಿರತ ರಾಮ್ ಕುಮಾರ್ ಅವರಿಗೆ ಸಾಲ ತೀರಿಸಲು ಸಾಧ್ಯವಾಗದ ಕಾರಣ ತಮ್ಮ ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.

ಹೈನುಗಾರಿಕೆಯಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆಯಿಟ್ಟುಕೊಂಡಿದ್ದವರು. ಪ್ರಧಾನಿ ಮೋದಿ ಅವರ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಮಾರು ಹೋಗಿ ಕೋರ್ಸಿಗೆ ಸೇರಿಕೊಂಡಿದ್ದರು. ಕೌಶಲ್ಯ ಪಡೆದು ಹೈನುಗಾರಿಕೆಯಲ್ಲಿ ಪ್ರಮಾಣ ಪತ್ರವನ್ನು ಪಡೆದುಕೊಂಡರು.

ದಾವಣಗೆರೆಯ ಈ ರೈತನಿಗೆ ಸಿಹಿಯಾಯಿತು ದಾವಣಗೆರೆಯ ಈ ರೈತನಿಗೆ ಸಿಹಿಯಾಯಿತು "ಮಗಧೀರ ಮೆಣಸಿನಕಾಯಿ"

ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನಾ(PMKVY) ಸರ್ಟಿಫಿಕೆಟ್ ಹಿಡಿದುಕೊಂಡು, ಬ್ಯಾಂಕ್ ಮುಂದಿಟ್ಟು ಸಾಲ ಕೇಳಿದ್ದಾರೆ. ಆದರೆ, ಯಾವುದೇ ಬ್ಯಾಂಕಿನಿಂದ ಸಾಲ ಸಿಕ್ಕಿಲ್ಲ. ಇದರಿಂದ ರಾಮ್ ಕುಮಾರ್ ಕಂಗಾಲಾಗಿದ್ದಾರೆ.

Denied Loan By Government Banks, UP Farmer Puts Up Kidney For Sale

ಹಸು ಹಾಗೂ ಕೊಟ್ಟಿಗೆ ನಿರ್ಮಾಣಕ್ಕಾಗಿ ಸಂಬಂಧಿಕ ಬಳಿ ಸಾಲ ಮಾಡಿದ್ದರು. ಆದರೆ, ಸಾಲದ ಅಸಲು, ಬಡ್ಡಿ ತೀರಿಸಲು ಆಗಲಿಲ್ಲ, ಹೀಗಾಗಿ, ಬ್ಯಾಂಕಿನಿಂದ ಸಾಲ ಪಡೆಯಲು ಮತ್ತೊಮ್ಮೆ ಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ವಿಧಿಯಿಲ್ಲದೆ, ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ. ಕಿಡ್ನಿ ಮಾರಾಟಕ್ಕಿದೆ ಎಂಬ ಪೋಸ್ಟರ್ ಗಳನ್ನು ಹಾಕಿದ್ದಾರೆ.

ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿ ಅಡಿಕೆ, ತೆಂಗು ಬೆಳೆಗಾರರ ಬದುಕು- ಬವಣೆ ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿ ಅಡಿಕೆ, ತೆಂಗು ಬೆಳೆಗಾರರ ಬದುಕು- ಬವಣೆ

ಈ ಬಗ್ಗೆ ಸಹರನಪುರ್ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಅವರನ್ನು ಪಿಟಿಐ ಸುದ್ದಿ ಸಂಸ್ಥೆ ಪ್ರತಿನಿಧಿ ಸಂಪರ್ಕಿಸಿ, ಪ್ರತಿಕ್ರಿಯೆ ಕೇಳಿದ್ದಾರೆ. "ಈ ಬಗ್ಗೆ ನನಗೆ ಇನ್ನೂ ತಿಳಿದಿಲ್ಲ, ಈ ಬಗ್ಗೆ ತನಿಖೆ ನಡೆಸಲಾಗುವುದು, ಆ ರೈತನಿಗೆ ಸಾಲ ಪಡೆಯಲು ಸೂಕ್ತ ಅರ್ಹತೆ ಇದ್ದರೆ ಸಾಲ ನೀಡಬೇಕಾಗುತ್ತದೆ. ಸಾಲ ನೀಡದಿರಲು ಏನು ಕಾರಣ ಎಂಬುದನ್ನು ಮೊದಲು ತಿಳಿದುಕೊಳ್ಳಲಾಗುವುದು ಎಂದಿದ್ದಾರೆ.

English summary
Distressed over mounting debt, a 30-year-old farmer has put up posters here seeking buyers for one of his kidneys after government banks allegedly turned down his loan requests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X