ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ ಯೋಗಿ ಆದಿತ್ಯನಾಥ್
ಅಯೋಧ್ಯೆ, ಅಕ್ಟೋಬರ್ 29: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಬಾರಿಯ ದೀಪಾವಳಿಯಲ್ಲಿ ಅಯೋಧ್ಯೆಯಲ್ಲಿ ಆಚರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.
ವಿವಾದದ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಒಬ್ಬರು ಧಾರ್ಮಿಕ ಆಚರಣೆಗೆ ಇಳಿದಿರುವುದು ಇದೇ ಮೊದಲು ಎನ್ನಲಾಗಿದೆ. ಈ ಹಿಂದೆ ಅಂತಹಾ ಪ್ರಯತ್ನಗಳಾಗಿದ್ದರೂ ಸಹ ಮುಖ್ಯಮಂತ್ರಿ ಒಬ್ಬರು ಅಯೋಧ್ಯೆಯಲ್ಲಿ ಧಾರ್ಮಿಕ ಆಚರಣೆ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಅಲ್ಲದೆ, ಸರಯೂ ನದಿಯ ದಡದಲ್ಲಿ ದೀಪಾವಳಿ ಪ್ರಯುಕ್ತ ದೀಪೋತ್ಸವ ಆಯೋಜಿಸಲಾಗುತ್ತಿದ್ದು, ಯೋಗಿ ಆದಿತ್ಯನಾಥ ಅವರು ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಾವಳಿ ಆಚರಿಸಲಿದ್ದಾರೆ.

ಅಯೋಧ್ಯೆ ದೀಪಾವಳಿ ಎಂದು ಈ ಬಾರಿಯ ದೀಪಾವಳಿಗೆ ನಾಮಕರಣವನ್ನೂ ಯೋಗಿ ಸರ್ಕಾರ ಮಾಡಿದೆ. ರಾಜ್ಯದಾದ್ಯಂತ ಅದ್ದೂರಿಯಾಗಿ ದೀಪಾವಳಿಯಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ನಡೆದಿದೆ.
ಆದರೆ ಯೋಗಿ ಅವರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಅಸಮ್ಮತಿ ಸೂಚಿಸಿವೆ. ಯೋಗಿ ಅವರ ಈ ನಿಲವು ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಮುಂಬರುವ ಲೋಕಸಭೆ ಚುನಾವಣಾ ಸ್ಟಂಟ್ ಎಂದೂ ಸಹ ಕೆಲವರು ಟೀಕಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ ಅವರು, ಈ ವಿಷಯವನ್ನು ಯಾರೂ ಸಹ ರಾಜಕೀಯಗೊಳಿಸಬರಾದು ಎಂದಿದ್ದಾರೆ. ಅಷ್ಟೆ ಅಲ್ಲದೆ ರಾಮಮಂದಿರ ಈ ಬಾರಿಯ ಚುನಾವಣೆಯ ವಿಷಯ ಅಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications