Breaking: ವಿಜಯ್ ಮಲ್ಯರನ್ನು ಲಂಡನ್‌ನ ಮನೆಯಿಂದ ಹೊರಹಾಕಲು ಯುಕೆ ಕೋರ್ಟ್ ಆದೇಶ
ಲಂಡನ್, ಜನವರಿ 18: ಭಾರತೀಯ ಬ್ಯಾಂಕುಗಳಿಗೆ ಪಂಗನಾಮ ಹಾಕಿ ವಿದೇಶಕ್ಕೆ ಓಡಿ ಹೋಗಿರುವ ಮದ್ಯದ ದೊರೆ ವಿಜಯ್ ಮಲ್ಯರಿಗೆ ಯುಕೆ ಕೋರ್ಟ್ ಹೊಸ ಆಘಾತ ನೀಡಿದೆ. ಲಂಡನ್ ನಿವಾಸದಿಂದ ವಿಜಯ್ ಮಲ್ಯ ಹಾಗೂ ಇಡೀ ಕುಟುಂಬವನ್ನು ಹೊರ ಬಾಕುವಂತೆ ಕೋರ್ಟ್ ಘೋಷಿಸಿದೆ ಎಂದು ವರದಿಯಾಗಿದೆ.
ಮಲ್ಯ ನೆಚ್ಚಿನ ಆಸ್ತಿ ಕೊನೆಗೂ ಮಾರಾಟ, ಕಿಂಗ್ ಫಿಷರ್ ಹೌಸ್ ಸೋಲ್ಡ್
ಮದ್ಯದ ದೊರೆ ವಿಜಯ್ ಮಲ್ಯ ಸಂಪೂರ್ಣ ದಿವಾಳಿ ಆಗಿದ್ದಾರೆ ಎಂದು ಈ ಹಿಂದೆ ಇದೇ ಯುನೈಟೆಡ್ ಕಿಂಗ್‌ಡಮ್ ಕೋರ್ಟ್ ಘೋಷಿಸಿತ್ತು. ಅಂದು ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಪಾವತಿಸಿದ ಸಾಲಗಳಿಂದ ಸಾಲವನ್ನು ವಸೂಲಿ ಮಾಡುವ ಪ್ರಕರಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಗೆದ್ದುಕೊಂಡಿತ್ತು.
ಭಾರತೀಯ ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 8441.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಗೆ ಜಾರಿ ನಿರ್ದೇಶನಾಲಯವು ವರ್ಗಾಯಿಸಿತ್ತು.
ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಸಾಲ ಪಡೆದು ವಂಚಿಸಲಾಗಿದೆ. ಮೂವರು ಉದ್ಯಮಿ ಮಾಡಿರುವ ವಂಚನೆಯಿಂದಾಗಿ ಬ್ಯಾಂಕ್ಗಳಿಗೆ 22,586 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಸಾಲ ಮರುಪಾವತಿ:
ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಜೂನ್ 25ರೊಳಗೆ ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಪಡೆಯುವ ಬಗ್ಗೆ ನಿರೀಕ್ಷಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ಷೇರುಗಳನ್ನು ಮಾರಾಟ ಮೂಲಕ 1357 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಿಕೊಂಡಿವೆ.
ಸಾಲ ವಸೂಲಾತಿ ನ್ಯಾಯಾಧಿಕರಣ (DRT) ನಡೆಸಿಕೊಟ್ಟ ಹರಾಜಿನಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ಮೂಲದ ಸ್ಯಾಟ್ರನ್ ರಿಯಲ್ಟರ್ಸ್ ಸಂಸ್ಥೆ ಮುಂಬೈನ ಐಷಾರಾಮಿ ಬಡಾವಣೆಯಲ್ಲಿರುವ ಕಿಂಗ್ ಫಿಷರ್ ಹೌಸ್ ಬಂಗಲೆಯನ್ನು 52.25 ಕೋಟಿ ರು ಗೆ ಖರೀದಿಸಿದೆ. ದಿವಾಳಿಯಾಗಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಕೇಂದ್ರ ಕಚೇರಿಯನ್ನು ಇದೇ ಕಿಂಗ್ ಫಿಷರ್ ಹೌಸ್ ಹೊಂದಿತ್ತು.
ಸುಸ್ತಿದಾರನಾಗಿ ದೇಶಭ್ರಷ್ಟ ಎನಿಸಿಕೊಂಡಿರುವ ಮಲ್ಯ ಅವರ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ ಸಿಕ್ಕ ಬಳಿಕ ಸರಿ ಸುಮಾರು 9 ಬಾರಿ ಈ ಹೌಸ್ ಹರಾಜಿಗೆ ಬಂದಿತ್ತು. ಆದರೆ, ಮಾರಾಟವಾಗಿರಲಿಲ್ಲ. ರಿಸರ್ವ್ಡ್ ಬೆಲೆ 135 ಕೋಟಿ ರು ಗಿಂತ ಕಡಿಮೆ ಬೆಲೆಗೆ 52.25 ಕೋಟಿ ರೂಪಾಯಿಗೆ ಮಾರಾಟವಾಗಿದೆ.