ಉತ್ತರ ಪ್ರದೇಶದ ಕೈರಾನಾದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಇವಿಎಂ ಯಂತ್ರ ಪತ್ತೆ

ಲಕ್ನೋ ಫೆಬ್ರವರಿ 11: ಉತ್ತರ ಪ್ರದೇಶದ ಕೈರಾನಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಇವಿಎಂ ಯಂತ್ರವೊಂದು ಪತ್ತೆಯಾಗಿದೆ. ಗುರುವಾರ ನಡೆದ ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಯ ಮತದಾನ ನಡೆದ 58 ವಿಧಾನಸಭಾ ಕ್ಷೇತ್ರಗಳಲ್ಲಿ ಕೈರಾನಾ ಕೂಡ ಒಂದಾಗಿದೆ.

ಇವಿಎಂ ಯಂತ್ರ ಪತ್ತೆಯಾದ ಕಾರಿನ ಮೇಲೆ ಜೋನಲ್ ಮ್ಯಾಜಿಸ್ಟ್ರೇಟ್-ಕೈರಾನಾ ಕ್ಷೇತ್ರದ ಸ್ಟಿಕ್ಕರ್ ಅಂಟಿಸಲಾಗಿದೆ. ಸ್ಥಳೀಯ ಎಸ್‌ಡಿಎಂ ಜೊತೆಗಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ಶಾಮ್ಲಿ-ಪಾಣಿಪತ್ ಹೆದ್ದಾರಿಯಲ್ಲಿ ಈ ಕಾರು ಪತ್ತೆಯಾಗಿದೆ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ಕಾರಿನಲ್ಲಿ ಹಾಗೆ ಬಿಟ್ಟು ಹೋಗಿರುವ ಇವಿಎಂ ಯಂತ್ರವನ್ನು ಪತ್ತೆ ಮಾಡಿದ ನಂತರದಲ್ಲಿ ಜಿಲ್ಲಾಧಿಕಾರಿಗಳ ಎದುರು ಇವಿಎಂ ತೆರೆಯಲಾಗಿದ್ದು, ಚುನಾವಣಾ ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

 Abandoned EVM machine found in car without number plate in Kairana after 1st Phase Voting in UP

ಮೊದಲ ಹಂತದಲ್ಲಿ ಶೇ.60.17ರಷ್ಟು ಮತದಾನ:

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಗುರುವಾರ ಮೊದಲ ಹಂತದ ಮತದಾನ ನಡೆಯಿತು. ಮೊದಲ ಹಂತದಲ್ಲಿ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಒಟ್ಟು ಶೇ.60.17ರಷ್ಟು ಮತದಾನವಾಗಿದೆ. ಈ ಚುನಾವಣೆಯನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸಲಾಗಿದ್ದು, ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಅಜಯ್ ಕುಮಾರ್ ಶುಕ್ಲಾ ಹೇಳಿದ್ದಾರೆ.

ಇನ್ನೂ ಆಗ್ರಾದಲ್ಲಿ - ಶೇ 60.23, ಅಲಿಗಢದಲ್ಲಿ ಶೇ 60.49, ಬಾಗ್ಪತ್ - ಶೇ61.25, ಬುಲಂದ್‌ಶಹರ್ - ಶೇ 60.57, ಗೌತಮ್ ಬುಧ್ ನಗರ - ಶೇ54.38, ಗಾಜಿಯಾಬಾದ್ - ಶೇ52.43, ಹಾಪುರ್ - ಶೇ60.53, ಮಥುರಾ - ಶೇ62.90, ಮೀರತ್ - ಶೇ60, ಮುಜಾಫರ್‌ನಗರ - ಶೇ65.32, ಶಾಮ್ಲಿ - ಶೇ 66.14ರಷ್ಟು ಮತದಾನವಾಗಿದೆ.

ಮೊದಲ ಹಂತದಲ್ಲಿ ಕೆಲವೆಡೆ ಇವಿಎಂ ಅಸಮರ್ಪಕ ಕಾರ್ಯವೂ ಮತದಾರರಿಗೆ ತೊಂದರೆ ಉಂಟು ಮಾಡಿತು. ವಿವಿಧ ಜಿಲ್ಲೆಗಳ ಹಲವು ಬೂತ್‌ಗಳಲ್ಲಿ ಇವಿಎಂಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಿದ್ದರಿಂದ ಮತದಾರರು ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ಮೀರತ್, ಮುಜಾಫರ್‌ನಗರ, ಕೈರಾನಾ ಮತ್ತು ಇತರ ಹಲವು ಸ್ಥಳಗಳಿಂದ ಇವಿಎಂ ದೂರುಗಳು ಕೇಳಿ ಬಂದಿದ್ದವು.

ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ:

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಗುರುವಾರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ 11 ಜಿಲ್ಲೆಗಳ ಒಟ್ಟು 58 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಗಾಜಿಯಾಬಾದ್, ಬುಲಂದ್‌ಶಹರ್, ಅಲಿಗಢ, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಖೈರಗಢ್, ಫತೇಹಾಬಾದ್, ಆಗ್ರಾ ಸೌತ್, ಬಹ್, ಛತ್ರ, ಮಥುರಾ, ಸರ್ಧಾನ, ಮೀರತ್ ನಗರ, ಛಪ್ರೌಲಿ, ಬರೌತ್, ಬಾಗ್ಪತ್ ಮತ್ತು ಕೈರಾನಾ ಸೀಟುಗಳನ್ನು ಸೂಕ್ಷ್ಮ ಪ್ರದೇಶಗಳಾಗಿವೆ.

ಮೊದಲ ಹಂತದಲ್ಲಿ 623 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ. ಮೊದಲ ಹಂತದಲ್ಲಿ ಯೋಗಿ ಸರ್ಕಾರದ 9 ಸಚಿವರು ಕಣದಲ್ಲಿದ್ದು, ಗುರುವಾರ ಮತ ಚಲಾವಣೆಯಾದ 58 ಕ್ಷೇತ್ರಗಳ ಪೈಕಿ 2017ರಲ್ಲಿ ಬಿಜೆಪಿ 53ರಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟ ಕೂಡ ಈ ಚುನಾವಣೆಯಲ್ಲಿ ಭಾರಿ ಬಲದೊಂದಿಗೆ ಕಣಕ್ಕಿಳಿದಿದೆ. ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಕೂಡ ಕಣದಲ್ಲಿವೆ. ಮೊದಲ ಹಂತದಲ್ಲಿ ಬಿಜೆಪಿ, ಎಸ್‌ಪಿ-ಆರ್‌ಎಲ್‌ಡಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+