ಮದುವೆ ಮರುದಿನವೇ ನವವಧುವಿನ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ, ಜನವರಿ.20: ಉತ್ತರ ಪ್ರದೇಶದಲ್ಲಿ ಮದುವೆ ಮರುದಿನವೇ ನವವಧುವನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಹಾಪೂರ್ ಜಿಲ್ಲೆಯ ದೆಹತ್ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜನವರಿ.17ರ ಶುಕ್ರವಾರ ವಿವಾಹವಾಗಿದ್ದ 20 ವರ್ಷದ ಮಹಿಳೆಯನ್ನು ಮರುದಿನ ಎಂದರೆ ಜನವರಿ.18ರ ಶನಿವಾರ ಅಪಹರಿಸಲಾಗಿತ್ತು. ಈ ಬಗ್ಗೆ ಸಂಬಂಧಿಕರು ಹಫೀಜ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಮಹಿಳೆಯನ್ನು ಅಪಹರಿಸಿದ ಇಬ್ಬರು ಅಪರಿಚಿತರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದು, ಮಾನಸಿಕ ಪ್ರಜ್ಞೆಯನ್ನು ಕಳೆದುಕೊಂಡ ಮಹಿಳೆ ಎರಡು ದಿನಗಳ ಬಳಿಕ ಎಂದರೆ ಜನವರಿ.19ರಂದು ದೆಹತ್ ಪ್ರದೇಶದಲ್ಲಿ ಪತ್ತೆಯಾಗಿದ್ದಾಳೆ.

20 Years Old-Women Gang Raped In Uttar Pradesh

ಹಾಪೂರ್ ಠಾಣೆ ವ್ಯಾಪ್ತಿಯಲ್ಲಿ ಎಫ್ಐಆರ್:

20 ವರ್ಷದ ಮಹಿಳೆ ಅಪಹರಣ ಸಂಬಂಧ ಹಾಪೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದು, ಆರೋಪಿ ಬಂಧನ ಹಾಗೂ ಸಾಕ್ಷಿ ಸಂಗ್ರಹಿಸಲಾಗುತ್ತಿದೆ ಎಂದು ಹಾಪೂರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಮಿಶ್ರಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+