1 ಪಿಂಟ್ ಬಿಯರ್ ಗೆ 99 ಸಾವಿರ ಡಾಲರ್ ಬಿಲ್, ಹೌಹಾರಿದ ಪತ್ರಕರ್ತ!

ಲಂಡನ್, ಸೆ. 08: ಒಂದು ಪಿಂಟ್ ಬಿಯರ್ ಬೆಲೆ ಎಷ್ಟಿರಬಹುದು ಅಬ್ಬಬ್ಬಾ ಅಂದ್ರೂ ಸಾವಿರ ರುಪಾಯಿ ಕೊಟ್ಟಿರಬಹುದು. ಆದರೆ ಇಲ್ಲೊಬ್ಬ ಪತ್ರಕರ್ತ ಒಂದು ಪಿಂಟ್ ಬಿಯರ್ ಗೆ ಬರೋಬ್ಬರಿ 99 ಸಾವಿರ ಡಾಲರ್ ಹಣ ತೆತ್ತಿದ್ದಾನೆ.

Recommended Video

      ಏಪ್ರಿಲ್ 1, 2018 ರಿಂದ ಮದ್ಯ ಮತ್ತಷ್ಟು ದುಬಾರಿ | Oneindia Kannada

      ಕುಡಿದ ಮತ್ತಿನಲ್ಲೋ, ನಿರ್ಲಕ್ಷ್ಯದಿಂದಲೋ ಆಸ್ಟ್ರೇಲಿಯಾದ ಪತ್ರಕರ್ತ ಪೀಟರ್ ಲಾಲೊರ್ ಎಂಬಾತ ಮ್ಯಾಂಚೆಸ್ಟರ್ ನ ಬಾರ್ ವೊಂದರಲ್ಲಿ ಒಂದು ಪಿಂಟ್ ಬಿಯರ್ ಗೆ 99,983.64 ಯುಎಸ್ ಡಾಲರ್ ತೆತ್ತಿದ್ದಾರೆ.

      This Journalist ended up paying Rs 73 Lakh bill for a pint of Beer in Manchester

      ಆಸ್ಟ್ರೇಲಿಯಾದ ಕ್ರಿಕೆಟ್ ಜರ್ನಲಿಸ್ಟ್ ಲಾಲೊರ್ ಅವರು ಮಾಲ್ ಮೈಸನ್ ಎಂಬ ಹೋಟೆಲ್ ಬಾರ್ ವೊಂದರಲ್ಲಿ ಪಿಂಟ್ (ಸುಮಾರು 568 ಎಂಎಲ್) ಬಿಯರ್ ಗೆ ಆರ್ಡರ್ ಮಾಡಿದ್ದಾರೆ. ಬಿಲ್ ಕಟ್ಟುವಾಗ ಮೊತ್ತ ನೋಡಿಲ್ಲ, ಕಾರ್ಡ್ ಕೊಟ್ಟಿದ್ದಾರೆ.

      ಆಷ್ಯಸ್ ಸರಣಿ ಕ್ರಿಕೆಟ್ ಕವರೇಜ್ ಗಾಗಿ ಬಂದಿರುವ ಲಾಲೊರ್ ಅವರು ತಮ್ಮ ಖಾತೆಯಿಂದ 99,983.64 ಯುಎಸ್ ಡಾಲರ್ (ಸುಮಾರು 73 ಲಕ್ಷ ರು) ಕಟ್ ಆಗಿದ್ದು ನೋಡಿ ಗಾಬರಿಯಾಗಿದ್ದಾರೆ.

      ನಂತರ ಅಲ್ಲಿ ನಡೆದ ಘಟನೆಯನ್ನು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಅಮೆರಿಕನ್ ಕ್ರಾಫ್ಟ್ ಬಿಯರ್ ಅಥವಾ ಯುರೋ ಲಾಜರ್ ಅಲ್ಲದ ಬೇರೆ ಬ್ರ್ಯಾಂಡ್ ಬಿಯರ್ ಇದ್ದರೆ ಕೊಡಲು ಹೇಳಿದೆ, ಆದರೆ, ಆತ ಕೊಟ್ಟ ಬಿಯರ್ ಅತ್ಯಂತ ದುಬಾರಿ ಬ್ರಿಟಿಷ್ ಬಿಯರ್ ಎಂಬುದು ಈಗ ಗೊತ್ತಾಗಿದೆ.

      ಅಷ್ಟು ದೊಡ್ಡ ಮೊತ್ತ ಹೇಗೆ ಕಟ್ ಆಗಲು ಸಾಧ್ಯ ವೀಸಾ ಹಾಗೂ ಬ್ಯಾಂಕ್ ಅನುಮತಿ ಇಲ್ಲದೆ ಹೇಗೆ ಸಾಧ್ಯ? ರೀಫಂಡ್ ಸಿಕ್ಕರೂ ಟ್ರಾನ್ಸಾಕ್ಷನ್ ಫೀ ಮಾತ್ರ ಬಂದಿದೆ. ಸದ್ಯಕ್ಕಂತೂ ನನ್ನ ಮೊತ್ತ ಸಿಗುವುದೋ ಇಲ್ಲವೋ 9 ದಿನಗಳ ಕಾಲ ಕಾಯಬೇಕಿದೆ ಎಂದು ಕಥೆ ಬರೆದುಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+